ಇಂದಿನಿಂದ ರಾಜ್ಯದ ಡಯಾಲಿಸಿಸ್ ಕೇಂದ್ರಗಳು ಸ್ಥಗಿತ: ಉತ್ತರ ಕನ್ನಡ ಜಿಲ್ಲೆಯಲ್ಲಿ ಏನು ಸ್ಥಿತಿ ವಿವರ ನೋಡಿ.

134

ಕಾರವಾರ/ ಬೆಂಗಳೂರು :-November30:- ವೇತನ ಬಾಕಿ ಹಾಗೂ ಸೇವಾ ಭದ್ರತೆ ಆಗ್ರಹಿಸಿ ಡಯಾಲಿಸಿಸ್ ಕೇಂದ್ರಗಳ ಸಿಬ್ಬಂದಿ ರಾಜ್ಯಾದ್ಯಂತ ಸೇವೆ ಸ್ಥಗಿತಗೊಳಿಸಿ ಗುರುವಾರದಿಂದ ಅನಿರ್ದಿಷ್ಟವಧಿ ಪ್ರತಿಭಟನೆ ನಡೆಸುತಿದ್ದು ರಾಜ್ಯದ 167 ಡಯಾಲಿಸಿಸ್ ಕೇಂದ್ರಗಳು ಇಂದಿನಿಂದ ಬಂದ್ ಆಗುವ ಸಾಧ್ಯತೆಗಳಿವೆ. ಇದರಿಂದಾಗಿ ಕಿಡ್ನಿ ವೈಫಲ್ಯ ಸಮಸ್ಯೆ ಇರುವ ಚಿಕಿತ್ಸೆ ಪಡೆಯುತ್ತಿರುವ 1800 ರೋಗಿಗಳಿಗೆ ಸಮಸ್ಯೆ ಅನುಭವಿಸುವಂತಾಗುತ್ತಿದೆ.

ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ ಮುಷ್ಕರಕ್ಕೆ ಬೆಂಬಲ ನೀಡಲಾಗಿದೆ. ಆದ್ರೆ ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸಿದ್ದು ಕರ್ತವ್ಯ ಕ್ಕೆ ಹಾಜುರಾಗುವಂತೆ ಮನವೊಲಿಸಿದೆ.
ಜಿಲ್ಲೆಯಲ್ಲಿ 11 ಡಯಾಲಿಸಿಸ್ ಕೇಂದ್ರಗಳಿದ್ದು 43 ಡೆಯಾಲಿಸಿಸ್ ಯಂತ್ರಗಳು ಕಾರ್ಯದಲ್ಲಿದ್ದು 55 ಸಿಬ್ಬಂದಿ ಕರ್ತವ್ಯ ನಿರ್ವಹಿಸುತಿದ್ದರೇ ಒಟ್ಟು 273 ರೋಗಿಗಳು ಚಿಕಿತ್ಸೆ ಪಡೆಯುತಿದ್ದಾರೆ.

ಹೀಗಾಗಿ ರೋಗಿಗಳಿಗೆ ತೊಂದರೆ ಆಗದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳ ಮನವೊಲೊಸುವಲ್ಲಿ ಸಫಲವಾಗಿದ್ದು ಸದ್ಯ ಜಿಲ್ಲೆಯ ಡೆಯಾಲಿಸಿಸ್ (dialysis ) ರೋಗಿಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!