ಉತ್ತರ ಕನ್ನಡ ಗೃಹರಕ್ಷಕ ದಳಕ್ಕೆಸೇರಬಯಸುವವರಿಗೊಂದು ಅವಕಾಶ|ಇಂದೇ ಅರ್ಜಿ ಸಲ್ಲಿಸಿ.

234

ಕಾರವಾರ ,ಪೆಬ್ರವರಿ 20:- ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನ ಘಟಕ ಮತ್ತು ಉಪ ಘಟಕಗಳಲ್ಲಿ ಖಾಲಿ ಇರುವ 202 ಸ್ಥಾನಗಳ ಗೃಹ ರಕ್ಷಕರ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ

ಅರ್ಹತೆಗಳೇನು?

ಎಸ್ ಎಸ್ ಎಲ್ ಸಿ ಉತ್ತೀರ್ಣಗೊಂಡಿರುವ 19 ರಿಂದ 50 ವರ್ಷದೊಳಗಿನ ದೈಹಿಕ ಸದೃಢತೆ ಹೊಂದಿರುವ ಪುರುಷ ಮತ್ತು ಮಹಿಳೆಯರಿಗೆ ಅವಕಾಶ.ಎತ್ತರ: ಕನಿಷ್ಠ 163 ಸೆ.ಮೀ ಪುರುಷರಿಗೆ, 150 ಸೆ.ಮೀ ಮಹಿಳೆಯರಿಗೆ.

ಅರ್ಜಿ ಸಲ್ಲಿಕೆ ಹೇಗೆ ?

29-02-2024 ರೊಳಗೆ ಅರ್ಜಿ ಸಲ್ಲಿಸಬಹುದು.
ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು 20.02.2024 ರಿಂದ 29.02.2024 ರವರೆಗೆ ಜಿಲ್ಲಾ ಸಮಾದೇಷ್ಟರ ಕಛೇರಿ, ಗೃಹರಕ್ಷಕ ದಳ, ದಿವೇಕರ ಕಾಮರ್ಸ್ ಕಾಲೇಜ್ ಎದುರು, ಕಾಜುಭಾಗ, ಕಾರವಾರದಲ್ಲಿ ಸಲ್ಲಿಸಬೇಕು.

ಉತ್ತರ ಕನ್ನಡ ಜಿಲ್ಲಾ(Uttrakannada) ಗೃಹರಕ್ಷಕ ದಳದಲ್ಲಿ( gruharakshaka dala) ಪ್ರಸ್ತುತ ಖಾಲಿ ಇರುವ ಕಾರವಾರ, ಚೆಂಡಿಯಾ, ಮಲ್ಲಾಪುರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಹಳಿಯಾಳ, ದಾಂಡೇಲಿ, ಜೊಯಿಡಾ ಘಟಕ/ಉಪಘಟಕಗಳ ಒಟ್ಟು 202 ಸ್ವಯಂ ಸೇವಕ ಗೃಹರಕ್ಷಕ/ಗೃಹರಕ್ಷಕಿಯರ ಭರ್ತಿಗಾಗಿ ಅರ್ಹ (jobs) ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ:- Yakshagana: ಕುಮಟಾದಲ್ಲಿ ಸಂಜೀವಿನಿ ಪರ್ವತ ಧರೆಗಿಳಿಸಿದ ಆಂಜನೇಯ!

ದಾಖಲೆ ಏನು ಬೇಕು?

ಎಸ್,ಎಸ್,ಎಲ್,ಸಿ ಪಾಸಾದ ಮೂಲ ಅಂಕಪಟ್ಟಿ ( ಧೃಢೀಕೃತ ಪ್ರತಿ ) ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ತೋರಿಸಿ ಉಚಿತವಾಗಿ ಅರ್ಜಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಅರ್ಜಿ ಭರ್ತಿ ಮಾಡಿ ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ಆಧಾರ್ ಕಾರ್ಡ್ ಮತ್ತು ಎಸ್.ಎಸ್.ಎಲ್.ಸಿ ಅಂಕಪಟ್ಟಿಯ ನಕಲು ಪ್ರತಿ ಹಾಗೂ ತಾಲೂಕು ವೈದ್ಯಾಧಿಕಾರಿಗಳಿಂದ ಪಡೆದ ದೈಹಿಕ ಸದೃಢತೆ ಪ್ರಮಾಣ ಪತ್ರ ಗಳನ್ನು ಜಿಲ್ಲಾ ಗೃಹರಕ್ಷಕ ದಳದ ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಂಪರ್ಕ ಸಂಖ್ಯೆ 08382- 226361 / 200137 ಸಂಪರ್ಕಿಸಬಹುದಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾಧೇಸ್ಟರಾದ ಡಾ.ಸಂಜು ತಿಮ್ಮಣ್ಣ ನಾಯಕರನ್ನು ಸಂಪರ್ಕಿಸಬಹುದು.

ಆಧ್ಯತೆ ಯಾರಿಗೆ?

ಕೌಶಲ್ಯ ತರಬೇತಿ (ಕಂಪ್ಯೂಟರ್ ಜ್ಞಾನ, ಹೆವಿ ಡ್ರೈವಿಂಗ್, ಅಡುಗೆ ಭಟ್ಟರು, ಮೆಕಾನಿಕ್, ಪೈಂಟರ್ ಮತ್ತು ಪ್ಲಂಬರ್), ಎನ್.ಸಿ.ಸಿ ಹಾಗೂ ರಾಜ್ಯ ಮತ್ತು ರಾಷ್ಟಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!