ಕಾರವಾರ:-ತೋಟಗಾರಿಕೆ ಇಲಾಖೆಯು 2023ನೇ (Agriculture Department )ಸಾಲಿನ ಮುಂಗಾರು ಹಂಗಾಮಿನಲ್ಲಿ, ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು (RWBCIS) ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ್ದು. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ಪ್ರತಿ ಎಕರೆಗೆ ಅಡಿಕೆ , ಮಾವು ಶುಂಠಿ ಮತ್ತು ಕರಿಮೆಣಸು ಬೆಳೆಗಳನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿರುತ್ತದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆದ ರೈತರು ವಿಮಾ ಕಂತನ್ನು ಪಾವತಿಸಲು ಈ ಹಿಂದೆ ಜು.31 ಕೊನೆಯ ದಿನವಾಗಿದ್ದು, ರೈತರ ಹಿತ ದೃಷ್ಟಿಯಿಂದ ಸದರಿ ನೊಂದಣಿ ಅವಧಿಯನ್ನು ಆ 07 ವರೆಗೆ ಅವಧಿಯನ್ನು ವಿಸರಿಸಲಾಗಿದೆ. ಇದನ್ನೂ ಓದಿ:-Uttrakannada|ಲೋಕಸಭಾ ಚುನಾವಣೆಗೆ ಅಕಾಡ ಸಿದ್ದ ಬಿ.ಕೆ ಹರಿಪ್ರಸಾದ್ ಗೆ ಲೋಕಸಭಾ ಟಿಕೇಟ್!
ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ತೋಟಗಾರಿಕಾ ಇಲಾಖೆಯ ಕಛೇರಿ ಅಥವಾ ಹತ್ತಿರದ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ಎಂದು ತೋಟಗಾರಿಕಾ ಉಪನಿರ್ದೇಶಕರು ಪ್ರಕಟಯಲ್ಲಿ ತಿಳಿಸಿದ್ದಾರೆ.

