ರಾಜ್ಯದ ಹಲವು ಜಿಲ್ಲೆಯಲ್ಲಿ ಮುಂದುವರೆದ ಮಳೆ- ಇಂದಿನ ಹವಾಮಾನ ವಿವರ ನೋಡಿ.

873

ಕಾರವಾರ:- ರಾಜ್ಯದಲ್ಲಿ ಹಲವು ಭಾಗ ದಲ್ಲಿ ಸೆಪ್ಟೆಂಬರ್ 24ರವರೆಗೆ ಭಾರೀ ಮಳೆಯಾಗಲಿದೆ.

ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಭಾರೀ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇನ್ನೂ 4 ದಿನ ಮಳೆ ಹೆಚ್ಚಾಗುವ ಸಾಧ್ಯತೆ ಇದೆ.

ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ ಸೇರಿದಂತೆ ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಇನ್ನೂ 2 ದಿನ ಸಾಧಾರಣ ಮಳೆಯಾಗಲಿದೆ.

ಕರಾವಳಿ ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್ ಘೋಷಿಸಲಾಗಿದೆ. ಇನ್ನೆರಡು ದಿನ ಹಾಸನ, ಕೊಡಗು, ಶಿವಮೊಗ್ಗ, ಮಂಡ್ಯ, ಕೋಲಾರ, ಮೈಸೂರು, ರಾಮನಗರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲೆಗಳ ಹವಾಮಾನ ವರದಿ.

ಬೆಂಗಳೂರು: 29-19
ಮಂಗಳೂರು: 29-24
ಶಿವಮೊಗ್ಗ: 27-21
ಬೆಳಗಾವಿ: 26-20
ಮೈಸೂರು: 30-20
ಮಂಡ್ಯ: 31-21
ರಾಮನಗರ: 31-20
ಮಡಿಕೇರಿ: 23-17
ಹಾಸನ: 27-19
ಚಾಮರಾಜನಗರ: 31-21
ಚಿಕ್ಕಬಳ್ಳಾಪುರ: 28-18
ಕೋಲಾರ: 29-20
ತುಮಕೂರು: 29-20
ಉಡುಪಿ: 29-24
ಕಾರವಾರ: 28-25
ಚಿಕ್ಕಮಗಳೂರು: 26-19
ದಾವಣಗೆರೆ: 28-21
ಚಿತ್ರದುರ್ಗ: 28-21
ಹಾವೇರಿ: 28-22
ಬಳ್ಳಾರಿ: 32-23
ಗದಗ: 28-21
ಕೊಪ್ಪಳ: 29-22
ರಾಯಚೂರು: 30-23
ಯಾದಗಿರಿ: 29-22
ವಿಜಯಪುರ: 29-22
ಬೀದರ್: 27-21
ಕಲಬುರಗಿ: 29-22
ಬಾಗಲಕೋಟೆ: 30-22
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!