ಕಾಂಗ್ರೆಸ್ ಗೆ ಸೂರಜ್ ಸೋನಿ ! ಲೋಕಸಭಾ ಅಖಾಡಕ್ಕಿಳಿತಾರ ಹಿಂದು ಕಲಿ?

TextMaster 02 18 06.57.39 TextMaster 02 18 06.57.39
advertisement contact

ಕಾರವಾರ ,ಪೆಬ್ರವರಿ 18:- ಲೋಕಸಭಾ ಚುನಾವಣೆಗೆ (Loksabha election 2024)ಇನ್ನೇನು ಕೆಲವು ದಿನ ಬಾಕಿ ಇದೆ. ಈ ಹಿನ್ನಲೆಯಲ್ಲಿ ಯಾವ ಪಕ್ಷಕ್ಕೆ ಯಾರು ಅಭ್ಯರ್ಥಿ ಎಂಬ ಕುರಿತು ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ (congress) ನಲ್ಲಿ ಬಿಜೆಪಿ (Bjp)ಅಭ್ಯರ್ಥಿ ವಿರುದ್ಧ ಪ್ರಭಲ ಸಮುದಾಯದ ನಾಯಕನನ್ನು ಕಣಕ್ಕಿಳಿಸಬೇಕು ಎಂಬ ಹಿನ್ನಲೆಯಲ್ಲಿ ಇದೀಗ ಜೆಡಿಎಸ್ ನಲ್ಲಿ ಇರುವ ಸೂರಜ್ ಸೋನಿಗೆ ಗಾಳ ಹಾಕಿದೆ.

ಇದನ್ನೂ ಓದಿ:-ಕರಾವಳಿಯಲ್ಲಿ ಕುತೂಹಲ ಮೂಡಿಸಿದ ಕಮಲ ಪಾಳೆಯದ ನಡೆ-ಲೋಕಸಭೆ ಅಖಾಡಕ್ಕೆಪ ಬ್ರಿಜೇಶ್ ಚೌಟ್, ಮಹೇಶ್ ವಿಕ್ರಮ್ ಹೆಗ್ಡೆ!

ಹೌದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೂರಜ್ ಸೋನಿಯನ್ನು ಕಾಂಗ್ರೆಸ್ ಗೆ ತರಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡಿದ್ದು ಸೂರಜ್ ಸೋನಿ ಜೊತೆ ಎರಡು ದಿನಗಳ ಹಿಂದೆ ಅವರ ಸ್ವಗೃಹದಲ್ಲಿ ಮಾತೂಕತೆ ನಡೆಸಿದ್ದಾರೆ.

Advertisement

ಸೂರಜ್ ಸೋನಿ (suraj sony)ಜೊತೆ ಮಾತುಕತೆ ಯಶಸ್ವಿಯಾಗಿದೆ ಎನ್ನುತ್ತದೆ ಅವರ ಆಪ್ತಮೂಲಗಳು.

ಕಾಂಗ್ರೆಸ್ ಬರಲು ಸಿದ್ದ – ರಾಜಕೀಯ ಭವಿಷ್ಯ ರೂಪಿಸಿ?

ಸೂರಜ್ ಸೋನಿ ಕಾಂಗ್ರೆಸ್ ಗೆ ಬರಲು ಒಪ್ಪಿದ್ದಾರೆ. ಆದರೇ ತನಗೆ ಲೋಕಸಭೆಗೆ ಸ್ಪರ್ಧೆ ಮಾಡಲು ಪಕ್ಷದಿಂದ ಅವಕಾಶ ನೀಡಬೇಕು ,ಇದಕ್ಕೆ ಬೇಕಾದ ವ್ಯವಸ್ಥೆ ಮಾಡಬೇಕು ಎಂಬುದಾಗಿ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಮಧು ಬಂಗಾರಪ್ಪ ಹಾಗೂ ರಾಜ್ಯ ಉಸ್ತುವಾರಿ ಹೊತ್ತಿರುವ ರಣದೀಪ್ ಸಿಂಗ್ ಸರ್ಜೆವಾಲ ಸಹ ಒಪ್ಪಿದ್ದಾಗಿ ತಿಳಿದು ಬಂದಿದೆ.

ಇನ್ನು ಸರ್ಜೆವಾಲ ಕೇವಲ ದೂರವಾಣಿ ಯಲ್ಲಿ ಮಾತನಾಡಿದ್ದು ಕುದ್ದು ಬೇಟಿಯಾಗಿ ಮಾತನಾಡುವ ಭರವಸೆ ನೀಡಿದ್ದಾರೆ.

ಇನ್ನು ಎಲ್ಲವೂ ಸರಿಯಾದರೇ ಸೂರಜ್ ಸೋನಿ ಕುಮಟಾ ದಲ್ಲಿ ಬೆಂಬಲಿಗರ ಕಾರ್ಯಕ್ರಮ ಮಾಡಿ ಡಿ.ಕೆ ಶಿವಕುಮಾರ್ ನೇತ್ರತ್ವದಲ್ಲಿ ಪಕ್ಷಕ್ಕೆ ಸೇರಲಿದ್ದಾರೆ.
ಜೊತೆಗೆ ಕಾಂಗ್ರೆಸ್ ನಿಂದ ಲೋಕಸಭಾ ಅಭ್ಯರ್ಥಿ ಸಹ ಆಗಲಿದ್ದಾರೆ ಎನ್ನುತ್ತದೆ ಮೂಲಗಳು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement