ಬೆಂಗಳೂರು: ರಾಜ್ಯದ 161 ತಾಲೂಕುಗಳನ್ನು ಬರಪೀಡಿತ (Drought Taluk) ತಾಲೂಕುಗಳು ಎಂದು ಘೋಷಿಸಿ ರಾಜ್ಯ ಸರ್ಕಾರ (Karnataka State Government) ಆದೇಶ ಹೊರಡಿಸಿದೆ. ಇವುಗಳಲ್ಲಿ 11 ಜಿಲ್ಲೆಗಳು ಸಂಪೂರ್ಣ ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ.
ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮೈಸೂರು, ಮಂಡ್ಯ, ಕೊಪ್ಪಳ, ಶಿವಮೊಗ್ಗ ಕಲಬುರಗಿ, ವಿಜಯಪುರ, ಧಾರವಾಡ, ವಿಜಯನಗರ ಜಿಲ್ಲೆಗಳ ಸಂಪೂರ್ಣ ತಾಲೂಕುಗಳು ಬರ ಎಂದು ಘೋಷಿಸಲ್ಪಟ್ಟಿದೆ.
ಅಲ್ಲದೆ, 34 ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ.
ಇನ್ನು ಬೆಳಗಾವಿಯ 14 ತಾಲೂಕುಗಳ ಪೈಕಿ 13
ತಾಲೂಕುಗಳು, ತುಮಕೂರು ಜಿಲ್ಲೆಯ 10 ತಾಲೂಕಲ್ಲಿ 9
ತಾಲೂಕುಗಳು, ಬಾಗಲಕೋಟೆ ಜಿಲ್ಲೆಯ 10 ತಾಲೂಕುಗಳಲ್ಲಿ 9 ತಾಲೂಕುಗಳು, ಗದಗ ಜಿಲ್ಲೆಯ 6 ತಾಲೂಕುಗಳಲ್ಲಿ 5 ತಾಲೂಕುಗಳು ಬರಪೀಡಿತ ತಾಲೂಕುಗಳು ಎಂದು ಸರ್ಕಾರ ಘೋಷಿಸಿದೆ. ಇದು ಬರಕ್ಕೆ ಅತಿ ಹೆಚ್ಚು ಬಾಧಿತವಾದ ಪ್ರದೇಶಗಳಾಗಿವೆ.
ಇನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ,ಯಲ್ಲಾಪುರ ,ಮುಂಡಗೋಡು,ಹಳಿಯಾಳ ಬರಪೀಡಿತ ಪ್ರದೇಶಗಳಾಗಿ ಘೋಷಿಸಲಾಗಿದೆ.
ಯಾವ ಜಿಲ್ಲೆಯ ಯಾವ ತಾಲೂಕು ಬರ ಪೀಡಿತ ಪಟ್ಟಿಯಲ್ಲಿದೆ ವಿವರ ಈ ಕೆಳಗಿನಂತಿದೆ:-




