Medicover Hospitals ಉದ್ಘಾಟನೆ -ವಿಶೇಷವೇನು ಇಲ್ಲಿದೆ ನೋಡಿ.
ತಾಯಂದಿರ ದಿನಾಚರಣೆಯಂದು ಬೆಂಗಳೂರಿನಲ್ಲಿ ಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಗೊಂಡಿದೆ.
100 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆಯನ್ನು ಖ್ಯಾತ ನಟಿ ರುಕ್ಮಿಣಿ ವಸಂತ ಉದ್ಘಾಟಿಸಿದರು, ಲೆವೆಲ್-III NICU, PICU, Maternal ICU, ಫೀಟಲ್ ಮೆಡಿಸಿನ್, ರೋಬೋಟಿಕ್ ಗೈನಕಾಲಜಿ ಶಸ್ತ್ರಚಿಕಿತ್ಸೆ ಹಾಗೂ 24×7 ಮಕ್ಕಳ ತುರ್ತು ಚಿಕಿತ್ಸಾ ಸೇವೆಗಳು ಒಂದೇ ಸೂರಿನಡಿ ಲಭ್ಯವಿರಲಿದೆ.

ಬೆಂಗಳೂರು. ಮೇ 10, 2026: Medicover Hospitals ಇಂದು ವೈಟ್‌ಫೀಲ್ಡ್‌ನ ಹೂಡಿ ಜಂಕ್ಷನ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ವಿಶೇಷವಾಗಿ ರೂಪಿಸಲಾದ 100 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆಯನ್ನು ಉದ್ಘಾಟಿಸಿತು. ಪೂರ್ವ ಬೆಂಗಳೂರಿನ ತಾಯಿ-ಮಗು ಆರೋಗ್ಯ ಸೇವೆಗಳಿಗೆ ಸಮಗ್ರ ಮತ್ತು ಉನ್ನತ ಮಟ್ಟದ ಚಿಕಿತ್ಸಾ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಈ ಆಸ್ಪತ್ರೆಯನ್ನು ಆರಂಭಿಸಲಾಗಿದೆ.
ತಾಯಂದಿರ ದಿನಾಚರಣೆಯ ಅಂಗವಾಗಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಕನ್ನಡ ಹಾಗೂ ಬಹುಭಾಷಾ ಚಿತ್ರ ನಟಿ ರುಕ್ಮಿಣಿ ವಸಂತರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಆಸ್ಪತ್ರೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮೆಡಿಕವರ್ ಸಂಸ್ಥೆಯ ಚೇರಮನ್ ಅನೀಲ್ ಕೃಷ್ಣ, CEO ಹರಿಕೃಷ್ಣ, ಅಧಿಕಾರಿಗಳು, ವೈದ್ಯಕೀಯ ತಜ್ಞರು ಹಾಗೂ ಆಹ್ವಾನಿತ ಗಣ್ಯರು ಉಪಸ್ಥಿತರಿದ್ದರು.

ಕಳೆದೊಂದು ದಶಕದಲ್ಲಿ ವೈಟ್‌ಫೀಲ್ಡ್, ಹೂಡಿ, ವರ್ತೂರು, ಐಟಿಪಿಎಲ್ ಕಾರಿಡಾರ್, ಕೆ.ಆರ್.ಪುರಂ ಸೇರಿದಂತೆ ಪೂರ್ವ ಬೆಂಗಳೂರಿನ ಪ್ರದೇಶಗಳಲ್ಲಿ ವೇಗವಾದ ವಸತಿ ಮತ್ತು ವಾಣಿಜ್ಯ ಅಭಿವೃದ್ಧಿ ಕಂಡುಬಂದಿದ್ದು, ಸಮಗ್ರ ತಾಯಿ-ಮಗು ಆರೋಗ್ಯ ಸೇವೆಗಳ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆ ಗರ್ಭಧಾರಣೆ, ಫೀಟಲ್ ಮೆಡಿಸಿನ್, ನವಜಾತ ಶಿಶು ತೀವ್ರ ನಿಗಾ, ಮಕ್ಕಳ ತುರ್ತು ಚಿಕಿತ್ಸೆ ಹಾಗೂ ಪೀಡಿಯಾಟ್ರಿಕ್ ಕ್ರಿಟಿಕಲ್ ಕೇರ್ ಸೇವೆಗಳನ್ನು ಒಂದೇ ಸೂರಿನಡಿ ಚಿಕಿತ್ಸಾ ವ್ಯವಸ್ಥೆ ಒದಗಿಸುವ ಉದ್ದೇಶದಿಂದ ಈ ಆಸ್ಪತ್ರೆಯನ್ನು ವಿನ್ಯಾಸಗೊಳಿಸಲಾಗಿದೆ.
ಆಸ್ಪತ್ರೆ ಉದ್ಘಾಟನೆಯ ಹಿನ್ನಲೆ ವಿಶೇಷ ಕೊಡುಗೆ..

