ತಪ್ಪು ಮಾಡಿದವರ್ಯಾರೋ ಶಿಕ್ಷೆ ಸಿಕ್ಕಿದ್ದು ಪೊಲೀಸರಿಗೆ!ಮಾರುತಿ ನಾಯ್ಕ ಸಾವು ಪ್ರಕರಣದಲ್ಲಿ ಮೂರು ಜನ ಪೊಲೀಸರ ಅಮಾನತು.

270

ಕಾರವಾರ :- ಎತ್ತಿಗೆ ಜ್ವರ ಬಂದರೇ ಎಮ್ಮೆಗೆ ಬರೆ ಎಳೆದರು ಎನ್ನುವಂತೆ ಕಾರವಾರದ ಮಾರುತಿ ನಾಯ್ಕ ಸಾವಿನ ಪ್ರಕರಣದಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಶಿಕ್ಷೆ ದೊರೆತಿದೆ. ಪೊಲೀಸರು ಎಂದ ಕೂಡಲೇ ಬಹುತೇಕ ಜನರು ತೆಗಳುವವರೇ ಹೆಚ್ಚು ಇದು ಸಾಮಾನ್ಯ ಕೂಡ.

ಆದ್ರೆ ತನಿಖೆ ಕೈಗೊಂಡಿದ್ದ ಪೊಲೀಸರ ಬಗ್ಗೆ ಮಾರುತಿ ನಾಯ್ಕ ಸೆಲ್ಫಿ ವಿಡಿಯೋ ಮಾಡಿ ಮಾತಿನ ಬರದಲ್ಲಿ ಹೇಳಿದ್ದ ಮಾತುಗಳು ಇದೀಗ ಪೊಲೀಸರಿಗೆ ಉರುಳಾಗಿದೆ. ಹೌದು ಈತನಿಗೆ ಎಲಕಪಾಟಿ ಕುಟುಂಬದವರು ಹಲ್ಲೆಮಾಡಿದ್ದಾಗ ಕಾರವಾರ ಸರ್ಕಾರಿ ಆಸ್ಪತ್ರೆಯಲ್ಲಿದ್ದಾಗ ಕುದ್ದು ಪೊಲೀಸರು ತೆರಳಿ ತನಿಖೆ ಕೈಗೊಂಡು ಪ್ರಕರಣ ದಾಖಲಿಸಿದ್ದರು. ಆದ್ರೆ ಪ್ರಕರಣ ತನಿಖೆ ಹಂತದಲ್ಲಿತ್ತು. ಇನ್ನು ಈತ ಎಲಕಪಾಟಿ ವಿರುದ್ಧ ಮಾಡಿದ್ದ ವಿಡಿಯೋ ಆಧರಿಸಿ ಆತನನ್ನು ಇದೇ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದರು.

ಆದ್ರೆ ಮಾರುತಿ ನಾಯ್ಕ ಹಲ್ಲೆ ಪ್ರಕರಣ ಹಲವು ತಿರುವು ಪಡೆದುಕೊಂಡಿದೆ. ಕಾರವಾರದಲ್ಲಿ ಮಾರುತಿ ನಾಯ್ಕ ಆತ್ಮಹತ್ಯೆ ಪ್ರಕರಣದಲ್ಲಿ ಮೂರು ಜನ ಪೊಲೀಸ್ ಸಿಬ್ಬಂದಿಗಳ ಅಮಾನತ್ತು ಮಾಡಲಾಗಿದೆ.
ಸಿ.ಪಿ.ಐ ಕುಸುಮಾಧರ ಕೆ, PSI ಶಾಂತಿನಾಥ, ಪೊಲೀಸ್ ಕಾನಸ್ಟೇಬಲ್ ದೇವರಾಜ್ ಅಮಾನತು ಗೊಂಡ ಪೊಲೀಸ್ ಸಿಬ್ಬಂದಿಗಳಾಗಿದ್ದು ಮಾರುತಿ ನಾಯ್ಕ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸುಸೈಡ್ ನೋಟ್ ಬರೆದು ವಿಡಿಯೋ ರೆಕಾರ್ಡ್ ಮಾಡಿದ್ದರು.

ಪೊಲೀಸರು, ಆರೋಪಿತರಾದ ಎಲಿಷಾ ಎಲಕಪಾಟಿ, ಬಸವರಾಜ, ಸುರೇಶ್ ಮತ್ತಿತರರ ಹೆಸರು ಸುಸೈಡ್ ನೋಟ್‌ನಲ್ಲಿ ದಾಖಲಾಗಿತ್ತು.

