ಕರಾವಳಿಯಲ್ಲಿ ಕುತೂಹಲ ಮೂಡಿಸಿದ ಕಮಲ ಪಾಳೆಯದ ನಡೆ-ಲೋಕಸಭೆ ಅಖಾಡಕ್ಕೆಪ ಬ್ರಿಜೇಶ್ ಚೌಟ್, ಮಹೇಶ್ ವಿಕ್ರಮ್ ಹೆಗ್ಡೆ!

116

ಕರಾವಳಿ ದಕ್ಷಿಣ ಕನ್ನಡದಲ್ಲಿ ಈ ಬಾರಿ‌ ಕಮಲ ಪಾಳೆಯದ ನಡೆ ಅಚ್ಚರಿ ಮೂಡಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ಬದಲು ರಾಷ್ಟ್ರೀಯತೆ ಹಾಗೂ ಸಾಮಾಜಿಕ, ಹಿಂದು ಪರ ಕೆಲಸ ಮಾಡುತ್ತಿರುವ ಮುಖಂಡರಿಗೆ ಟಿಕೆಟ್ ನೀಡುವಂತೆ ಬಿಜೆಪಿ ಕಾರ್ಯಕರ್ತರು ತಮ್ಮದೇ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯ ಭದ್ರ ಕೋಟೆ ದಕ್ಷಿಣ ಕನ್ನಡದಲ್ಲಿ ಕಟೀಲ್ ಗೆ ಬಿಜೆಪಿ ಟಿಕೆಟ್ ತಪ್ಪಿಸಲು ಸಾಧ್ಯವೇ ಎಂಬ ಪ್ರಶ್ನೆ ಜನರಲ್ಲಿ ಮೂಡುವುದು ಸಹಜವಾದರೂ, ಒಂದಿಷ್ಟು ಅಚ್ವರಿಯ ಬೆಳೆವಣಿಗೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಪ್ರವೀಣ್ ನೆಟ್ಟಾರ ಹತ್ಯೆ ಆದಾಗಲೇ ದಕ್ಷಿಣ ಕನ್ನಡದಲ್ಲಿ ಬಹಿರಂಗವಾಗಿ ಕಟೀಲ್ ವಿರುದ್ಧ ಹಿಂದು ಕಾರ್ಯಕರ್ತರು ಬಹಿರಂಗ ಆಕ್ರೋಶ ಹೊರಹಾಕಿದ್ದರು. ಬಿಜೆಪಿ ಸರ್ಕಾರವಿದ್ದೂ, ಕಟೀಲ್ ರಾಜ್ಯಾಧ್ಯಕ್ಷರಾಗಿದ್ದರೂ ಹಿಂದು ಕಾರ್ಯಕರ್ತರ ರಕ್ಷಣೆಗೆ ಏನು ಮಾಡಲಿಲ್ಲ ಎಂಬ ಭಾವನೆ ಸ್ಥಳೀಯ ಬಿಜೆಪಿ ಹಾಗೂ ಹಿಂದು ಕಾರ್ಯಕರ್ತರಲ್ಲಿದೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಪುತ್ತಿಲ ಅವರಿಗೆ ಟಿಕೆಟ್ ತಪ್ಪಿದಾಗ ಕಟೀಲ್ ವಿರುದ್ಧ ಈ ಆಕ್ರೋಶ ಇನ್ನಷ್ಟು ಹೆಚ್ಚಾಯಿತು ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಬ್ರಿಜೇಶ್ ಚೌಟ, ಮಹೇಶ್ ವಿಕ್ರಮ್ ಹೆಗ್ಡೆ ಅಚ್ಚರಿ ಹೆಸರುಗಳ ಪ್ರಸ್ತಾಪ