ಬೆಂಗಳೂರಿನಲ್ಲಿ ಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಉದ್ಘಾಟನೆಯ ಸಂಭ್ರಮದ ಸಂದರ್ಭದಲ್ಲಿ, ಮೆಡಿಕವರ್ ಆಸ್ಪತ್ರೆಗಳು ನಿರೀಕ್ಷಿತ ತಾಯಂದಿರಿಗಾಗಿ ವಿಶೇಷ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ. ಈ ಸೀಮಿತ ಉದ್ಘಾಟನಾ ಕೊಡುಗೆಯ ಭಾಗವಾಗಿ, ಮೊದಲ 100 ನೋಂದಣಿದಾರರು ಸಾಮಾನ್ಯ ಹೆರಿಗೆಗೆ ₹45,000 ಮತ್ತು ಕ್ಕೆ ಸಿ-ಸೆಕ್ಷನ್ ಗೆ ₹65,000 ಪ್ಯಾಕೇಜ್‌ಗಳನ್ನು ಪಡೆಯಬಹುದು. ತಜ್ಞ ಪ್ರಸೂತಿ ಆರೈಕೆ, ಸುಧಾರಿತ ಸೌಲಭ್ಯಗಳು, ನವಜಾತ ಶಿಶುಗಳ ಬೆಂಬಲ ಮತ್ತು ಸಹಾನುಭೂತಿಯ ಆರೈಕೆ ಸೇವೆಗಳೊಂದಿಗೆ, ಆಸ್ಪತ್ರೆಯು ಬೆಂಗಳೂರಿನ ಕುಟುಂಬಗಳಿಗೆ ಗುಣಮಟ್ಟದ ತಾಯಿ ಮತ್ತು ಮಕ್ಕಳ ಆರೋಗ್ಯದ ಕಾಳಜಿವಹಿಸಿದೆ.
Uk Bank ಗೆ ಬ್ಯಾಂಕ್ ಗೆ ಬೆಂಕಿ|ಲಕ್ಷಾಂತರ ರುಪಾಯಿ ಹಾನಿ
ಸುಧಾರಿತ ಗರ್ಭಧಾರಣೆ, ನವಜಾತ ಶಿಶು ಮತ್ತು ಮಕ್ಕಳ ಆರೈಕೆಯ ‘ಸೆಂಟರ್ ಆಫ್ ಎಕ್ಸಲೆನ್ಸ್’ ಆಗಿ ರೂಪುಗೊಂಡಿರುವ ಈ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರು, ಫೀಟಲ್ ಮೆಡಿಸಿನ್ ತಜ್ಞರು, ನಿಯೋನೇಟಾಲಜಿಸ್ಟ್‌ಗಳು, ಪೀಡಿಯಾಟ್ರಿಕ್ ಇಂಟೆನ್ಸಿವಿಸ್ಟ್‌ಗಳು ಮತ್ತು ಅನಸ್ಥೀಷಿಯಾ ತಜ್ಞರು ಸಮಗ್ರವಾಗಿ ಕಾರ್ಯನಿರ್ವಹಿಸಲಿದ್ದಾರೆ. ಗರ್ಭಧಾರಣೆಯಿಂದ ಹಿಡಿದು ಹೆರಿಗೆ, ನವಜಾತ ಶಿಶು ಆರೈಕೆ ಮತ್ತು ಮಕ್ಕಳ ಫಾಲೋ-ಅಪ್ ತನಕ ತಾಯಿ ಮತ್ತು ಮಗುವಿಗೆ ನಿರಂತರ ಹಾಗೂ ಸಮನ್ವತೆಯ ಮೂಲಕ ಚಿಕಿತ್ಸೆ ಒದಗಿಸಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ Dr. G. ಅನೀಲ್ ಕೃಷ್ಣ, “ಬೆಂಗಳೂರು ಭಾರತದ ಪ್ರಮುಖ ಆರೋಗ್ಯ ಮಾರುಕಟ್ಟೆಗಳಲ್ಲಿ ಒಂದಾಗಿದೆ. ತಾಯಂದಿರು ಮತ್ತು ಮಕ್ಕಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ರೂಪುಗೊಂಡ ಆಸ್ಪತ್ರೆಯನ್ನು ನಗರಕ್ಕೆ ನೀಡುತ್ತಿರುವುದು ಸಂತೋಷದ ವಿಷಯ. ಗುಣಮಟ್ಟ, ಸುಲಭ ಲಭ್ಯತೆ ಮತ್ತು ವಿಶ್ವಾಸಾರ್ಹ ಚಿಕಿತ್ಸಾ ಫಲಿತಾಂಶಗಳಿಗೆ ನಾವು ಆದ್ಯತೆ ನೀಡುತ್ತೇವೆ,” ಎಂದು ಹೇಳಿದರು.
