BREAKING NEWS
Search

ರಾಮಮಂದಿರ ಉದ್ಘಾಟನೆ ವೇಳೆ ಡಾ.ಗಜಾನನ ಶರ್ಮಾ ವಿರಚಿತ ಗೀತೆ “ಇನ್ನಷ್ಟುಬೇಕೆನ್ನ ಹೃದಯಕ್ಕೆ ರಾಮ” ಹಾಡು ಪ್ರಸಾರ

107

ಕಾರವಾರ:-ಶಿವಮೊಗ್ಗ ಜಿಲ್ಲೆಯ ಸಾಗರದ ಹುಕ್ಲು ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಗೀತ ರಚನೆಗಾರ ಡಾ.ಗಜಾನನ ಶರ್ಮ ರಚಿಸಿರುವ “ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ” ಎಂಬ ಗೀತೆ ಅಯೋದ್ಯಯಲ್ಲಿ ಜ.22 ರಂದು ರಾಮಮಂದಿರ ಉದ್ಘಾಟನೆ ವೇಳೆ ಕನ್ನಡ ದಲ್ಲೇ ಪ್ರಸಾರವಾಗಲಿದೆ.

ಈ ಕುರಿತು ಆಯೋದ್ಯೆ ಟ್ರಸ್ಟ್ ನಿಂದ “X” ನಲ್ಲಿ (ಟ್ವೀಟ್ )ಮೂಲಕ ಕಚಿತ ಪಡಿಸಲಾಗಿದೆ.ಈ ಕುರಿತು ಡಾ.ಗಜಾನನ ಶರ್ಮ ಸ್ಪಷ್ಟಪಡಿಸಿದ್ದು ,ನಾನು ರಚಿಸಿದ ಹಾಡನ್ನು ರಾಮಮಂದಿರ ಟ್ರಸ್ಟ್ ನವರು ತೆಗೆದುಕೊಂಡಿದ್ದಕ್ಕೆ ಖಷಿಯಾಗಿದೆ ಎಂದರು.

ಇದನ್ನೂ ಓದಿ:-ಗೋಕರ್ಣ,ಮುರುಡೇಶ್ವರ ಕ್ಷೇತ್ರವನ್ನು ಅಪವಿತ್ರ ಗೊಳಿಸುತ್ತಿರುವ ವೇಷ್ಯಾವಾಟಿಕೆ, ಗಾಂಜಾ ಅಮಲಿನ ದಂಧೆ! Inside story

ದಿಲ್ ಮಾಂಗೆ ಮೋರ್ ಟೈಟಲ್ ನ ಪ್ರೇರಣೆ ಯಿಂದ ಹುಟ್ಟಿತು ಹಾಡು !

ಡಾ.ಗಜಾನನ ಶರ್ಮರವರಿಗೆ ಹೊಸನಗರದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ರಾಮಕಥೆ ಗಾಗಿ ಚಾತುರ್ಮಾಸದ ವೇಳೆ ಉತ್ತಮ ಗೀತ ರಚನೆ ಮಾಡಿಕೊಡುವಂತೆ ಹೇಳಿದ್ದರು.ಆದ್ರೆ ಶರ್ಮರವರ ಕಾರ್ಯ ಒತ್ತಡದಿಂದ ರಚನೆ ಮಾಡಲಾಗಿರಲಿಲ್ಲ.

ಒಮ್ಮೆ ಇವರು ಕಾರ್ಯ ನಿಮಿತ್ತ ಕೇರಳಕ್ಕೆ ಹೋದಾಗ ತಂಪು ಪಾನಿಯದ ಜಾಹಿರಾತಿನ ಲ್ಲಿ ದಿಲ್ ಮಾಂಗೆ ಮೋರ್ ಎಂದು ಬರೆದಿದ್ದನ್ನು ಓದಿದ ಇವರಿಗೆ ಈ ಟೈಟಲ್ ರಾಮನಕುರಿತು ಯಾಕಾಗಬಾರದು ಎಂದು ಅವರು “ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ” ಎಂದು ಗೀತೆ ರಚಿಸಿದರು. ಈ ರಚನೆಯನ್ನು ಶ್ರೀಗಳಿಗೆ ತೋರಿಸಿದಾಗ ಅದನ್ನು ಮುಂದುವರೆಸಲು ಹೇಳಿದರು.ಹೀಗೆ ಈ ಗೀತೆ ರಚನೆಯಾಯ್ತು ಎಂದು ಅದರ ಮೂಲವನ್ನು ಶರ್ಮಾರವರು ತಿಳಿಸಿದ್ದಾರೆ.

ಇದನ್ನೂ ಓದಿ:-ಗೋಕರ್ಣದಲ್ಲಿ ಪಿತೃಕಾರ್ಯ ನೆರವೇರಿಸಿದ ಮುಸ್ಲೀಂ ಕುಟುಂಬ

ಡಾ.ಗಜಾನನ ಶರ್ಮಾ ರವರು ರಾಮಕಥೆ ಮೂಲಕವೇ ಇಡೀ ದೇಶಕ್ಕೆ ಪರಿಚಿತರಾದವರಾಗಿದ್ದಾರೆ. ಇವರು ರಚಿಸಿದ ಗೀತೆಗಳು ಎಂತವರನ್ನೂ ಮಂತ್ರ ಮುಗ್ಧಗೊಳಿಸುತ್ತದೆ.
ಇದೀಗ ರಾಮನ ಸನ್ನಿದಿಯಲ್ಲೇ ಅದ್ರಲ್ಲೂ ಕನ್ನಡ ಭಾಷೆಯಲ್ಲಿ ಈ ಗೀತೆ ಪ್ರಸ್ತುತ ಪಡಿಸುತ್ತಿರುವುದು ಕನ್ನಡಿಗರ ಹೆಮ್ಮೆ ಎನಿಸಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!