BREAKING NEWS
Search

Karwar: ಶಾಲೆಯ ಡೊನೇಷನ್ ನೀಡದ್ದಕ್ಕೆ ಮಕ್ಕಳಿಗೆ ಪರೀಕ್ಷೆ ಬರೆಯಲು ನಿರಾಕರಣೆ! ಚಪ್ಪಲಿ ಬಿಡುವ ಜಾಗದಲ್ಲಿ ಮಕ್ಕಳನ್ನು ಕೂರಿಸಿದ್ರು!

187

ಕಾರವಾರ :- ಪೋಷಕರು ಶಾಲೆಯ ಡೊನೇಷನ್ ಶುಲ್ಕ ಪಾವತಿಸದಕ್ಕೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನಿರಾಕರಿಸಿ ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯ ಬಳಿ ಚಪ್ಪಲಿ ಬಿಡುವ ಜಾಗದ ಪಕ್ಕದಲ್ಲಿ ಮಕ್ಕಳನ್ನು ಕೂರಿಸಿ ಶಿಕ್ಷೆ ನೀಡಿದ ಆರೋಪ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಸರ್ಕಾರಿ ಅನುದಾನಿತ ಸೆಂಟ್ ಮೈಕಲ್ ಕಾನ್ವೆಂಟ್ ಸ್ಕೂಲ್ ನಲ್ಲಿ ಕೇಳಿಬಂದಿದೆ.

ಕ್ರಿಶ್ಚಿನ ಜೋಸೆಪ್ ಮಕ್ಕಳಿಗೆ ಪರೀಕ್ಷೆ ನಿರಾಕರಿಸಿದ ಶಾಲೆಯ (school)ಮುಖ್ಯ ಶಿಕ್ಷಕಿಯಾಗಿದ್ದು
ಫಾರ್ಮೆಟಿವ್ ಅಸೈನ್ಮೆಂಟ್ ಎಂಬ ಪರೀಕ್ಷೆ ಬರೆಯಲು 6,7 ಮತ್ತು 8 ನೇ ತರಗತಿಯ ಮಕ್ಕಳ ಪೋಷಕರು ಶುಲ್ಕ ಪಾವತಿಸದಕ್ಕೆ ಮಕ್ಕಳಿಗೆ ನಿರಾಕರಣೆ ಮಾಡಿ ಶಿಕ್ಷೆ ನೀಡಲಾಗಿದೆ ಎಂದು ಅಲ್ಲಿನ ಪೋಷಕರು ಆರೋಪ ಮಾಡಿದ್ದಾರೆ.

ಪ್ರತಿ ಮಕ್ಕಳಿಗೆ ವರ್ಷಕ್ಕೆ 20 ಸಾವಿರ ಡೊನೇಷನ್ (donation )ನ್ನು ಶಾಲಾ ಆಡಳಿತ ಮಂಡಳಿಯು ಪೋಷಕರಿಂದ ಸಂಗ್ರಹಿಸುತ್ತದೆ.ಹಲವು ಜನ ಕಂತಿನ ಮೂಲಕ ನೀಡುವುದರಿಂದ ಕೆಲವು ಪೋಷಕರು ಸಂಪೂರ್ಣ ಹಣ ತುಂಬಿರಲಿಲ್ಲ.ಈ ಹಿನ್ನಲೆಯಲ್ಲಿ 6,7,8 ನೇತರಗತಿಯ ಶುಲ್ಕ ಬರಿಸದ ಮಕ್ಕಳಿಗೆ ಪರೀಕ್ಷೆ ನಿರಾಕರಣೆ ಮಾಡಿ ದೌರ್ಜನ್ಯ ವೆಸಗಲಾಗಿದೆ ಎಂದು ಪೋಷಕರು ಕಿಡಿ ಕಾರಿದ್ದಾರೆ.

ಇನ್ನು ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಯು ಪ್ರತಿಕ್ರಿಯೆ ನೀಡಬೇಕಿದ್ದು ಹೆಚ್ಚಿನ ವಿಷಯ ಸತ್ಯತೆ ಏನು ಎಂಬುದು ಹೊರಬರಬೇಕಿದೆ.

Webstory




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!