Sirsi|ದಾಯಾದಿ ವ್ಯಾಜ್ಯ, ಸರ್ವೆ ಯಲ್ಲಿ ಜಾಗ ಕಮ್ಮಿ ಬಂದಿದ್ದಕ್ಕೆ ವಿಷ ಸೇವಿಸಿದ ರೈತ ಮಹಿಳೆ

105

ಕಾರವಾರ :- ದಾಯಾದಿಗಳ ಜಮೀನಿನ ಕಲಹದಲ್ಲಿ ಜಾಗದ ಸರ್ವೆ ಮಾಡಿಸಿದಾಗ ಕಡಿಮೆ ಅಳತೆ ಜಾಗ ಬಂದಿದ್ದಕ್ಕೆ ಮನನೊಂದ ರೈತ ಮಹಿಳೆ ಸ್ಥಳದಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕುಪಗಡ್ಡೆಯಲ್ಲಿ ನಡೆದಿದೆ.

ಇದನ್ನೂ ಓದಿ:-ಶಿರಸಿಯಲ್ಲಿ ಗುತ್ತಿಗೆದಾರನ ಮನೆಯ ಶೌಚಗುಂಡಿ ಮಲಹೊತ್ತ ಕೂಲಿ ಕಾರ್ಮಿಕರು!

ರೇಣುಕಾ ಮಂಜಪ್ಪ ಜಣಗೇರಿ ಆತ್ಮಹತ್ಯೆಗೆ ಪ್ರಯತ್ನಪಟ್ಟ ಮಹಿಳೆಯಾಗಿದ್ದು ಈಕೆಯೊಂದಿಗೆ ದಾಯಾದಿಗಳ ಜಮೀನು ವ್ಯಜ್ಯ ವಿದ್ದು ಈ ಕಾರಣದಿಂದ ಜಮೀನು ಸರ್ವೆಕಾರ್ಯಕ್ಕೆ ಮನವಿ ಮಾಡಲಾಗಿತ್ತು.

ಇದನ್ನೂ ಓದಿ:-ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ನೂತನ ರೈಲುಮಾರ್ಗ ಸರ್ವೆ ಪೂರ್ಣ |ಮುಂದೇನು? ವಿವರ ನೋಡಿ.

ಅದರಂತೆ ಸರ್ವೆ ಅಧಿಕಾರಿಗಳು ಜಮೀನಿನ ಸರ್ವೆ ಮಾಡಿದ್ದು ಸರ್ವೆಯಲ್ಲಿ ಈಕೆಯ ಅನುಭವದಲ್ಲಿ ಇದ್ದ ಜಮೀನಿನ ಜಾಗ ಕಡಿಮೆ ಬಂದಿದೆ.

ಇದರಿಂದ ಮನನೊಂದ ಈಕೆ ಸ್ಥಳದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಅಸ್ವಸ್ಥಗೊಂಡ ಮಹಿಳೆಯನ್ನು ಗ್ರಾಮಸ್ಥರು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಸಂಬಂಧ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:-ಅಯ್ಯಪ್ಪ ಮಾಲಾಧಾರಿಗೊಳೊಂದಿಗೆ ಶಬರಿಮಲೆ ಗೆ ಪಾದಯಾತ್ರೆ‌ ಹೊರಟ ಬೀದಿನಾಯಿ




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!