ರಾಜ್ಯದಲ್ಲಿ ಇಂದಿನಿಂದ ಸೆ.24 ರ ವರೆಗೆ ಭಾರೀ ಮಳೆ-ಇಂದಿನ ಹವಾಮಾನ ವಿವರ ನೋಡಿ.

1643

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಸೆಪ್ಟೆಂಬರ್ 24ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹಲವು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: https://kannadavani.news/karwar-police-seized-marijuana-for-sale-to-students/

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇನ್ನೂ 4 ದಿನ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ ಸೇರಿದಂತೆ ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಇನ್ನೆರಡು ದಿನ ಸಾಧಾರಣ ಮಳೆಯಾಗಲಿದೆ. ಇದಲ್ಲದೇ ಕೆಲವು ಜಿಲ್ಲೆಗಳಲ್ಲಿ ಮಳೆ ಹಾಗೂ ಬಿಸಿಲಿನ ಮಿಶ್ರಣ

ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕೆಲವು ಭಾಗಗಳಲ್ಲಿ ಮಧ್ಯಾಹ್ನದ ನಂತರ ಸ್ವಲ್ಪ ಬಿಸಿಲು ಕಾಣಿಸಿಕೊಳ್ಳುವುದು. ಸಂಜೆ ವೇಳೆ ವಾತಾವರಣ ತಂಪಾಗಿದ್ದು, ಕೆಲವು ಕಡೆ ಮಳೆಯಾಗಲಿದೆ.

ಇಂದಿನ ಹವಾಮಾನ ವರದಿ.

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಇಂದಿನ ಹವಾಮಾನ ವರದಿ:

ಬೆಂಗಳೂರು: 31-19
ಮಂಗಳೂರು: 30-24
ಶಿವಮೊಗ್ಗ: 29-20
ಬೆಳಗಾವಿ: 27-21
ಮೈಸೂರು: 32-20
ಮಂಡ್ಯ: 32-21
ಚಿಕ್ಕಬಳ್ಳಾಪುರ: 29-19
ಕೋಲಾರ: 31-20
ತುಮಕೂರು: 31-20
ಉಡುಪಿ: 30-24
ಕಾರವಾರ: 29-26
ರಾಮನಗರ: 29-23
ಮಡಿಕೇರಿ: 25-17
ಹಾಸನ: 28-19
ಚಾಮರಾಜನಗರ: 32-20
ಚಿಕ್ಕಮಗಳೂರು: 28-18
ದಾವಣಗೆರೆ: 31-22
ಚಿತ್ರದುರ್ಗ: 31-21
ಹಾವೇರಿ: 30-22
ಬಳ್ಳಾರಿ: 32-23
ಗದಗ: 31-21
ಕೊಪ್ಪಳ:31-22
ರಾಯಚೂರು: 31-23
ಯಾದಗಿರಿ: 29-23
ವಿಜಯಪುರ: 29-22
ಬೀದರ್: 26-21
ಕಲಬುರಗಿ: 29-23
ಬಾಗಲಕೋಟೆ: 31-22




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!