Karnataka Rain report

Rain alert:ಮಲೆನಾಡು ಕರಾವಳಿಯಲ್ಲಿ ಮೂರು ದಿನ ಅಬ್ಬರದ ಮಳೆ

111

ಬೆಂಗಳೂರು :- ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕು ಗೊಂಡಿದ್ದು ಕರಾವಳಿ,ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಹೆಚ್ಚಿನ ಮಳೆಯಾಗುವ(Rain ) ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ರಾಜ್ಯದ ಬೆಳಗಾವಿ,ದಕ್ಷಿಣಕನ್ನಡ,ಉಡುಪಿ,ಉತ್ತರ ಕನ್ನಡ,ಧಾರವಾಡ,ಗುಲ್ಬರ್ಗ,ಕೊಡಗು ,ರಾಯಚೂರು,ಶಿವನೊಗ್ಗ,ತುಮಕೂರು ಭಾಗಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ( meteorological department )ನೀಡಿದೆ.
ಈ ಭಾಗದಲ್ಲಿ ಗುಡುಗು ಸಹಿತ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆಗಳಿದ್ದು ಗಾಳಿಯ ವೇಗವು (heavy wind )ಘಂಟೆಗೆ 30 ರಿಂದ 40 ಕಿ.ಮೀ ವೇಗ ಇರುವ ಸಾಧ್ಯತೆಗಳಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಾರಿ ಮಳೆ ಮುನ್ನೆಚ್ಚರಿಕೆ (costal Karnataka rain alert )ವಹಿಸಲು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅಧಿಕಾರಿಗಳಿಗೆ ಸೂಚನೆ.

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಇನ್ನು 3 ರಿಂದ 4 ದಿನ ಭಾರೀ ಮಳೆಯಾಗುವ ಸಾದ್ಯತೆಯಿದ್ದು , ಈ ಅವಧಿಯಲ್ಲಿ ಯಾವುದೇ ಪ್ರಾಕೃತಿಕ ವಿಕೋಪಗಳು ಉಂಟಾಗದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಅವರು ಇಂದು ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.

ಸಮುದ್ರ ಪ್ರಕ್ಷುಬ್ಧ(sea) ಗೋಂಡಿರುವ ಕಾರಣ ಮೀನುಗಾರರು ಮೀನುಗಾರಿಕೆ ಗೆ ತೆರಳದಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಮೀನುಗಾರಿಕೆ ಇಲಾಖೆ ಮೂಲಕ ಎಲ್ಲಾ ಮೀನುಗಾರರಿಗೆ ಅಗತ್ಯ ಮಾಹಿತಿ ತಲುಪಿಸುವಂತೆ ಸುಚನೆ ನೀಡಿದರು.

ಮಳೆಯಿಂದ ಮನೆ ಕುಸಿತ ದಿಂದ ಜೀವ ಹಾನಿ ಹಾಗೂ ಜಾನುವಾರು ಹಾನಿಯಾಗದಂತೆ ಮುನ್ನೆಚ್ಚರಿಕೆ ಕೈಗೊಂಡು, ಗ್ರಾಮೀಣ ಪ್ರದೇಶಗಳಲ್ಲಿ ಈ ಬಗ್ಗೆ ಪಂಚಾಯಿತಿ ಮೂಲಕ ಜಾಗೃತಿ ಮುಡಿಸುವಂತೆ ಹಾಗೂ ತೀರಾ ಹಳೆಯ ಮನೆಗಳಲ್ಲಿ ವಾಸ ಮಾಡುತ್ತಿರುವವರಿಗೆ ಮಳೆ ನಿಲ್ಲುವವರೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವತೆ ಜಾಗ್ರತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಮುಂಜಾಗ್ರತೆ ಯಾಗಿ ಕಾಳಜಿ ಕೇಂದ್ರ ತೆರೆಯಲು ಸ್ಥಳ ಗುರುತಿಸಿಕೊಟ್ಟುಕೊಳ್ಳುವಂತೆ ಹಾಗೂ ಮುಳುಗುಗಾರರು ಹಾಗೂ ದೋಣಿಗಳನ್ನು ಸಿದ್ಧ ಪಡಿಸಿಟ್ಟುಕೊಳ್ಳಲು ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಅಂಕೋಲ ಮತ್ತು ಹೊನ್ನಾವರ ದಲ್ಲಿ ಇರುವ ಎಸ್.ಡಿ.ಆರ್.ಎಫ್ ತಂಡಗಳಿಗೆ ಅಗತ್ಯ ಬಿದಲ್ಲಿ ತಕ್ಷಣ ನೆರವಿಗೆ ಸಿದ್ಧವಿರುವಂತೆ ಸೂಚನೆ ನೀಡಿದರು.

ಭೂ ಕುಸಿತ ಸಂಭವಿಸಬಹುದಾದ ಪ್ರದೇಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಆ ಪ್ರದೇಶ ದಲ್ಲಿ ವಾಸಿಸುಸುವ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡುವಂತೆ ತಿಳಿಸಿದರು. ಸದ್ಯ ಜಿಲ್ಲೆಯಾಧ್ಯಾಂತ ಮೂರು ದಿನಗಳ ಕಾಲ ಆರೆಂಜ್ ಅಲರ್ಟ ಇರಲಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಘಂಟೆಯಲ್ಲಿ ಸುರಿದ ಮಳೆ ವಿವರ ಈ ಕೆಳಗಿನಂತಿದೆ:-




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!