Dandeli| ಮೀಟರ್ ಬಡ್ಡಿದಂಧೆ ದಾಂಡೇಲಿಯಲ್ಲಿ ಓರ್ವನ ಬಂಧನ
Dandeli:- ಅಕ್ರಮ ಮೀಟರ್ ಬಡ್ಡಿದಂಧೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇದ್ದು ಇದೀಗ ಪೊಲೀಸ್ ಇಲಾಖೆ ಇಂತವರ ವಿರುದ್ಧ ಕಾರ್ಯಾಚರಣೆಗಿಳಿದಿದೆ.
ಇದರ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ (Dandeli) ನಗರದ ಗಾಂಧಿನಗರ ಆಶ್ರಯ ಕಾಲೋನಿಯ ರಿಯಾಜ್ ಅಲಿಯಾಜ್ ಶೇರಖಾನ( 32) ಎಂಬಾತನನ್ನು ಬಂಧಿಸಿದ್ದಾರೆ
Dandeli-joida -ಪ್ರತ್ತೇಕ ಅಪಘಾತ ಅತೀ ವೇಗ ತಂತು ಪ್ರಾಣಕ್ಕೆ ಕುತ್ತು!
ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀದೇವಿ ಕಟ್ಟಿಮುನಿ ರವರ ದೂರಿನ ಆಧಾರದಲ್ಲಿ ದಾಂಡೇಲಿ ಪೊಲೀಸರ ತಂಡ ನಿನ್ನೆದಿನ ದಾಳಿ ನಡೆಸಿದಾಗ ರಿಯಾಜ್ ಅಲಿಯಾಜ್ ಶೇರಖಾನ್ ಎಂಬಾತನ ಮನೆಯಲ್ಲಿ ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂದಿಸಿದ ವಿವಿಧ ಬ್ಯಾಂಕ್ ಖಾತೆಯ ಸಹಿ ಇರುವ ಖಾಲಿ ಚೆಕ್‌ಗಳು 14 ಹಾಗೂ ಇತರೇ ಪ್ರಶ್ನಾತೀತ ದಾಖಲೆಗಳು ಹಾಗೂ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದ ನೋಟ್ ಪುಸ್ತಕ ಇವುಗಳನ್ನು ಆಪಾದಿತನು ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂದಿಸಿದಂತೆ ಕಂಡು ಬಂದಿದ್ದು ಆಪಾದಿತನು ಮೀಟರ್ ಬಡ್ಡಿ ವ್ಯವಹಾರವನ್ನೆ ಉದ್ಯೋಗವನ್ನಾಗಿ ಮಾಡಿಕೊಂಡು ಯಾವದೇ ರೀತಿಯ ಲೈಸೆನ್ಸ್ ಪಡೆಯದೇ, ಮಿತಿಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಿರುವ ಬಗ್ಗೆ ಕಂಡುಬಂದಿದ್ದು, ರಿಯಾಜ ತಂದೆ ಇಬ್ರಾಹಿಂ ಅಂಬೂವಾಲೆ @ ಶೇರಖಾನ ಪ್ರಾಯ 32 ವರ್ಷ ಈತನ ಮನೆಯಲ್ಲಿ ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂದಿಸಿದ ದಾಖಲಾತಿಗಳು ಸಿಕ್ಕಿದ್ದರಿಂದ ಸದರಿಯವರ ಮೇಲೆ ಕಾನೂನು ರಿತ್ಯಾ ಕ್ರಮ ಕೈಗೊಳ್ಳಲಾಗಿದೆ.
Dandeli-joida -ಪ್ರತ್ತೇಕ ಅಪಘಾತ ಅತೀ ವೇಗ ತಂತು ಪ್ರಾಣಕ್ಕೆ ಕುತ್ತು!
ಚಾಲಕನಾಗಿರುವ ಈತ ಮೀಟರ್ ಬಡ್ಡಿಗೆ ಹಣವನ್ನು ನೀಡಿ ಅಧಿಕ ಮೊತ್ತ ಬಡ್ಡಿ ಪಡೆಯುತಿದ್ದನು.ಇದಲ್ಲದೇ ಈತ ಕೆಲವು ಕೃತ್ಯಗಳಲ್ಲೂ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು ಈತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