ದಲಿತ ಮುಖಂಡ ಎಲಿಷಾ ಎಲಕಪಾಟಿ ಹಿಂದೂ ಧರ್ಮದ ವಿರುದ್ಧ ನೀಡಿದ ಹೇಳಿಕೆಯನ್ನು ಆತ್ಮಹತ್ಯೆ ಮಾಡಿಕೊಂಡಿದ್ದ ಮಾರುತಿ ನಾಯ್ಕ್ ರೆಕಾರ್ಡ್ ಮಾಡಿಕೊಂಡಿದ್ದು ಇದು ರಾಜ್ಯಾಧ್ಯಾಂತ ಸುದ್ದಿಯಾಗಿತ್ತು.
ಬಳಿಕ ಎಲಿಷ ಪಾಟಿ ಕುಟುಂಬಸ್ಥರು ಮಾರುತಿ ನಾಯ್ಕ್ ಮೇಲೆ ಹಲ್ಲೆ ನಡೆಸಿದ್ದರು. ಎಲಿಷಾ ಕುಟುಂಬಕ್ಕೆ ಸಪೋರ್ಟ್ ಮಾಡಿ ಮಾರುತಿ ನಾಯ್ಕ‌ಗೆ ಪೊಲೀಸರು ಕಿರುಕುಳ ನೀಡಿದ್ದರು ಎಂಬ ಆರೋಪ ಕುಟುಂಬದ್ದಾಗಿದೆ.

ಈ ಎರಡು ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಪ್ರಕರಣದಲ್ಲಿ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದು ಅ.20ರಂದು ಮಾರುತಿ ನಾಯ್ಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಮಾರುತಿ ನಾಯ್ಕ ಈ ಹಿಂದೆ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬ ಮಾಹಿತಿ ಇದೆ. ಮಾನಸಿಕವಾಗಿ ಸೂಕ್ಷ್ಮತನದ ವ್ಯಕ್ತಿಯಾಗಿದ್ದ ಈತ ಚಂಚಲ ಸ್ಥಿತಿ ಕುಟುಂಬವನ್ನು ಅನಾಥವಾಗಿಸಿದೆ.
ಇನ್ನು ತನಿಖೆ ನಡೆಸುವ ಅಧಿಕಾರ ಪೊಲೀಸರದ್ದು , ನ್ಯಾಯ ಕೊಡಬೇಕಾದ್ದು ನ್ಯಾಯಾಲಯ. ಪ್ರತಿಯೊಬ್ಬರಿಗೂ ನ್ಯಾಯ ಸಿಗಲೇ ಬೇಕು ,ಸಿಗುತ್ತದೆ.ಆದ್ರೆ ಕಾಯುವ ಮನಸ್ತಿತಿ ದೂರು ನೀಡಿದವರಿಗೆ ಇರಬೇಕು. ಆದರೆ ಮಾರುತಿನಾಯ್ಕನ ದುಡುಕುತನದ ಸಾವು ಇಡೀ ಕುಟುಂಬವನ್ನು ಅನಾಥವಾಗಿಸಿದೆ. ಜೊತೆಗೆ ಪೊಲೀಸರು ತನಿಖೆ ನಡೆಸುವ ಆತ್ಮವಿಶ್ವಾಸವನ್ನು ಸಹ ಕುಗ್ಗಿಸುವಂತೆ ಮಾಡಿದೆ.ಇದೀಗ ಮಾರುತಿ ನಾಯ್ಕ ಸಾವು ರಾಜಕೀಯಕ್ಕೆ ಬಣ್ಣ ತಿರುಗುವುದು ಮುಂದೆ ಇನ್ಯಾವ ರೂಪ ಪಡೆಯುತ್ತದೆಯೋ ಎಂಬ ಆತಂಕ ಮೂಡಿದೆ.

ಮಾರುತಿ ನಾಯ್ಕ ಆತ್ಮಹತ್ಯೆ ಪ್ರಕರಣ ಸಂಬಂಧ ಕಾರವಾರದ ನಗರದಲ್ಲಿ ಕ್ಯಾಂಡಲ್ ಲೈಟ್ ಹಿಡಿದು ಮೆರವಣಿಗೆ ಮಾಡುವ ಮೂಲಕ ಮೌನ ಪ್ರತಿಭಟನೆ ಮಾಡುವ ಮೂಲಕ ಮಾರುತಿ ನಾಯ್ಕ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!