ಪಿ ಹರಿಕೃಷ್ಣ ಮಾತನಾಡಿ, “ವೈಟ್‌ಫೀಲ್ಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಹಿಳೆ ಮತ್ತು ಮಕ್ಕಳ ವಿಶೇಷ ಆರೋಗ್ಯ ಸೇವೆಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಈ ಆಸ್ಪತ್ರೆ ಆ ಪ್ರದೇಶದ ಜನರಿಗೆ ದೀರ್ಘಕಾಲಿಕ ಆರೋಗ್ಯ ಸೇವಾ ಬದ್ಧತೆಯಾಗಿದೆ,” ಎಂದರು.
ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ನಟಿ ರುಕ್ಮಿಣಿ ವಸಂತ, “ತಾಯಿಯ ಪ್ರೀತಿ ಪ್ರತಿಯೊಂದು ಮನೆಯ ಹೃದಯ ಬಡಿತದಂತಿದೆ. ಆ ಹೃದಯವನ್ನು ಕಾಪಾಡುವ ಈ ರೀತಿಯ ಆಸ್ಪತ್ರೆಯನ್ನು ತಾಯಂದಿರ ದಿನದಂದು ನಮ್ಮ ನಗರದಲ್ಲಿ ಉದ್ಘಾಟಿಸುವ ಅವಕಾಶ ಸಿಕ್ಕಿರುವುದು ಸಂತೋಷದ ಸಂಗತಿ,” ಎಂದು ಹೇಳಿದರು.
ಉದ್ಘಾಟನೆಯ ಅಂಗವಾಗಿ ಬೆಂಗಳೂರಿನ ತಾಯಂದಿರು ಬರೆದ ನೂರು ಹಸ್ತಲಿಖಿತ ಶುಭಾಶಯ ಸಂದೇಶಗಳನ್ನು ಒಳಗೊಂಡ ‘ವಾಲ್ ಆಫ್ ವಿಶಸ್’ ಅನಾವರಣಗೊಳಿಸಲಾಯಿತು. ರುಕ್ಮಿಣಿ ವಸಂತ ಅವರು 101ನೇ ಸಂದೇಶವನ್ನು ಸೇರಿಸಿದರು.
ಆಸ್ಪತ್ರೆಯಲ್ಲಿ 23 ವಾರಗಳ ಗರ್ಭಾವಧಿಯಲ್ಲೇ ಜನಿಸುವ ಶಿಶುಗಳಿಗೆ ಆರೈಕೆ ನೀಡಬಲ್ಲ ಲೆವೆಲ್-III NICU, PICU, ಗಂಭೀರ ಸ್ಥಿತಿಯ ತಾಯಂದಿರಿಗಾಗಿ ವಿಶೇಷ Maternal ICU, ಮಕ್ಕಳ ತುರ್ತು ಚಿಕಿತ್ಸಾ ವಿಭಾಗ, ಫೀಟಲ್ ಮೆಡಿಸಿನ್, ಫರ್ಟಿಲಿಟಿ ಕೇರ್, ವಾಟರ್ ಬರ್ಥಿಂಗ್ ಸೌಲಭ್ಯಗಳು ಹಾಗೂ ಅತ್ಯಾಧುನಿಕ ರೋಬೋಟಿಕ್ ಗೈನಕಾಲಜಿ ಶಸ್ತ್ರಚಿಕಿತ್ಸಾ ವ್ಯವಸ್ಥೆಗಳು ಲಭ್ಯವಿವೆ.
ಈ ಆಸ್ಪತ್ರೆಯ ವೈದ್ಯಕೀಯ ತಂಡವನ್ನು ಡಾ.ಪ್ರವೀಣ್ ವೆಂಕಟಗಿರಿ, ಡಾ.ಲತೀಶ್ ಕಂಬಂ, ಡಾ.ಶಿವಶಂಕರ ಡಿಗ್ಗಿಕರ್, ಡಾ.ತೇಜಿ ದಾವಣೆ ಹಾಗೂ ಡಾ.ವೇಣುಗೋಪಾಲ್ ರೆಡ್ಡಿ ನೇತೃತ್ವ ವಹಿಸಿದ್ದಾರೆ.
ಮೆಡಿಕೋವರ್ ಆಸ್ಪತ್ರೆಗಳ ಕುರಿತು:
Medicover Hospitals ಭಾರತ ಸೇರಿದಂತೆ ಯುರೋಪಿನ 12 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತರರಾಷ್ಟ್ರೀಯ ಆರೋಗ್ಯ ಸೇವಾ ಸಂಸ್ಥೆಯಾಗಿದೆ. ಭಾರತದಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳು, ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಗಳು, ಕ್ಯಾನ್ಸರ್ ಇನ್ಸ್ಟಿಟ್ಯೂಟ್‌ಗಳು ಹಾಗೂ OPD ಕೇಂದ್ರಗಳನ್ನು ಸಂಸ್ಥೆ ನಿರ್ವಹಿಸುತ್ತಿದೆ.






