ರಾಜ್ಯದಲ್ಲಿ ಪಡತರ ದಾರರಿಗೆ ಶಾಕಿಂಗ್ ನ್ಯೂಸ್:ಗಾಯದಮೇಲೆ ಬರೆ ಎಳೆದ ಸರ್ಕಾರ!

2064

ಈಗಿನ ಸರ್ಕಾರ ಒಂದಲ್ಲಾ ಒಂದು ತೊಂದರೆಗಳನ್ನ ಜನಸಾಮಾನ್ಯರಿಗೆ ನೀಡುತ್ತಾ ಬಂದಿದೆ. ಇದೀಗ ರಾಜ್ಯ ಸರ್ಕಾರ ಪಡಿತರ ಅಕ್ಕಿ ಮೇಲೆ ಕಣ್ಣುಹಾಕಿದ್ದು ಬಡವರ ಹೊಟ್ಟೆಯಮೇಲೆ ಬರೆ ಎಳೆಯುತ್ತಿದೆ.

ಹೊಸ ಧಾನ್ಯಗಳ ವಿತರಣೆಗೆ ಸಿದ್ಧವಾಗಿರುವ ಸರ್ಕಾರ ಏಪ್ರಿಲ್ 1ರಿಂದ ಪಡಿತರದಾರರಿಗೆ ಜೋಳ, ತೊಗರಿ, ರಾಗಿ ವಿತರಿಸಲಿದೆ. ಈ ಮೂಲಕ ಗುಡ್ ನ್ಯೂಸ್ ನೀಡಿದ್ರೇ, ಇದೇ ಸಂದರ್ಭದಲ್ಲಿ ಅಕ್ಕಿಯ ಪ್ರಮಾಣದಲ್ಲಿ ಕಡಿತ ಮಾಡಿ, ಜೋಳ, ರಾಗಿ, ತೊಗರಿ ವಿತರಿಸುತ್ತಿರುವುದು ಪಡಿತರದಾರರಿಗೆ ಶಾಕ್ ನೀಡಿದೆ.

ಈ ಕುರಿತಂತೆ ಮಾಹಿತಿ ನೀಡಿದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ್ ಕತ್ತಿ, ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯುವ ಜೋಳ, ತೊಗರಿ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಬೆಳೆಯುವ ರಾಗಿಯನ್ನು ಪಡಿತರದಾರರಿಗೆ ನೀಡಲು ನಿರ್ಧರಿಸಲಾಗಿದೆ. ಏಪ್ರಿಲ್ 1ರಿಂದ ಪಡಿತರದಾರರಿಗೆ ಜೋಳ, ತೊಗರಿ, ರಾಗಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಜೋಳ, ರಾಗಿ, ತೊಗರಿ ನೀಡಬೇಕು ಎಂಬುದು ಪಡಿತರ ಚೀಟಿದಾರರ ಹಲವು ದಿನಗಳ ಬೇಡಿಕೆಯಾಗಿತ್ತು. ಇಂತಹ ಅವರ ಬೇಡಿಕೆಯನ್ನು ಹಲವು ದಿನಗಳ ಬಳಿಕ ಈಗ ಈಡೇರಿಸಲಾಗುತ್ತಿದೆ.

ಆದ್ರೇ ಇದಕ್ಕಾಗಿ ಅಕ್ಕಿ ಪ್ರಮಾಣದಲ್ಲಿ ಕಡಿಮೆ ಮಾಡಿ, ಅದರ ಬದಲಾಗಿ ಜೋಳ, ರಾಗಿ, ತೊಗರಿ, ಕಡಲೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಆದ್ರೆ ಉ.ಕರ್ನಾಟಕ ಹೊರತು ಪಡಿಸಿದರೆ ಉಳಿದ ಭಾಗದಲ್ಲಿ ಅಕ್ಕಿ ಹೆಚ್ಚು ಬಳಸುತ್ತಾರೆ. ಇದರಿಂದಾಗಿ ಬಡವರಿಗೆ ತೊಂದರೆ ಆಗಲಿದೆ. ಆದರೂ ಏಪ್ರಿಲ್ ನಿಂದ ಈ ಬದಲಾವಣೆ ಮಾಡಿದ್ದು ಪಡಿತರ ದಾರರಿಗೆ ಶಾಕ್ ನೀಡಿದೆ.

ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ ಸೇರಿಕೊಳ್ಳಲು ಕೆಳಗಿನ ಲಿಂಕ್ ಬಳಸಿ:-

https://chat.whatsapp.com/HZAvUE3NWVB3skvzBG1tnj




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!