BREAKING NEWS
Search

Uttrakannada|ಲೋಕಸಭಾ ಚುನಾವಣೆಗೆ ಅಕಾಡ ಸಿದ್ದ ಬಿ.ಕೆ ಹರಿಪ್ರಸಾದ್ ಗೆ ಲೋಕಸಭಾ ಟಿಕೆಟ್!

181

ಕಾರವಾರ:- ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಇದೀಗ ಲೋಕಸಭಾ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳು ಸಿದ್ದವಾಗುತಿದ್ದು ಯಾವ ಕ್ಷೇತ್ರಕ್ಕೆ ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬ ಚರ್ಚೆ ಜೋರಾಗಿದೆ. ಇದೀಗ ಕೆನರಾ ಕ್ಷೇತ್ರದಲ್ಲಿ ಸತತ ಸೋಲನ್ನೇ ಕಾಣದ ಬಿಜೆಪಿಯ ಅನಂತಕುಮಾರ್ ಹೆಗಡೆ ಮತ್ತೆ ಬಿಜೆಪಿಯಿಂದ ಅಖಾಡಕ್ಕೆ ಇಳಿಯುತ್ತಾರೋ ಅಥವಾ ರಾಜಕೀಯ ನಿವೃತ್ತಿ ಪಡೆಯುತ್ತಾರೋ ಎಂಬ ಚರ್ಚೆಗಳು ಕಾವು ಪಡೆಯುತ್ತಿರುವ ಬೆನ್ನಲ್ಕೇ ಉತ್ತರ ಕನ್ನಡ (uttrakannada) ಜಿಲ್ಲೆಯ ಕೆನರಾ ಲೋಕಸಭಾ ಕ್ಷೇತ್ರ ದಿಂದ ಕಾಂಗ್ರೆಸ್ ಪಕ್ಷ ( Congress Party) ತನ್ನ ಅಭ್ಯರ್ಥಿಯನ್ನು ಅಂತಿಮ ಗೊಳಿಸುವ ಹಂತಕ್ಕೆ ತಲುಪಿದೆ.

ಈ ಕ್ಷೇತ್ರದಿಂದ ಬೆಳಗಾವಿಯ ಖಾನಾಪುರ ಕ್ಷೇತ್ರದ ಕಾಂಗ್ರೆಸ್ ನಿಂದ 2018 ರಲ್ಲಿ ಶಾಸಕರಾಗಿದ್ದ ಡಾ.ಅಂಜಲಿ ನಿಂಬಾಳ್ಕರ್ ಲೋಕಸಭೆಗೆ ಸ್ಪರ್ದೆ ಮಾಡಲು ಆಕಾಂಕ್ಷಿಯಾಗಿದ್ದು ಟಿಕೆಟ್ ಪಡೆಯಲು ಕಸರತ್ತು ನಡೆಸುತಿದ್ದಾರೆ.ಇದರ ಜೊತೆಗೆ ಅರಣ್ಯ ವಾಸಿಗಳ ಹಕ್ಕು ಹೋರಾಟ ಸಮಿತಿ ಅಧ್ಯಕ್ಷರು,ಕಾಂಗ್ರೆಸ್ ನ ಹಿರಿಯ ನಾಯಕ ಶಿರಸಿಯ ರವೀಂದ್ರ ನಾಯ್ಕ ರವರು ಸಹ ಆಕಾಂಕ್ಷಿಯಾಗಿದ್ದಾರೆ.

ಇನ್ನು ರಾಜ್ಯ ಸಭಾ ಸದಸ್ಯರಾಗಿ ಕಾಂಗ್ರೆಸ್ ನಲ್ಲಿ ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಹೆಸರನ್ನು ಇಟ್ಟುಕೊಂಡು ಹೈಕಮಾಂಡ್ ಗೆ ಅತೀ ಆತ್ಮೀಯರಾಗಿರುವ ವಿಧಾನಪರಿಷತ್ ಸದಸ್ಯರಾಗಿರುವ ಬಿಕೆ ಹರಿಪ್ರಸಾದ್ ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಮೇಲೆ ಹಿಂದಿನ ಚುನಾವಣೆಯಲ್ಲೇ ಕಣ್ಣಿಟ್ಟಿದ್ದರು.

