ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದ್ ಹೇಗಿರುತ್ತೆ!ಪ್ರಯಾಣಿಸುವ ಜನರಿಗೆ ಇಲ್ಲಿದೆ ಮಾಹಿತಿ

1364

ಕಾರವಾರ:-ನಾಳೆ ಕರ್ನಾಟಕದಾಧ್ಯಾಂತ ಕನ್ನಡ ಸಂಘಟನೆಗಳು ಬಂದ್ ಗೆ ಕರೆ ಕೊಟ್ಟಿದೆ. ಹಲವು ಸಂಘಟನೆಗಳು ಈ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದೆ. ಗಡಿ ಜಿಲ್ಲೆ ಉತ್ತರ ಕನ್ನಡದಲ್ಲಿ ಕನ್ನಡ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದರೂ ಬಂದ್ ಗೆ ಬೆಂಬಲ ನೀಡಿಲ್ಲ. ಇದಲ್ಲದೇ ಜಿಲ್ಲೆಯ ಯಾವ ಸಂಘಟನೆಗಳೂ ಬಂದ್ ಗೆ ಬೆಂಬಲ ವ್ಯಕ್ತಪಡಿಸಿಲ್ಲ.

ಹೀಗಾಗಿ ಜಿಲ್ಲೆಯಲ್ಲಿ ನಾಳೆ ಬಂದ್ ಇರುವುದಿಲ್ಲ.ಕೆಲವು ಸಂಘಟನೆಗಳು ಬಾಹ್ಯ ಬೆಂಬಲ ನೀಡಿದ್ದು ಪ್ರತಿಭಟನೆ ಮಾಡಿ ಮನವಿ ನೀಡುವುದಕ್ಕಷ್ಟೇ ಸೀಮಿತವಾಗಿದೆ.

ಸಾರಿಗೆ ವ್ಯವಸ್ಥೆ ಹೇಗೆ?

ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂದಿನಂತೆ ಸಾರಿಗೆ ಸಂಪರ್ಕ ಇರಲಿದೆ.ಸರ್ಕಾರಿ ಸಾರಿಗೆ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಗೆ ಎಂದಿನಂತೆ ಸಂಚಾರ ಇರಲಿದೆ.ಬೆಂಗಳೂರಿಗೆ ತೆರಳುವವರಿಗೂ ಯಾವುದೇ ಸಮಸ್ಯೆ ಇಲ್ಲ.
ಆಟೋ,ಟ್ಯಾಕ್ಸಿ ಸೇರಿದಂತೆ ಎಲ್ಲವೂ ವ್ಯವಸ್ಥೆ ಎಂದಿನಂತೆ ಇರಲಿದೆ.

ಬಿಗಿ ಪೊಲೀಸ್ ಬಂದವಸ್ತ್!

ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸುವುದರಿಂದ ಜಿಲ್ಲೆಯಾಧ್ಯಾಂತ ಪೊಲೀಸ್ ಬಂದವಸ್ತ್ ಕಲ್ಪಿಸಲಾಗಿದ್ದು ಜಿಲ್ಲಾ ಮೀಸಲು ಪಡೆ ಹತ್ತು ತುಕಡಿಗಳು,ಸಿ.ಪಿ.ಐ ,ಪಿ.ಎಸ್.ಐ ಸೇರಿದಂತೆ 41 ಅಧಿಕಾರಿಗಳು ಬಂದವಸ್ತ್ ಗೆ ನಿಯೋಜನೆ ಮಾಡಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಹೇಳುವಂತೆ ನಾಳೆ ಯಾವುದೇ ಸಮಸ್ಯೆ ಯಾಗದಂತೆ ವ್ಯವಸ್ತೆ ಕಲ್ಪಿಸಲಾಗಿದ್ದು ಜಿಲ್ಲೆಯಲ್ಲಿ ಯಾವುದೇ ಬಂದ್ ಇಲ್ಲ,ಸಹಜ ಸ್ಥಿತಿ ಇದ್ದು ಜನರು ಹೆದರುವ ಅವಷ್ಯಕತೆ ಇಲ್ಲ ಎಂದಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!