ಬನವಾಸಿ ಕದಂಬೋತ್ಸವಕ್ಕೆ ಹಣವೇ ಇಲ್ಲ :ಪಂಪ ಪ್ರಶಸ್ತಿ ಕೊಟ್ಟು ಮುಗಿಸಿದ ಮುಖ್ಯಮಂತ್ರಿ!

166

ಕಾರವಾರ ಪೆಬ್ರವರಿ 20:- ರಾಜ್ಯದ ಪ್ರತಿಷ್ಟಿತ ಪಂಪ ಪ್ರಶಸ್ತಿಯನ್ನು ಬನವಾಸಿಯ ಕದಂಬೋತ್ಸವದಲ್ಲಿ ಕೊಡುವುದು ವಾಡಿಕೆ.ಆದ್ರೆ ಬನವಾಸಿಯಲ್ಲಿ ಕದಂಬೋತ್ಸವ ನಡೆಸುವುದು ಇರಲಿ ಬೆಂಗಳೂರಿನ (Bangalore) ರವೀಂದ್ರ ಕಲಾಕ್ಷೇತ್ರದಲ್ಲಿ ಜನವರಿ 31ರಂದೇ ಶಿವಮೊಗ್ಗ ಜಿಲ್ಲೆಯ ಸಾಗರದ ಸಾಹಿತಿ ನಾಡಿಸೋಜಾ ರವರಿಗೆ ಕೊಟ್ಟು ಕೈ ತೊಳೆದುಕೊಳ್ಳುವ ಮೂಲಕ ಬನವಾಸಿಯ ಕದಂಬೋತ್ಸವ ಕಾರ್ಯಕ್ರಮದ ರಂಗನ್ನೇ ಆಡಳಿತ ಹಾಳುಕೆಡವಿದ್ದು ಬನವಾಸಿ ಉತ್ಸವ (Banavasi utsava) ಮಹತ್ವ ಕಳೆದುಕೊಂಡಿದೆ.

ಪಂಪನ ಕರ್ಮಭೂಮಿಯಾಗಿರುವ ಬನವಾಸಿಯಲ್ಲಿ ಅದ್ದೂರಿ ಕದಂಬೋತ್ಸವ ನಡೆಸಿ, ಕಳೆದ 28 ವರ್ಷಗಳಿಂದ ನೀಡುತ್ತಿದ್ದ ಪದ್ಧತಿಯನ್ನು ಮುರಿದು ಬೆಂಗಳೂರಿನಲ್ಲೇ ಪ್ರಶಸ್ತಿ ಪ್ರದಾನ ಮಾಡಿರುವುದು ಬನವಾಸಿ ಹಾಗೂ ಸುತ್ತಲಿನ ಭಾಗದ ಕನ್ನಡಾಭಿಮಾನಿಗಳ ಅಸಮಾಧಾನಕ್ಕೆ ಇದೀಗ ಕಾರಣವಾಗಿದ್ದು ಸರ್ಕಾರದ ಈ ಧೋರಣೆಯನ್ನು ಬನವಾಸಿ ಕನ್ನಡ ಸಂಘಟನೆಗಳು ಖಂಡಿಸಿವೆ.

ಪ್ರಶಸ್ತಿ ಮಹತ್ವ ಹಾಗೂ ಇತಿಹಾಸ

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಮತ್ತು ಅನನ್ಯ ಕೊಡುಗೆ ನೀಡಿದವರನ್ನು ಗುರುತಿಸಿ ಕನ್ನಡದ ಆದಿಕವಿ ಪಂಪನ ಹೆಸರಿನಲ್ಲಿ 1987ರಿಂದ ಪ್ರಶಸ್ತಿ ನೀಡಲಾಗುತ್ತಿದೆ.

ಪ್ರಶಸ್ತಿ ,ಫಲಕ ಹಾಗೂ 5 ಲಕ್ಷ ನಗದು ಹೊಂದಿದೆ. ಈ ಮೊದಲು ಡಾ.ಕುವೆಂಪು (Kuvempu)ನಂತರ ಡಾ.ಶಿವರಾಮ ಕಾರಂತ,(shivarm karanth) ಗೋಪಾಲಕೃಷ್ಣ ಅಡಿಗ, ಕೆ.ಎಸ್‌. ನರಸಿಂಹಸ್ವಾಮಿ ಮುಂತಾದ ಕನ್ನಡ ಸಾರಸ್ವತ ಲೋಕದ ದಿಗ್ಗಜರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

2023ರ ಜನವರಿ ಯಲ್ಲಿ 36ನೇ ವರ್ಷದ ಪಂಪ ಪ್ರಶಸ್ತಿಯನ್ನು ಡಾ.ಎಸ್.ಆರ್. ರಾಮಸ್ವಾಮಿ ಅವರಿಗೆ ಕದಂಬೋತ್ಸವ ದಲ್ಲಿ ಪ್ರದಾನ ಮಾಡಲಾಗಿತ್ತು.

ಬನವಾಸಿಯಲ್ಲಿ(Banavasi) 1996ರಿಂದ ಪಂಪ ಪ್ರಶಸ್ತಿ ಪ್ರದಾನ ಮಾಡುವುದನ್ನು ಸರ್ಕಾರ ರೂಢಿಸಿಕೊಂಡಿತ್ತು. ಮೊದಲು ಖಾಸಗಿ ಕಾರ್ಯಕ್ರಮವಾಗಿದ್ದ ಕದಂಬೋತ್ಸವ 1996ರಿಂದ ಸರ್ಕಾರದ ಅಧಿಕೃತ ಕಾರ್ಯಕ್ರಮವಾಗಿ ಬದಲಾಗಿತ್ತು. ವಿವಿಧ ಕಾರಣಗಳಿಂದ ಕದಂಬೋತ್ಸವ (kadambosthava) ರದ್ದಾದರೇ ಪಂಪ ಪ್ರಶಸ್ತಿ ನೀಡುವುದನ್ನು ಸಹ ತಡೆಹಿಡಿಯಲಾಗುತಿತ್ತು. ಒಂದುವೇಳೆ ಪ್ರಶಸ್ತಿ ಸೂಚಿತ ಗಣ್ಯರು ಬಾರದೇ ಇದ್ದರೇ ಅವರ ಮನೆಗೆ ಹೋಗಿ ಪ್ರಶಸ್ತಿ ನೀಡಿದ ಉದಾಹರಣೆಗಳಿವೆ. ಇಂತಹ ಸಂದರ್ಭ ಹೊರತುಪಡಿಸಿ 35 ವರ್ಷದ ಇತಿಹಾಸದಲ್ಲಿ ಬನವಾಸಿ ಬಿಟ್ಟು ಬೇರೆಡೆ ಪ್ರಶಸ್ತಿ ನೀಡಿದ ಘಟನೆಗಳೇ ಇಲ್ಲ.

ಈ ಹಿಂದೆ ಪಂಪನ ಹುಟ್ಟೂರಿನಲ್ಲಿ ಪ್ರಶಸ್ತಿ ನೀಡಬೇಕು ಎಂಬ ಕೂಗೆದ್ದರೂ ಬನವಾಸಿಯಲ್ಲೇ ಪ್ರಶಸ್ತಿ ಪ್ರಧಾನ ಮಾಡಲಾಗಿತ್ತು. ಹೀಗಾಗಿ ಜಿಲ್ಲಾ ಮಟ್ಟದ ಬನವಾಸಿ ಕದಂಬೋತ್ಸವ ರಾಜ್ಯ ಮಟ್ಟದ ಕಾರ್ಯಕ್ರಮವಾಗಿ ಬದಲಾಗಿತ್ತು.

ಶಿರಸಿ ತಾಲೂಕಿನ ಬನವಾಸಿಯಲ್ಲಿ ಫೆ.24 ಹಾಗೂ 25ರಂದು ಕದಂಬೋತ್ಸವಕ್ಕೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಮಾ.5,ಮತ್ತು 6ಕ್ಕೆ ಮುಂದೂಡಿಕೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಹಣವೇ ಮಂಜೂರಾಗಿಲ್ಲ!


ಕದಂಬೋತ್ಸವ ದಿನಾಂಕ ನಿಗಧಿ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿತ್ತು. ಆದರೇ
ಈ ವರ್ಷ 2.5 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಳಿಸಿದ್ದು, ಇದುವರೆಗೂ ಮಂಜೂರಾಗಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಈ ಬಾರಿ ದಿನಾಂಕ ಬದಲು ಮಾಡಿದರೂ ಕದಂಬೋತ್ಸವ ನಡೆಯುವುದು ಅನುಮಾನವಾಗಿದೆ.

ಕ್ಷೇತ್ರದ ಶಾಸಕರಿಗೇ ಮಾಹಿತಿ ಇಲ್ಲ!

ಹಿಂದಿನ ಕದಂಬೋತ್ಸವ ವನ್ನು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಿವರಾಮ್ ಹೆಬ್ಬಾರ್ ರವರು ಆತುರದಲ್ಲೇ ಕದಂಬೋತ್ಸವ ಕಾರ್ಯಕ್ರಮವನ್ನು ಮಾಡಿ ಮುಗಿಸಿದ್ದರು. ಹಲವು ಗೊಂದಲದ ನಡುವೆ ಅವ್ಯವಸ್ಥೆ ಮಧ್ಯೆ ಕದಂಬೋತ್ಸವ ನಡೆದುಹೋಗಿತ್ತು. ಆದರೇ ಇದೀಗ ಅದೇ ಕ್ಷೇತ್ರದ ಶಾಸಕರಾಗಿರುವ ಹೆಬ್ಬಾರ್ ರವರಿಗೂ ಸಹ ಪಂಪ ಪ್ರಶಸ್ತಿ ನೀಡಿದ ಕುರಿತು ಮಾಹಿತಿ ಸಹ ನೀಡಿಲ್ಲ‌ಹೀಗಾಗಿ ಅವರಿಗೂ ಪಂಪ ಪ್ರಶಸ್ತಿ ಪ್ರಧಾನ ಮಾಡಲಾಗಿದೆಯೇ ಎಂಬ ಪ್ರಶಸ್ತಿ ಕಾಡುವಂತೆ ಮಾಡಿದೆ.

ಸಧ್ಯ ಸರ್ಕಾರದ ಬಳಿ ಹಣವಿಲ್ಲ ‌ಈ ಭಾರಿ ಬನವಾಸಿಯಲ್ಲಿ ನಡೆಯುವ ಕದಂಬೋತ್ಸವ ,ಕರಾವಳಿ ಭಾಗದಲ್ಲಿ ನಡೆಯುವ ಕರಾವಳಿ ಉತ್ಸವ ಬಜೆಟ್ ಕಾರಣಕ್ಕೆ ಮುಂದೂಡಲ್ಪಡುತಿದ್ದು ಕಾರ್ಯಕ್ರಮ ಜರಗುವುದು ಅನುಮಾನ ಎನ್ನಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!