ಇದನ್ನೂ ಓದಿ:- ಬಿಕೆ ಹರಿಪ್ರಸಾದ್,ಆರ್ .ವಿ ದೇಶಪಾಂಡೆ ಕುರಿತು ಅಚ್ಚರಿಯ ಮಾತು ಹೇಳಿದ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ

ಆದರೇ ಕಾಲ ,ಸೂಕ್ತ ವೇದಿಕೆ ,ಅವಕಾಶಗಳ ಕೊರತೆ ಕೆನರಾ ಕ್ಷೇತ್ರಕ್ಕೆ ಸ್ಪರ್ದೆ ಮಾಡದಂತೆ ಮಾಡಿತ್ತು. ಇನ್ನು ಹಿಂದಿನ ಚುನಾವಣೆಯಲ್ಲಿ ಆರ್.ವಿ ದೇಶಪಾಂಡೆ ಪುತ್ರ ಪ್ರಶಾಂತ್ ದೇಶಪಾಂಡೆಯವರಿಗೆ ಟಿಕೇಟ್ ನೀಡಲಾಗಿತ್ತು. ಮೋದಿ ಅಲೆ ಇದ್ದರೂ ಪ್ರಶಾಂತ್ ದೇಶಪಾಂಡೆ ತಂದೆ ವರ್ಚಸ್ಸು ಹಾಗೂ ಪಕ್ಷದ ವರ್ಚಸ್ಸಿನಿಂದ ಉತ್ತಮ ಮತವನ್ನೇ ಪಡೆದಿದ್ದರು.ಆದ್ರೆ ಈಬಾರಿ ಪ್ರಶಾಂತ್ ದೇಶಪಾಂಡೆ ಕಾಂಗ್ರೆಸ್ ನಿಂದ ಲೋಕಸಭಾ ಚುನಾವಣೆಗೆ ಸ್ಪರ್ದಿಸುವುದಿಲ್ಲ ಎಂದು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ಇನ್ನು ಇವರು ಬಿಜೆಪಿಗೆ ಸೇರ್ಪಡೆ ಗೊಳ್ಳುತ್ತಾರೆ ಎಂಬ ಗುಸು ಗುಸು ಸಹ ಹಬ್ಬಿದೆ. ಇನ್ನು ಬಿಜೆಪಿ ವಿರುದ್ಧ ಸಮರ್ಪಕ ನಾಯಕರ ಹುಡುಕಾಟವನ್ನು ಕಾಂಗ್ರೆಸ್ ಮಾಡುತಿದ್ದರೂ ಮೊದಲು ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂಬ ಮಾನದಂಡ ದಲ್ಲಿ ಪ್ರಯತ್ನ ಸಾಗಿದ್ದರೂ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ,ಪಕ್ಷದ ವರ್ಚಸ್ಸು ಇವುಗಳನ್ನು ತೂಗುಹಾಕಿ ಕೆನರಾ ಕ್ಷೇತ್ರದಿಂದ ಬಿಕೆ ಹರಿಪ್ರಸಾದ್ ಗೆ ಟಿಕೇಟ್ ನೀಡಿದರೆ ಹೇಗೆ ಎಂಬ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ಕೇಳಿಬಂದಿದ್ದು ಇದಕ್ಕೆ ಪೂರಕವಾಗಿ ಬಿಕೆ ಹರಿಪ್ರಸಾದ್ ರವರು ಕ್ಷೇತ್ರದಲ್ಲಿ ಓಡಾಡುತಿದ್ದು ಪಕ್ಷದ ನಾಯಕರನ್ನು ಒಟ್ಟುಗೂಡಿಸಿಕೊಂಡು ಹೋಗುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಇನ್ನು ಕಾಂಗ್ರೆಸ್ ಮೂಲಗಳ ಪ್ರಕಾರ ನಾಯಕ ಜನಾಂಗದ ಬಿಕೆ ಹರಿಪ್ರಸಾದ್ ರವರಿಗೆ ಪಕ್ಷದಿಂದ ಕೆನರಾ ಕ್ಷೇತ್ರಕ್ಕೆ ಟಿಕೇಟ್ ನೀಡುವುದು ಕಚಿತ ಎನ್ನಲಾಗುತ್ತಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!