ಉತ್ತರ ಕನ್ನಡ ಲೋಕಸಭೆ ಚುನಾವಣೆ- 5 ಜನ ಅಭ್ಯರ್ಥಿ ಪಟ್ಟಿ ಸಿದ್ದ -ಸಚಿವ ಹೆಚ್.ಕೆ ಪಾಟೀಲ್

174

ಕಾರವಾರ:- ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ (Uttara Kannada Lok Sabha constituency )ಗೆಲ್ಲುವ ಅಭ್ಯರ್ಥಿಗಳನ್ನು ಪಟ್ಟಿ ಮಾಡಿ ಕಳಿಸಲಾಗಿದೆ.

ಒಟ್ಟೂ 5 ಆಕಾಂಕ್ಷಿಗಳ ಹೆಸರು ಕಳಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ‌ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ಶಿರಸಿಯಲ್ಲಿ(sirsi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‌ಲೋಕಸಭಾ ಚುನಾವಣೆಯಮೊದಲ ಹಂತವಾಗಿ ಜಿಲ್ಲೆಗೆ ಗೆಲ್ಲುವ ಅಭ್ಯರ್ಥಿಗಳನ್ನು ಪಟ್ಟಿ ಮಾಡಲಾಗಿದೆ.

ಪಕ್ಷದ ಹೈಕಮಾಂಡ್ ಪಟ್ಟಿ ನೀಡಲಾಗಿದೆ‌. ಅದರ ಮೇಲೆ ಸರ್ವೆ ಕೆಲಸ, ಚರ್ಚೆ ನಡೆದಿದೆ ಎಂದರು.
ಜಿಲ್ಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಶಾಸಕರ ಜೊತೆ ಮಾತನಾಡಲಾಗಿದೆ.

ಅದರ ವರದಿ ಸಲ್ಲಿಕೆ ಮಾಡಲಾಗಿದೆ. ಇಲ್ಲಿ ಒಳ್ಳೆಯ ವಾತಾವರಣ ಇದೆ. 5ಜನರ ಪಟ್ಟಿಯನ್ನು ನೀಡಲಾಗಿದ್ದು, ಅದರಲ್ಲಿ ಗೆಲ್ಲುವ ಸಾಧ್ಯತೆ ಇರುವವರನ್ನು ಆದ್ಯತೆ ಮೇರೆಗೆ ಪಟ್ಟಿ ಮಾಡಲಾಗಿದೆ ಎಂದ ಅವರು, ಬಿಜೆಪಿ ಧರ್ಮಗಳ ಆಧಾರದ ಮೇಲೆ ರಾಜಕೀಯ ಮಾಡುತ್ತದೆ. ಅದನ್ನೇ ಫೋಕಸ್ ಮಾಡುತ್ತಿದೆ ಇದು ದಕ್ಷಿಣ ಭಾರತದಲ್ಲಿ ವರ್ಕ ಆಗುವುದಿಲ್ಲ.

ಕರ್ನಾಟಕದಲ್ಲೂ ಕೆಲವು ಕಡೆ ಈ ರಾಜಕೀಯ ನಡೆದರೂ ಬಹುತೇಕ ಕಡೆ ಅದು ಸಾಧ್ಯವಿಲ್ಲ ಎಂದರು. ಇನ್ನು ರಾಜ್ಯಸಭಾ ಚುನಾವಣೆ (rajyasabha election) ಕುರಿತಂತೆ ಮಾತನಾಡಿದ ಅವರು ಯಾವ ರೀತಿಯಲ್ಲಿ ಕುಮಾರಸ್ವಾಮೀ ಅವರು ಲೆಕ್ಕ ಚುಕ್ತಾ ಮಾತನಾಡಿದ್ದಾರೆ ಎಂಬುದು ತಿಳಿದಿಲ್ಲ. ಆದರೆ ಕಳೆದ ಸರ್ಕಾರದಲ್ಲಿ 17 ಶಾಸಕರನ್ನು ಕರೆದುಕೊಂಡು ಹೋದಾಗ ಅವರು ಈವ ಬಿಜೆಪಿಯಲ್ಲೇ ಇದ್ದಾರೆ.

ಅವರು ನಮಗೆ ಮತ ಹಾಕಿ ಲೆಕ್ಕಾ ಚುಕ್ತಾ ಮಾಡಿದಲ್ಲಿ ಚುನಾವಣೆಯಲ್ಲಿ ಹೆಚ್ಚುವರಿ ಮತ ಬರಲಿದೆ ಎಂದು ಮಾರ್ಮಿಕವಾಗಿ ನುಡಿದರು. ಈ ವೇಳೆ ಪಕ್ಷದ ಪ್ರಮುಖರಾದ ಎಸ್.ಕೆ.ಭಾಗ್ವತ್, ರಾಮಕೃಷ್ಣ ಹೆಗಡೆ ಕಡವೆ ಇತರರು ಇದ್ದರು.

ಇದನ್ನೂ ಓದಿ:-ಸಂಸದ ಅನಂತ್ ಕುಮಾರ್ ಹೆಗೆಡೆಗೆ ಹೈಕೋರ್ಟ್ ನಿಂದ ಬುದ್ದಿವಾದ! ಏನಿದು ಪ್ರಕರಣ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!