BREAKING NEWS
Search

ಬಿಕೆ ಹರಿಪ್ರಸಾದ್,ಆರ್ .ವಿ ದೇಶಪಾಂಡೆ ಕುರಿತು ಅಚ್ಚರಿಯ ಮಾತು ಹೇಳಿದ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ.

199

ಕಾರವಾರ :- ಪಕ್ಷದ ಸಂಘಟನೆಯಲ್ಲಿ ಆಸಕ್ತಿಯನ್ನು ನಿರಂತರವಾಗಿ ಇದ್ರೆ ಅವರನ್ನು ಬಳಸಿಕೊಳ್ಳಲು ಪಕ್ಷ ಹಿಂದೆ ಸರಿಯುವುದಿಲ್ಲ,ಸಕ್ರಿಯವಾಗಿದ್ರೆ ಪಕ್ಷ ಬಳಸಿಕೊಳ್ಳತ್ತದೆ.ಯಾರನ್ನು ಯಾರೂ ದೂರ ಮಾಡಿ ಹಿಂದಕ್ಕೆ ಹಾಕಲು ಸಾಧ್ಯವಿಲ್ಲ ನಮ್ಮ ಶಕ್ತಿ ಉತ್ಸಾಹ ಇದ್ರೆ ಸಕ್ರಿಯ ರಾಜಕಾರಣದಲ್ಲಿ ಇರಬೇಕು ಎಂದು ಸಿದ್ದಾಪುರದಲ್ಲಿ ಮಾಜಿ ಸಚಿವ ಹಾಗೂ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ನವರು ಹೇಳಿದರು.

ಅವರು ಪಕ್ಷದಲ್ಲಿ ಬಿಕೆ ಹರಿಪ್ರಸಾದ್ ,ಆರ್ ವಿ ದೇಶಪಾಂಡೆರವರನ್ನು ನಿರ್ಲಕ್ಷಿಸಿರುವ ವಿಚಾರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ರಾಜಕಾರಣದಲ್ಲಿ ವಯಸ್ಸು,ಹಿರಿಯರು ಕಿರಿಯರು ಎಂಬುದು ಬರುವುದಿಲ್ಲ. ಬಿಕೆ ಹರಿಪ್ರಸಾದ್ ರವರು ನೇರ ಚುನಾವಣೆಗೆ ನಿಲ್ಲುವುದು ಕಷ್ಟವಿದೆ.ಅವರು ಯಾವುದೋ ಕ್ಷೇತ್ರದಿಂದ ಸಂಘಟನೆ ಮಾಡಿಕೊಂಡು ಬಂದು ಪಕ್ಷ ಸಂಘಟನೆ ಮಾಡಿ ಬಂದಿದ್ದಾರೆ. ಬಿಕೆ ಹರಿಪ್ರಸಾದ್ ರಾಜಕೀಯದಲ್ಲಿ ಯಾವುದೋ ಮೂಲೆಯ ಹಿಂದಿರುವ ಕ್ಷೇತ್ರದಿಂದ ರಾಜಕೀಯಕ್ಕೆ ಬಂದವರು ಆದರೂ MLC ಮಾಡಲಾಗಿದೆ. ಈಗಲೂ ಮಂತ್ರಿ ಮಾಡಬಹುದು ಎಂದರು. ಇದನ್ನೂ ಓದಿ:- ಜುಲೈ 31 ರ ಅಡಿಕೆ ಧಾರಣೆ ಹೇಗಿದೆ.(ಅಕ್ಷರದ ಮೇಲೆ ಕ್ಲಿಕ್ ಮಾಡಿ)

ಇನ್ನು ಉಡುಪಿಯಲ್ಲಿ ವಿದ್ಯಾರ್ಥಿನಿಲಯದಲ್ಲಿ ಆದ ವಿಡಿಯೋ ವಿವಾದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಯುವಕರು ವಿಡಿಯೋ ವನ್ನು ಬೇರೆ ಬೇರೆ ರೀತಿ ಬಳಸಿಕೊಳ್ಳು ಕೆಲಸಕ್ಕೆ ಇಳಿದಿದ್ದಾರೆ.ಅವರು ಬುದ್ದಿವಂತರು.ನಮಗೆ ಹಾಗೆ ಬಳಸಿಕೊಳ್ಳಲು ಬರುವುದಿಲ್ಲ.

