Honnavara| ಆರೋಳ್ಳಿ ಗುಡ್ಡದಲ್ಲಿ ಪ್ರತ್ಯಕ್ಷವಾದ ಚಿರತೆ.

130

ಕಾರವಾರ:- ಹೊನ್ನಾವರದಲ್ಲಿ ಕಳೆದ ಒಂದು ವರ್ಷದಿಂದ ಚಿರತೆ ಕಾಟ ಹೆಚ್ಚಾಗಿದ್ದು ಇತ್ತೀಚೆಗೆ ಹಳ್ಳಿಯೊಂದರಲ್ಲಿ ಅರಣ್ಯ ಇಲಾಖೆ ಬೋನನ್ನ ಇಟ್ಟು ಚಿರತೆ ಹಿಡಿಯುವ ಪ್ರಯತ್ನ ವಿಫಲವಾಗಿತ್ತು.

ಹೊನ್ನಾವರ ಭಾಗದ ಹಲವು ಹಳ್ಳಿಗಳ ಭಾಗದಲ್ಲಿ ಹಸು,ನಾಯಿಗಳ ಮೇಲೆ ಚಿರತೆ ದಾಳಿ ನೆಡೆಸಿತ್ತು. ಆದ್ರೆ ಇದೀಗ ಹೊನ್ನಾವರದ ಆರೊಳ್ಳಿ ಗುಡ್ಡದ ಮೇಲೆ ಚಿರತೆ ಪ್ರತ್ಯಕ್ಷ ವಾಗಿ ಮತ್ತೆ ಆತಂಕ ಸೃಷ್ಟಿಸಿದೆ.

ಇಂದು ರಾತ್ರಿ ವೇಳೆ ಗುಡ್ಡದ ಮೇಲೆ ಬೇಟೆಗಾಗಿ ಕಾದು ಕುಳಿತಿದ್ದ ಚಿರತೆಯನ್ನು ಸ್ಥಳೀಯ ಯುವಕ ಪವನ್ ಎಂಬುವವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!