BREAKING NEWS
Search

ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ನೂತನ ರೈಲುಮಾರ್ಗ ಸರ್ವೆ ಪೂರ್ಣ |ಮುಂದೇನು? ವಿವರ ನೋಡಿ.

212

ಕಾರವಾರ/ಶಿವಮೊಗ್ಗ :- ಶಿವಮೊಗ್ಗ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಮಹತ್ವದ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ನೂತನ ರೈಲು ಮಾರ್ಗದ (railway line )ಸಮೀಕ್ಷೆಯನ್ನು ರೈಲ್ವೆ ಇಲಾಖೆ ಪೂರ್ಣಗೊಳಿಸಿದೆ.

ಈ ಕುರಿತು ಗುರುಮೂರ್ತಿ ಹೆಗಡೆ ಎಂಬುವವರು ಆರ್‌ಟಿಐ(RTI) ಮೂಲಕ ತಾಳಗುಪ್ಪ-ಶಿರಸಿ- ಹುಬ್ಬಳ್ಳಿ ನೂತನ ರೈಲು ಮಾರ್ಗದ ಬಗ್ಗೆ ಮಾಹಿತಿ ಕೇಳಿದ್ದು ರೈಲ್ವೆ ಸಚಿವಾಲಯದ ಮಾಹಿತಿಯಂತೆ ಹುಬ್ಬಳ್ಳಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ನೈಋತ್ಯ ರೈಲ್ವೆ ವಲಯ ( North Railway Division) 28 ಮಾರ್ಚ್ 2023ರಲ್ಲಿ ನೂತನ ರೈಲು ಮಾರ್ಗದ ಸಮೀಕ್ಷೆಯ ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಿದೆ.

ಇದನ್ನೂ ಓದಿ:-Uttrakannada ಜಿಲ್ಲೆಯ ಐತಿಹಾಸಿಕ ರೈಲ್ವೆ ನಿಲ್ದಾಣದ ಹೆಸರು ಬದಲಿಸಿದದ ರೈಲ್ವೆ ಸಚಿವಾಲಯ!

ಶಿವಮೊಗ್ಗ ಜಿಲ್ಲೆಯ (shivamogga )ಸಾಗರ ಸಮೀಪದ ತಾಳಗುಪ್ಪದಿಂದ ಶಿರಸಿ ಮೂಲಕ ಹುಬ್ಬಳ್ಳಿಗೆ ರೈಲು ಮಾರ್ಗ ನಿರ್ಮಾಣವಾಗಬೇಕು ಎಂಬುದು ಹಲವು ವರ್ಷಗಳ ಬೇಡಿಕೆ ಜನರದ್ದಾಗಿತ್ತು.

14 ನವೆಂಬರ್ 2019ರಲ್ಲಿ ನೂತನ ರೈಲು ಮಾರ್ಗ ನಿರ್ಮಾಣದ ಸಂಬಂಧ ಸಮೀಕ್ಷೆಗೆ ಕೇಂದ್ರ ಒಪ್ಪಿಗೆ ನೀಡಿತ್ತು.ಆದರೆ ರೈಲ್ವೆ ಸಚಿವಾಲಯ ಹೊಸ ರೈಲ್ವೆ ಮಾರ್ಗಗಳಿಗೆ ಒಪ್ಪಿಗೆ ನೀಡುವ ಮೊದಲು ಅಂತಿಮ ಸ್ಥಳ ಸಮೀಕ್ಷೆ(ಎಫ್ಎಲ್ಎಸ್) ನಡೆಸುತ್ತದೆ.

ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ಮಾರ್ಗದ ಎಫ್‌ಎಲ್‌ಎಸ್ ಸಮೀಕ್ಷೆಗೆ ಇನ್ನೂ ಒಪ್ಪಿಗೆ ನೀಡಿಲ್ಲ. ಈ ಸಮೀಕ್ಷೆಯಲ್ಲಿ ಯೋಜನೆಯ ವೆಚ್ಚ, ಸಂಚಾರ ದಟ್ಟಣೆ ಮುಂತಾದ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತದೆ.

ಸದ್ಯದ ಮಾಹಿತಿ ಪ್ರಕಾರ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ನೂತನ ರೈಲು ಮಾರ್ಗ 167 ಕಿ. ಮೀ. ಉದ್ದವಿದೆ. ಪ್ರಾಥಮಿಕ ಸಮೀಕ್ಷೆಯಲ್ಲಿ ಮಾರ್ಗದಲ್ಲಿ ಬರುವ ನಿಲ್ದಾಣಗಳನ್ನು ಸಹ ಗುರುತಿಸಲಾಗಿದೆ. ಆದರೆ ಇದಕ್ಕೆ ರೈಲ್ವೆ ಸಚಿವಾಲಯದ ಅಂತಿಮ ಒಪ್ಪಿಗೆ ಬಾಕಿ ಉಳಿದಿದೆ .

ಮಾರ್ಗ ಹೇಗಿದೆ?

ಈ ಮಾರ್ಗದಲ್ಲಿ ತಾಳಗುಪ್ಪ, ಕವಚೂರು, ಸಿದ್ದಾಪುರ, ಮಂಡಿಕೊಪ್ಪ, ತಾಳಗುಂಡ, ಬಿದರಹಳ್ಳಿ, ಶಿರಸಿ, ಅಂಚಹಳ್ಳಿ, ಹರಗನಹಳ್ಳಿ, ಪಾಲಾ, ಸಿದ್ದನಕೊಪ್ಫ, ಮುಂಡಗೋಡ, ಹುನಗುಂದ, ತಡಸ, ಬೆಳಗಲಿ ಮೂಲಕ ರೈಲು ಹುಬ್ಬಳ್ಳಿ ತಲುಪಲಿದೆ.

ಸದ್ಯ ಬೆಂಗಳೂರು, ಮೈಸೂರು ಸೇರಿ ವಿವಿಧ ನಗರಗಳಿಂದ ಶಿವಮೊಗ್ಗಕ್ಕೆ ಸಂಚಾರ ನಡೆಸುವ ರೈಲುಗಳು ಸಾಗರ ತಾಲೂಕಿನ ತಾಳಗುಪ್ಪ ಕೊನೆಯ ನಿಲ್ದಾಣವಾಗಿದೆ.

ತಾಳಗುಪ್ಪದಿಂದ ಉತ್ತರ ಕನ್ನಡ ಜಿಲ್ಲೆಯ ಮೂಲಕ ಹುಬ್ಭಳ್ಳಿಗೆ ಸಂಪರ್ಕ ಕಲ್ಪಿಸಲು ನೂತನ ರೈಲು ಮಾರ್ಗ ನಿರ್ಮಾಣ ಶೀಘ್ರ ವಾಗಲು ಬಹು ಬೇಡಿಕೆ ಇದ್ದು ಶಿರಸಿ ಜಿಲ್ಲೆ ಮಾಡುವ ಹೋರಾಟ ಸಹ ಜೀವಂತವಿದೆ.

ಒಂದುವೇಳೆ ಎಲ್ಲವೂ ಸರಿಹೊಂದಿದರೇ ಶಿರಸಿ ಗೆ ರೈಲು ನಿಲ್ದಾಣ ಕೆಲವೇ ವರ್ಷದಲ್ಲಿ ಆಗುವುದರಲ್ಲಿ ಅನುಮಾನವಿಲ್ಲ. ಇನ್ನು ಬೆಂಗಳೂರು,ಮೈಸೂರು ಸೇರಿದಂತೆ ಹಲವು ಭಾಗಕ್ಕೆ ಸುಲಭ ಸಂಪರ್ಕ ಏರ್ಪಡಲಿದ್ದು ,ಪ್ರವಾಸೋದ್ಯಮ,ವಾಣಿಜ್ಯ ವಹಿವಾಟಿಗೂ ಇದು ಅನುಕೂಲ ಆಗಲಿದ್ದು ಸಂಚಾರದ ಬಾರ ಕಡಿಮೆ ಆಗಲಿದೆ.

ಇದನ್ನೂ ಓದಿ:- ಸಚಿವರ ಕಚೇರಿಯಲ್ಲೇ ಕಳ್ಳತನ ಮಾಡಿದ ಕಳ್ಳ!

ಬೆಳಗಾವಿಯ ಸಂಸದ ದಿ. ಸುರೇಶ್ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾಗ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ನೂತನ ರೈಲು ಮಾರ್ಗದ ಸಮೀಕ್ಷೆ ನಡೆಸಲು ಒಪ್ಪಿಗೆ ನೀಡಿದ್ದು,ಇದರ ಅನ್ವಯ ಪಿ. ಇ. ಟಿ. ಸರ್ವೇ ಕಾರ್ಯಕ್ಕೆ ಒಪ್ಪಿಗೆ ಕೊಡಲಾಗಿತ್ತು.
ಇನ್ನು ಒಂದು ಬಾರಿ ಈ ನೂತನ ರೈಲು ಮಾರ್ಗದ ಸಮೀಕ್ಷೆಗೆ ಅನುದಾನ ಮಂಜೂರಾಗಿತ್ತು. ಬಳಿಕ ಸಮೀಕ್ಷೆ ನಡೆಯದೇ ಅದು ವಾಪಸ್ ಹೋಗಿತ್ತು. ಬಳಿಕ ಜನಪ್ರತಿನಿಧಿಗಳ ಒತ್ತಾಯದ ಕಾರಣ ಹೊಸದಾಗಿ ಸಮೀಕ್ಷೆ ಕೈಗೊಳ್ಳಲಾಗಿದ್ದು ಶಿರಸಿ ಭಾಗಕ್ಕೆ ರೈಲು ಮಾರ್ಗ ನೀಲ ನಕ್ಷೆ ಸಿದ್ದವಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!