ಕುಮಟಾ: ಬ್ರೂಣ ಹತ್ಯೆ ,ಶಿಶು ಮಾರಾಟ ಜಾಲದಲ್ಲಿ ಜಾನು ಆಸ್ಪತ್ರೆ! ಏನಿದು ಆರೋಪ?

493

ಕಾರವಾರ :- ರಾಜ್ಯದಲ್ಲಿ ಹೆಣ್ಣು ಬ್ರೂಣ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದ್ದರೂ ಹಲವು ಆಸ್ಪತ್ರೆಗಳಲ್ಲಿ ಹಣಕ್ಕಾಗಿ ಹೆಣ್ಣು ಬ್ರೂಣ ಹತ್ಯೆ ನಡೆಯುತ್ತಲೇ ಇದೆ. ಇದರ ಜೊತೆಗೆ ಶಿಶುಗಳ ಮಾರಾಟ ಜಾಲವೂ ಸಕ್ರಿಯವಾಗಿದ್ದು ಇದೀಗ ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದಲ್ಲಿ ಇರುವ ಜಾನು ಖಾಸಗಿ ಆಸ್ಪತ್ರೆ ವಿರುದ್ಧ ಬ್ರೂಣ ಹತ್ಯೆ , ಬ್ರೂಣ ಪತ್ತೆ ಪ್ರಕರಣ ಹಾಗೂ ಶಿಶು ಮಾರಾಟ ಕುರಿತು ಆರೋಪ ಕೇಳಿಬಂದಿದೆ.

ಕುಮಟಾ (kumta) ದ ಜಾನು ಆಸ್ಪತ್ರೆಯಲ್ಲಿ ಬ್ರೂಣ ಪತ್ತೆ ಕಾರ್ಯ ಮಾಡಲಾಗುತ್ತದೆ ಜೊತೆಗೆ ಮಕ್ಕಳನ್ನು ಸಹ ಮಾರಾಟ ಮಾಡಲಾಗುತ್ತದೆ ಎಂಬ ಆರೋಪ ಇದೀಗ ಹೆಚ್ಚು ಕೇಳಿಬರುತ್ತಿದೆ. ಇದಕ್ಕೆ ಕಾರಣ ಆಸ್ಪತ್ರೆ ವೈದ್ಯರು (doctor) ನಡೆದುಕೊಳ್ಳುತ್ತಿರುವುದು.

ಎರಡು ದಿನದ ಹಿಂದೆ ಕುಮಟಾ ಭಾಗದ ಯುವತಿಯು ವಿವಾಹವಾಗದೇ ಗರ್ಭವತಿಯಾಗಿದ್ದು, ಬೆಳಗಾವಿಯಲ್ಲಿ ಕುಟುಂಬ ಇದ್ದಿದ್ದರಿಂದ ಆಕೆಯ ಕುಟುಂಬದವರು ಅಬಾಷನ್ ಮಾಡಲು ಹೆದರಿದ್ದರು. ಹೀಗಾಗಿ ಮಗಳೊಂದಿಗೆ ತಾಯಿ ಮನೆಯಾದ ಕುಮಟಾಕ್ಕೆ ಯುವತಿಯೊಂದಿಗೆ ಬಂದಿದ್ದು ಆಗಲೇ ಮಗು ಹೊಟ್ಟೆಯಲ್ಲಿ ಇದ್ದು ಎಂಟು ತಿಂಗಳಾಗಿದ್ದರೂ ಆಕೆ ಆರೋಗ್ಯವಾಗಿದ್ದರೂ ಮದುವೆಯಾಗದೇ ಗರ್ಭವತಿ ಯಾದ್ದರಿಂದ ಬ್ರೂಣ ತೆಗೆಸಲು ಜಾನು ಆಸ್ಪತ್ರೆಗೆ ತೆರಳಿದ್ದಾರೆ. ಈವೇಳೆ ವೈದ್ಯರು ಹಣದ ಆಸೆಗೆ ಎಂಟು ತಿಂಗಳ ಬ್ರೂಣವನ್ನೇ ಯುವತಿಯ ಹೊಟ್ಟೆಯಿಂದ ಬಗೆದು ತೆಗೆದಿದ್ದಾರೆ. ಆದ್ರೆ ಆ ಹೆಣ್ಣುಮಗು ಸಾಯುವ ಬದಲು ಬದುಕಿಬಿಟ್ಟಿದೆ. ಹೀಗಾಗಿ ಮಗುವನ್ನು ಮಾತ್ರ ಕಾರವಾರದ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ. ಆಗ ನಡೆದ ಘಟನೆ ಬೆಳಕಿಗೆ ಬಂದಿದ್ದು ಮಕ್ಕಳ ರಕ್ಷಣಾ ಘಟಕ ಮಗು ರಕ್ಷಣೆ ಮಾಡಿದ್ದು ಇದೀಗ ಮಗುವಿಗೆ ಚಿಕಿತ್ಸೆ ನೀಡಲಾಗುತ್ತದೆ.