ವಿಡಿಯೋ ಗಳನ್ನು ಕೆಲವು ವಿಚಾರದ ಆಲೋಚನೆ ಇರುವವರು ದುರುಪಯೋಗಕ್ಕೆ ಬಳಸಿಕೊಳ್ಳುತಿದ್ದಾರೆ.
ವ್ಯವಸ್ಥೆಯನ್ನು ದುರುಪಯೋಗ ಪಡಸಿಕೊಳ್ಳುತಿದ್ದಾರೆ ಇದಕ್ಕೆ ಪ್ರೋತ್ಸಾಹ ನೀಡುತಿದ್ದಾರೆ.ತನಿಖೆ ಆಗಬೇಕು ಕಾಂಗ್ರೆಸ್ ನವರು ಅವರಿಗೆ ಶಿಕ್ಷೆ ಆಗುವ ಕುರಿತು ಉತ್ಸಾಹ ತೋರಬೇಕು.ಈ ವಿಷಯ ಕಾಂಗ್ರೆಸ್ ಮುಖಂಡರ ಗಮನಕ್ಕೆ ತರಲಿಲ್ಲ..ಲೇಡಾಗಿ ಅವರ ಗಮನಕ್ಕೆ ಬಂದಿದೆ ಎಂದರು. ಇದನ್ನೂ ಓದಿ:- ರಾಜ್ಯದಲ್ಲಿ ಹುಲಿ ಸಂಖ್ಯೆ ಏರಿಕೆ ವಿವರ ನೋಡಿ.

ಇನ್ನು ಕಾಗೂಡು ತಿಮ್ಮಪ್ಪನವರ ಪುತ್ರಿ ಡಾ.ರಾಜನಂದಿನಿಯವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಕುರಿತು ಮಾತನಾಡಿದ ಅವರು ಮಗಳು ಬಿಜೆಪಿ ಸೇರಿರುವುದು ಕೆಲವು ದಿನದ ನಂತರ ತಿಳಿಯಿತು. ನಾನು ಸಮಾಜವಾದಿ ಹಿನ್ನಲೆಯಿಂದ ಬಂದವನು. ಮಗಳಿಗೆ ಹೀಗೆ ಇರು ಎಂದು ಹೇಳಲು ಸಾಧ್ಯವಿಲ್ಲ. ಆಕೆ ಬುದ್ದಿವಂತೆ ತಿಳುವಳಿಕೆ ಇದ್ದವಳು,ಯೋಚಿಸಿ ತನಗೆ ಭವಿಷ್ಯವಿರುವ ಕಡೆ ಅಕೆ ಹೋಗಿದ್ದಾಳೆ. ನಾನು ತಡೆಯಲು ಸಾಧ್ಯವಿಲ್ಲ,ಅವರಿಗೆ ಅವರದ್ದೇಆದ ಸ್ವಾತಂತ್ರ್ಯವಿದೆ. ರಾಜಕೀಯ ಭವಿಷ್ಯ ರೂಪಿಸಿಕೊಳ್ಳಬೇಕಾದರೇ ಸಾಕಷ್ಟು ಯೋಚಿಸಿ ಹೆಜ್ಜೆ ಇಡಬೇಕು ಎಂದರು.

ಅಯ್ಯೂಯ್ಯೋ ಈ ಶ್ವಾನದ ಗೋಳಾಟ ನೋಡುವ ಹಾಗಿಲ್ಲ! ಏನಾಯ್ತು ವಿಡಿಯೋ ನೋಡಿ.????




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!