ಸ್ಥಳೀಯ ಮಟ್ಟದಲ್ಲಿ ಹಿಂದು ಪರ ಕೆಲಸ ಮಾಡುತ್ತಿರುವ ಬ್ರಿಜೇಶ್ ಚೌಟ, ಹಾಗೂ ಪೊಸ್ಟ್ ಕಾರ್ಡ್ ಮಹೇಶ್ ವಿಕ್ರಮ್ ಹೆಗ್ಡೆ ಅವರ ಬಗ್ಗೆ ಯುವ ಹಿಂದು ಕಾರ್ಯಕರ್ತರು ಒಲವು ವ್ಯಕ್ತಪಡಿಸಿದ್ದಾರೆ. ಮೋದಿ ಅವರು ಪ್ರಧಾನಿಯಾದ ಬಳಿಕ ರಾಷ್ಟ್ರಿಯತೆ ಸಿದ್ಧಾಂತಕ್ಕಾಗಿ ಪೊಸ್ಟ್ ಕಾರ್ಡ್ ಆರಂಭಿಸಿದ್ದ ಮಹೇಶ್ ಹೆಗ್ಡೆ, ಸ್ಚತಃ ಮೋದಿ ಅವರು ಟ್ವೀಟರ್ ನಲ್ಲಿ ಮಹೇಶ್ ವಿಕ್ರಮ್ ಹೆಗ್ಡೆ ಅವರನ್ನ ಫಾಲೋ ಮಾಡುವ ಹಂತಕ್ಕೆ ಹೆಸರು ಮಾಡಿದ್ದರು.

ಇದನ್ನೂ ಓದಿ:-ಹಳಿಯಾಳದಲ್ಲಿ ಅನಾಮಧೇಯ ದಂಪತಿಗಳ ನಿಂಬೆ ಹಣ್ಣಿನ ಹಿಂದೆ ಬಿದ್ದ ಪೊಲೀಸರು! ಏನಿದು ಕಥೆ?

ವಿಶೇಷವಾಗಿ ಹಿಂದು ಕಾರ್ಯಕರ್ತರ ಹತ್ಯೆಗಳಾದಾಗ ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಯಾನಗಳನ್ನ ನಡೆಸಿ
ಅವರ ಕುಟುಂಬಗಳಿಗೆ ಹಣಕಾಸಿನ ನೆರವು ಒದಗಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದೇ ಇಂದು ಹಿಂದು ಕಾರ್ಯಕರ್ತರು ಅವರ ಹೆಸರನ್ನ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಚಾಲ್ತಿಗೆ ತಂದಿದ್ದಾರೆ. ಶಿವಮೊಗ್ಗದ ಹರ್ಷ ಅವರ ಹತ್ಯೆಯಾದಾಗ ಪೊಸ್ಟ್ ಕಾರ್ಡ್ ಅಭಿಯಾನದ ಮೂಲಕ 86 ಲಕ್ಷ ಹಣಕಾಸಿನ ನೆರವನ್ನ ಅವರ ಕುಟುಂಬಕ್ಕೆ ಒದಗಿಸಿದ್ದರು. ಪ್ರವೀಣ್ ನೆಟ್ಟಾರ ಹತ್ಯೆಯಾದಾಗ ಅವರ ಕುಟುಂಬಕ್ಕೆ 38 ಲಕ್ಷ ಹರಿದು ಬಂದಿತ್ತು. ಇದೆಲ್ಲವನ್ನು ಅವರ ಕುಟುಂಬದವರ ಖಾತೆಗೆ ನೇರವಾಗಿ ಜಮಾ ಮಾಡಿಸುವ ಪಾರದರ್ಶಕ ಅಭಿಯಾನಗಳನ್ನ ವಿಕ್ರಮ್ ಹೆಗ್ಡೆ ನಡೆಸಿದ್ದರು.

ಇದನ್ನೂ ಓದಿ:-ಶಿರಸಿ ಸೋಮೇಶ್ವರ ದೇವಸ್ಥಾನದಲ್ಲಿ ಶಿವಲಿಂಗ ವಿರೂಪ ಗೊಳಿಸಿದ ಕಿಡಿಗೇಡಿಗಳು


ವಿಶೇಷವಾಗಿ ಕಲ್ಲಡ್ಕ್ ಪ್ರಭಾಕರ್ ಅವರ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಮಧ್ಯಾಹ್ನದ ಬಿಸಿ ಉಟಕ್ಕೆ ಸರ್ಕಾರ ಅನುದಾನ ಕಡಿತ ಮಾಡಿದಾಗ ಭೀಕ್ಷಾಂದೇಹಿ ಎಂಬ ಅಭಿಯಾನಕ್ಕೆ ಕರೆ ಕೊಟ್ಟಿದ್ದ ಮಹೇಶ್ ವಿಕ್ರಮ್ ಹೆಗ್ಡೆ ದೊಡ್ಡ ಪ್ರಮಾಣದಲ್ಲಿ ನೆರವು ದೊರೆಯುವಂತೆ ಕಾರ್ಯ ನಿರ್ವಹಿಸಿದ್ದರು.‌

ವಿಕ್ರಮ ಫೌಂಡೇಶನ್ ಅಡಿಯಲ್ಲಿ ನೂರು ಮಕ್ಕಳನ್ನ ದತ್ತು ಪಡೆದು ವಿದ್ಯಾಭ್ಯಾಸಕ್ಕೆ ಬೆಳಕಾಗಿರುವ ಹೆಗ್ಡೆಯವರು, ಜಾತಿ ಮತ ನೋಡದೇ ಎಲ್ಲ ಧರ್ಮದ ಬಡ ಮಕ್ಕಳಿಗೆ ನೆರವಾಗಿದ್ದಾರೆ. ಸುಳ್ಯದ ಕಡು ಬಡವರಿಗೆ ಮನೆ ಕಟ್ಟಿಸಿಕೊಡುವ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೆಲ್ಲವನ್ನ ಗಮನಿಸಿರುವ ಹಿಂದು ಕಾರ್ಯಕರ್ತರು ಬ್ರಿಜೇಶ್ ಚೌಟ ಅಥವಾ ಮಹೇಶ್ ವಿಕ್ರಮ್ ಹೆಗ್ಡೆಯವರಿಗೆ ಟಿಕೆಟ್ ನೀಡುವಂತೆ ಒಲವು ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

ಕಟೀಲ್ ಟಿಕೆಟ್ ತಪ್ಪುವುದನ್ನ ಎದುರು ನೋಡ್ತಿರುವ ಕಾಂಗ್ರೆಸ್

ಹಿಂದುತ್ವದ ಮೇಲೆ ಚುನಾವಣೆ ನಡೆಯುವ ಮಂಗಳೂರಿನಲ್ಲಿ ಜಾತಿವಾರು ರಾಜಕಾರಣ ಅಷ್ಟೋಂದು ಪ್ರಭಾವಿ ಅನಿಸದಿದ್ದರೂ, ಕಟೀಲ್ ಗೆ ಟಿಕೆಟ್ ತಪ್ಪುವುದನ್ನ ಕಾಂಗ್ರೆಸ್ ಎದುರು ನೋಡ್ತಿದೆ. ಒಂದು ವೇಳೆ ಕಟೀಲ್ ಬದಲು ಬಿಜೆಪಿ ಬಂಟ ಸಮುದಾಯದ ಬ್ರಿಜೇಶ್ ಚೌಟ ಅಥವಾ ಮಹೇಶ್ ವಿಕ್ರಮ್ ಹೆಗ್ಡೆಗೆ ಟೀಕೆಟ್ ನೀಡಿದರೆ ಕಾಂಗ್ರೆಸ್ ನಿಂದ ಈಡಿಗ- ಬಿಲ್ಲವ ಸಮುದಾಯದ ವಿನಯ ಕುಮಾರ್ ಸೊರಕೆಯನ್ನ ಕಣಕ್ಕಿಳಿಸಲು ತಂತ್ರ ಹೆಣೆಯುತ್ತಿದೆ. ಈ ಹಿಂದೆ ಬಂಟ ಸಮುದಾಯದ ಮಿಥುನ್ ರೈ ಗೆ ಟಿಕೆಟ್ ನೀಡಿದ್ದ ಕಾಂಗ್ರೆಸ್ ಈ ಬಾರಿ ತನ್ನ ಸ್ಟಾಟರ್ಜಿಯನ್ನ ಬದಲಿಸಿಕೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!