ಇನ್ನು ಕುಮಟಾದ ಹಂದಿಗೂಣದ ಯುವತಿ ವಿವಾಹದ ಮೊದಲೇ ಗರ್ಭವತಿಯಾಗಿದ್ದು ಆಕೆಯನ್ನು ಸಹ ಇದೇ ಆಸ್ಪತ್ರೆಗೆ ಕರೆತಂದಿದ್ದು ಗಂಡುಮಗುವಾದ್ದರಿಂದ ಹೆರಿಗೆ ಮಾಡಿಸಿದ್ದಾರೆ. ನಂತರ ಈ ಮಗುವನ್ನು ಮುಂಬೈ ಮೂಲದ ವ್ಯಕ್ತಿಗೆ ಮಾರಾಟ ಮಾಡಲು ಸಿದ್ದತೆ ನಡೆಸಿರುವಾಗಲೇ ಮಕ್ಕಳ ರಕ್ಷಣಾ ಘಟಕ ರಕ್ಷಣೆ ಮಾಡಿದೆ.

ವೈದ್ಯರ ಹಣದ ದುರಾಸೆ! ವಿವಾಹದ ಮೊದಲೇ ಗರ್ಭವತಿಯಾದವರೇ ಟಾರ್ಗೆಟ್ !


ಇದು ಕೇವಲ ಜಾನು ಆಸ್ಪತ್ರೆಗೆ ಸೀಮಿತವಾಗಿಲ್ಲ. ಹಲವು ವೈದ್ಯರು ಮಕ್ಕಳ ಮಾರಾಟ ಜಾಲ ,ಬ್ರೂಣ ಹತ್ಯೆಯಂತ ಕೆಟ್ಟ ಕೆಲಸಕ್ಕೆ ಜಿಲ್ಲೆಯಲ್ಲಿ ಕೈಹಾಕಿದ್ದು ಕಾನೂನಿನ ಕಪಿ ಮುಷ್ಟಿಗೆ ಸಿಗದೇ ಬಚಾವ್ ಆಗುತಿದ್ದಾರೆ.

ಮದುವೆಯಾಗದೇ ಗರ್ಭವತಿಯಾಗುವ ( pregnant) ಯುವತಿಯರ ಪೋಷಕರು ಅಬಾಷನ್ ಗಾಗಿ ಕರೆತಂದರೇ ಮೊದಲು ಸ್ಕ್ಯಾನ್ ಮಾಡಿ ಮಗುಬಗ್ಗೆ ಮಾಹಿತಿ ಪಡೆಯುವ ವೈದ್ಯರು ಗಂಡು ,ಹೆಣ್ಣೋ ಎಂದು ತಿಳಿದುಕೊಳ್ಳುತ್ತಾರೆ.

ನಂತರ ಮಕ್ಕಳು ಬೇಕು ಎನ್ನುವ ದಲ್ಲಾಳಿಗೇ ಸಂಪರ್ಕಿಸಿ ಮಗು ಬಗ್ಗೆ ಮಾಹಿತಿ ನೀಡುತ್ತಾರೆ. ಒಂದುವೇಳೆ ಮಗು ಬೇಕು ಎಂದಾದರೇ ಅಬಾಷನ್ ಮಾಡಿಸಲು ಬರುವ ಪೋಷಕರಿಗೆ ಅಬಾಷನ್ ಮಾಡಿಸಿದರೇ ಆಕೆ ಪ್ರಾಣಕ್ಕೆ ಕುತ್ತು ಹೀಗಾಗಿ ಮಗು ಹುಟ್ಟುವವರೆಗೂ ಕಾಯಿರಿ ನಂತರ ಮಗುವನ್ನು ಬೇರೆಯವರಿಗೆ ನೀಡಬಹುದು ಎಂದು ಮೈಂಡ್ ವಾಷ್ ಮಾಡಿ ಮಗು ಹೆತ್ತ ನಂತರ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ:-ಕಾರವಾರದಲ್ಲಿ ಸಿನಿಮಾ ನಟ ರಿಷಬ್ ಶಟ್ಟಿ ಕಾರು ತಡೆದು ತಪಾಸಣೆ?!

ಇನ್ನು ಕೆಲವು ಆಸ್ಪತ್ರೆಗಳಲ್ಲಿ ಬ್ರೂಣ ಪತ್ತೆಕಾರ್ಯ ನಡೆಯುತಿದ್ದು ಹೆಣ್ಣು ಮಗುವಾದರೇ ಅಬಾಷನ್ ಮಾಡಲಾಗುತ್ತಿದೆ. ಹೀಗಾಗಿ ಜಿಲ್ಲಾ ಆರೋಗ್ಯ ಇಲಾಖೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳದಿದ್ದರೇ ಅದೆಷ್ಟೋ ಹೆಣ್ಣು ಮಗುವು ಕಣ್ತೆರೆಯುವ ಮುಂಚೆಯೇ ಹತ್ಯೆಯಾಗಿ ಬಿಡುತ್ತದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!