Yakshagana: ಕುಮಟಾದಲ್ಲಿ ಸಂಜೀವಿನಿ ಪರ್ವತ ಧರೆಗಿಳಿಸಿದ ಆಂಜನೇಯ!

198

ಡಿಜಿಟಲ್ ಯುಗದಲ್ಲಿ ಯಕ್ಷಗಾನ ಎಂಬ ಸಂಪ್ರದಾಯಿಕ ಜನಪದ ಗಂಡು ಕಲೆ ಅವನತಿಯತ್ತ ಸಾಗಿದೆ. ಆದ್ರೆ ಸದಾ ಪ್ರಯೋಗದ ಮೂಲಕ ಜನರನ್ನ ತನ್ನತ್ತ ಸೆಳೆದಿಟ್ಟುಕೊಂಡಿರುವ ಈ ಕಲೆ ಕರಾವಳಿಯಲ್ಲಿ ಈಗಲೂ ಜೀವಂತವಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮಣಕಿ ಮೈದಾನದಲ್ಲಿ ನಡೆದ “ಹನುಮ ಸಂಜೀವಿನಿ ” ಯಕ್ಷ ರೂಪಕದಲ್ಲಿ ಹನುಮ ಸಂಜೀವಿನಿ ಪರ್ವತವನ್ನು ಹೊತ್ತು ತರುವ ವಿನೂತನ ಪ್ರಯೋಗ ಮಾಡಲಾಗಿದ್ದು ಆಕಾಶದಲ್ಲಿ ಹನುಮನು ಸಜೀವಿನ ಪರ್ವತ ಹೊತ್ತು ತರುವ ದೇಶ್ಯ ಎಲ್ಲರ ಗಮನ ಸೆಳೆಯಿತು.

ಸಂಜೀವಿನಿ ಎಂಬ ಯಕ್ಷಗಾನ ಪ್ರಸಂಗದಲ್ಲಿ ಆಂಜನೇಯ ಪರ್ವತ ಧರೆಗಿಳಿಸುವ ದೃಶ್ಯ ನಡೆದಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ವಿಡಿಯೋ ನೋಡಿ

ಹನುಮ ಸಂಜೀವಿನಿ ಹಾಗೂ ಪವಿತ್ರ ಪದ್ಮಿನಿ ಪ್ರಸಂಗಗಳು ಪ್ರದರ್ಶನಗೊಂಡಿತು. ಈ ಬಾರಿ ಒಂದು ನೂರು ಅಡಿಗಳ ಮೇಲಿಂದ ಹನುಮಂತನು ಸಂಜೀವಿನಿ ಪರ್ವತವನ್ನು ಹೊತ್ತು ವೇದಿಕೆಗೆ ಇಳಿದು ಬಂದಿದೆ.

Yakshagana: ಕುಮಟಾದಲ್ಲಿ ಸಂಜೀವಿನಿ ಪರ್ವತ ಧರೆಗಿಳಿಸಿದ ಆಂಜನೇಯ!

ಆಕರ್ಷಕ ಸನ್ನಿವೇಶದಲ್ಲಿ ಹನುಮಂತನ ಪಾತ್ರವನ್ನು ಕಲಾಗಂಗೋತ್ರಿಯ ಅಧ್ಯಕ್ಷರು, ಹವ್ಯಾಸಿ ಯಕ್ಷಗಾನ ಕಲಾವಿದರಾದ ಗಣೇಶ ಭಟ್ ಬಗ್ಗೋಣ ಇವರು ನಿರ್ವಹಿಸಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!