ಹಳಿಯಾಳದಲ್ಲಿ ಚೋರರ ಕಾಟಕ್ಕೆ ಜನ ಸುಸ್ತು!

TextMaster 02 18 10.20.28 TextMaster 02 18 10.20.28

ಹಳಿಯಾಳ,ಪೆಬ್ರವರಿ19:- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಕಳೆದ ಹದಿನೈದು ದಿನದಿಂದ ಕಳ್ಳರ ಹಾವಳಿ ಮಿತಿಮೋರಿದೆ. ಒಂದೆಡೆ ಅಂಗಡಿ ಮುಂಗಟ್ಟುಗಳಿಗೆ ಕನ್ನ ಹಾಕಿ ಲಕ್ಷಾಂತರ ವಸ್ತುಗಳನ್ನು ಕದ್ದು ಹೋದರೇ ,ಹಳಿಯಾಳ ಬಸ್ ನಿಲ್ದಾಣ ( hariyala KSRTC bus stop) ನಲ್ಲಿ ಜೇಬು ಕಳ್ಳರ ಕಾಟ ಮಿತಿ ಮೀರಿದ್ದು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಮೊಬೈಲ್ ,ಹಣ ಕಳ್ಳರ ಪಾಲಾಗುತ್ತಿದೆ.

IMG20240218152631

ಸೋಮವಾರ ಕಳ್ಳರ ಕೈ ಚಳಕಕ್ಕೆ ನಾಲ್ಕಕ್ಕೂ ಹೆಚ್ಚು ಮೊಬೂಲ್ ,ಪರ್ಸಗಳು ಕಳ್ಳತನವಾಗಿದೆ. ಈ ಬಗ್ಗೆ ಹಳಿಯಾಳ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರತಿ ದಿನ ಹಳಿಯಾಳ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಟಾರ್ಗೆಟ್ ಮಾಡುವ ಕಳ್ಳರು ಯಾವುದೇ ಹೆದರಿಕೆ ಇಲ್ಲದೇ ಕಳ್ಳತನ ಮಾಡುತಿದ್ದು ಪ್ರತಿ ದಿನ ಕಳ್ಳತನವಾದ ವರದಿ ಬರುತ್ತಿದೆ.

Advertisement

ಇದಕ್ಕೆಲ್ಲಾ ಕಾರಣ ಬಸ್ ನಿಲ್ದಾಣ ದಲ್ಲಿ ಸಿಸಿ ಕ್ಯಾಮರಾ (CC Camera) ಇಲ್ಲದೇ ಕಳ್ಳರಿಗೆ ಕಳ್ಳತನ ಮಾಡಲು ಮತ್ತಷ್ಟು ಅವಕಾಶ ದೊರೆತಂತಾಗಿದ್ದು ಕಳ್ಳರು ಯಾವುದೇ ಭಯವಿಲ್ಲದೇ ಕಳ್ಳತನದಲ್ಲಿಳಿಯುತಿದ್ದಾರೆ.

ಇನ್ನು ಪೊಲೀಸರಿಗೆ ಸಹ ಸಿಸಿ ಕ್ಯಾಮರಾ ದೃಶ್ಯಗಳು ದೊರೆಯದೇ ಕಳ್ಳರನ್ನು ಹಿಡಿಯಲು ಹರಸಾಹಸ ಪಡಬೇಕಾದ ಸ್ಥಿತಿ ಹಳಿಯಾಳ ಬಸ್ ನಿಲ್ದಾಣದಲ್ಲಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement