Appe Mango|ಪಶ್ಚಿಮ ಘಟ್ಟದ ಸುವಾಸಿತ ಅಪ್ಪೆ ,ಜೀರಿಗೆ ಮಾವಿನ ಮಿಡಿಗೆ ಡಿಮಾಂಡ್ | ದರ ಹೆಚ್ಚಾದ್ರೂ ಬೇಡಿಕೆ ಅಪಾರ.
Appe mango|ಕಾರವಾರ :- ಉಪ್ಪಿಗಿಂತ ರುಚಿ ಇಲ್ಲ ಎನ್ನುವಂತೆ ಊಟಕ್ಕೆ ಉಪ್ಪಿನಕಾಯಿ ಇಲ್ಲದಿದ್ರೆ ಊಟ ಸವಿದ ಸಂತೃಪ್ತಿ ಆಗಲಾರದು. ಮಲೆನಾಡು ಭಾಗದಲ್ಲಿ ಊಟದ ಜೊತೆ ಉಪ್ಪಿನಕಾಯಿ ಇರಲೇ ಬೇಕು. ಈ ಉಪ್ಪಿನಕಾಯಿಗಳು ಮಾವಿನ ಮಿಡಿಗಳಿಂದ ತಯಾರಿಸಲಾಗುತ್ತದೆ. ಅದ್ರಲ್ಲೂ ಉತ್ತರ ಕನ್ನಡ(uttara Kannada) ಜಿಲ್ಲೆಯ ಶಿರಸಿ, ಸಿದ್ದಾಪುರ ,ಯಲ್ಲಾಪುರ,ಶಿವಮೊಗ್ಗ ಜಿಲ್ಲೆಯ ಸಾಗರ,ತೀರ್ಥಹಳ್ಳಿ ,ಹೊಸನಗರ ತಾಲೂಕುಗಳಲ್ಲಿ ಮಾವಿನ ಮಿಡಿ ಉಪ್ಪಿನಕಾಯಿ ಬಲು ಫೇಮಸ್. ಜೊತೆಗೆ ಆರೋಗ್ಯಕರ ಊಟದಲ್ಲಿ ಇದರ ಮಹತ್ವ ದೊಡ್ಡದಿದೆ.
Exclusive| ಜೆಡಿಎಸ್ ನಾಯಕಿ ಪುತ್ರನ whatsapp ಚಾಟ್ ಬಹಿರಂಗ| ಮಹಿಳಾ ಸಂಘಟನೆ ಹೇಳಿದ್ದೇನು?
ಹೌದು ಇದೀಗ ಮಾವಿನ ಮಿಡಿಗಳ ವಸಂತ ಪ್ರಾರಂಭವಾಗಿದೆ.ಅದರ ಜೊತೆಗೆ ಮಾವಿನ ಮಿಡಿಗಳನ್ನು ಉಪ್ಪಿನಕಾಯಿ ತಯಾರಿಕೆಗಾಗಿ ಮಲೆನಾಡಿಗರು ಮಾವಿನ ಮಿಡಿ ಖರೀದಿಗೆ ಮುಂದಾಗಿದ್ದಾರೆ.ಬೇಡಿಕೆ ಹೆಚ್ಚಾಗಿದ್ದು ಗುಣಮಟ್ಟದ ಮಾವಿನ ಮಿಡಿಗಳ ಲಭ್ಯತೆ ಅತ್ಯಲ್ಪವಾಗಿದೆ.
ಕಳೆದ ವರ್ಷ ಹೇಗಿತ್ತು ದರ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ (sirsi)ಜೀರಿಗೆ ಅಪ್ಪೆ ಮಿಡಿಗಳಿಗೆ ಹೆಚ್ಚಿನ ಡಿಮ್ಯಾಂಡ್ ಇದೆ.
ಕಳೆದ ವರ್ಷ ಒಂದು ಜೀರಿಗೆ ಅಪ್ಪೆ ಮಿಡಿಯ ಬೆಲೆ 9 ರಿಂದ 10 ರೂ ವರೆಗೆ ಏರಿಕೆ ಕಂಡಿತ್ತು. ಸಾವಿರ ಜಿರಿಗೆ ಅಪ್ಪೆ ಮಿಡಿಗೆ 9 ಸಾವಿರದಿಂದ 10 ಸಾವಿರ ದರ ವಿತ್ತು. ಮಾವಿನ ಮಿಡಿಯ ಲಭ್ಯತೆ ಕಡಿಮೆ ಇದ್ದು ಹೆಚ್ಚಿನ ಬೇಡಿಕೆ ಬಂದಿದ್ದ ಕಾರಣ ಗುಣಮಟ್ಟದ ಒಂದು ಜೀರಿಗೆ ಮಿಡಿಗೆ 12 ರೂವರೆಗೂ ಏರಿಕೆ ಕಂಡಿತ್ತು.
ಈ ವರ್ಷ ಹೇಗಿದೆ ದರ?

ಕಳೆದ ವರ್ಷ ಕ್ಕೆ ಹೋಲಿಕೆ ಮಾಡಿದರೆ ಮಾವಿನ ಫಸಲು ಅಧಿಕವಾಗಿದೆ. ಆದರೇ ಅಕಾಲಿಕ ಮಳೆ ,ಹವಮಾನ ವೈಪರಿತ್ಯದಿಂದ ಈ ಭಾರಿ ಫಸಲು ಇಳಿಮುಖ ಕಂಡಿದೆ ಎನ್ನುತ್ತಾರೆ ಮಾವಿನ ಕೃಷಿಕ ಶಿರಸಿಯ ಸೀಗೇಹಳ್ಳಿಯ ಭಾರ್ಗವ್ ಹೆಗಡೆ.
Karnataka| ಜನರ ದುಡ್ಡಲ್ಲಿ ಅಧಿಕಾರಿಗಳ ವಿದೇಶಿ ಪ್ರವಾಸ 20 ಕೋಟಿಗೂ ಅಧಿಕ ವೆಚ್ಚ!
ಭಾರ್ಗವ್ ಹೆಗಡೆ ಹಲವು ವರ್ಷಗಳಿಂದ ಮಾವಿನ ಕೃಷಿ ಮಾಡುತಿದ್ದು 15 ಎಕರೆಗೂ ಹೆಚ್ಚು ಮಲೆನಾಡು ಭಾಗದ ಅಪ್ಪೆಮಿಡಿ,ಜೀರಿಗೆ ಮಿಡಿ ಸೇರಿದಂತೆ ಉಪ್ಪಿನಕಾಯಿ ತಯಾರಿಕೆಗೆ ಬಳಸುವ ಮಾವನ್ನು ಬೆಳೆಯುತಿದ್ದಾರೆ.
ಅವರೇ ಹೇಳುವಂತೆ ಈಭಾರಿ ತಮ್ಮ ತೋಟದಲ್ಲಿ 30 ಲಕ್ಷ ಮಿಡಿ ಬರುವಷ್ಟು ಮಾವಿನ ತೆನೆ ಬಿಟ್ಟಿದ್ದವು.ಆದರೇ ಹೂವು ನಿಲ್ಲಲಿಲ್ಲ ಈ ಭಾರಿ 10 ರಿಂದ 12 ಲಕ್ಷ ಮಿಡಿಗಳು ಮಾತ್ರ ನಿಂತಿವೆ ಎನ್ನುತ್ತಾರೆ.
ಬಹುತೇಕ ಜಿಲ್ಲೆಯಲ್ಲಿ ಇದೇ ಸ್ಥಿತಿ ಇದೆ.ಇಳುವರಿ ಕುಂಟಿತವಾಗಿದೆ ಎನ್ನುತ್ತಾರೆ.ಈಗ ಗುಣಮಟ್ಟದ ಅಪ್ಪೆ ಮಿಡಿ ಹಾಗೂ ಜೀರಿಗೆ ಮಿಡಿ ಹೋಲ್ ಸೇಲ್ ನಲ್ಲಿ ಒಂದಕ್ಕೆ 5₹ ನಿಂದ 6₹ ವರೆಗೆ ಮಾರಾಟವಾದರೇ ರೀಟೇಲ್ ನಲ್ಲಿ ಒಂದು ಅಪ್ಪೆಮಿಡಿ,ಜೀರಿಗೆ ಮಿಡಿ 7₹ ನಿಂದ 8₹ ವರೆಗೆ ಇದೆ.

ಇನ್ನು ಹೊಳೆಸಾಲು ಮಿಡಿ, ಸಾದಾ ಮಿಡಿಗಳು 4₹ ರಿಂದ 6₹ ವರೆಗೆ ದರವಿದ್ದು ಇದು ಏರಿಕೆ ಕಾಣುವ ಸಾಧ್ಯತೆಗಳಿವೆ.
ಈ ಭಾರಿ ಉತ್ತರ ಕನ್ನಡ ಜಿಲ್ಲೆಯ ಕಾಡು ಪ್ರದೇಶದಲ್ಲಿ ಬೆಳೆಯುವ ಮಿಡಿಗಳು ಅಲ್ಪ ಏರಿಕೆ ಕಂಡಿದ್ದು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಆದರೇ ಇವು ಅಪ್ಪೆ ಮಿಡಿ ,ಜೀರಿಗೆ ಮಿಡಿ ಗೆ ಪೈಪೋಟಿ ನೀಡುತ್ತಿಲ್ಲ.
ಹೊರರಾಜ್ಯದಿಂದಲೂ ಡಿಮಾಂಡ್

ಇನ್ನು ಪಶ್ಚಿಮ ಘಟ್ಟ ಭಾಗದಲ್ಲಿ ಬೆಳೆಯುವ ಅಪ್ಪೆ ಮಿಡಿ ಹಾಗೂ ಜೀರಿಗೆ ಮಿಡಿಗಳಿಗೆ ಹೆಚ್ಚು ಡಿಮಾಂಡ್ ಕಂಡಿದೆ.ಹೊರರಾಜ್ಯದ ಉಪ್ಪಿನಕಾಯಿ ತಯಾರಿಕಾ ಕಂಪನಿಗಳು ಇವುಗಳ ಖರೀದಿಗೆ ಮುಂದಾಗಿದ್ದಾರೆ. ಕಳೆದ ವರ್ಷ 10 ಟನ್ ಗೂ ಹೆಚ್ಚು ಖರೀದಿ ನಡೆಸಲಾಗಿತ್ತು.ಈ ಭಾರಿ 30 ಟನ್ ಗೂ ಹೆಚ್ಚು ಖರೀದಿ ನಿರೀಕ್ಷೆ ರೈತರದ್ದು. ಜಿಲ್ಲೆಯಲ್ಲಿ ಈಗಾಗಲೇ 350 ಕ್ಕೂ ಹೆಚ್ಚು ಟನ್ ಫಸಲು ಪಡೆಯುವ ನಿರೀಕ್ಷೆ ಗ್ರಾಮೀಣ ಭಾಗದ ರೈತರದ್ದಾಗಿದ್ದು ,ತಮಗೆ ಆಧಾಯ ತರುವ ನಿರೀಕ್ಷೆಯಲ್ಲಿದ್ದಾರೆ.
ಅಪ್ಪೆ ಮಿಡಿ,ಜೀರಿಗೆ ಮಿಡಿ ವಿಶೇಷ ಏನು?
ಪಶ್ಚಿಮ ಘಟ್ಟ ಭಾಗದಲ್ಲಿ ಮಾತ್ರ ಹೆಚ್ಚಾಗಿ ಬೆಳೆಯುವ ಈ ಅಪ್ಪೆ ಮಿಡಿ ಹಾಗೂ ಜೀರಿಗೆ ಮಿಡಿ ಪರಿಮಳ ಹಾಗೂ ಗುಣಮಟ್ಟದಲ್ಲಿ ಉತ್ಕೃಷ್ಟವಾಗಿರುತ್ತದೆ.
ಜೀರಿಗೆ ಮಿಡಿ ಜೀರಿಗೆ ಪರಿಮಳ ಯುಕ್ತವಾಗಿದ್ದು ಹೆಚ್ಚು ಸುವಾಸನೆ, ಹೆಚ್ಚು ಸೊನೆ ಹೊಂದಿರುತ್ತದೆ. ಅಪ್ಪೆ ಮಿಡಿ ಸಹ ಇದಕ್ಕೆ ಸರಿಸಮವಾಗಿದ್ದು ಹೆಚ್ಚು ಕಾಲ ಬಾಳಿಕೆ ಬರುತ್ತದೆ.
ಇವುಗಳ ಉತ್ಕೃಷ್ಟತನ ಮಾವಿನ ಮಿಡಿ ಪ್ರಿಯರಿಗೆ ಅಚ್ಚುಮೆಚ್ಚು ಹೀಗಾಗಿ ಮಲೆನಾಡುಭಾಗದಲ್ಲಿ ಇವುಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ.
Mango :ಬಂಗಾರದ ಬೆಲೆಯತ್ತ ಮಾವಿನ ಮಿಟಿ ! ಮಲೆನಾಡು ಜೀರಿಗೆ ಮಾವಿನ ಮಿಡಿ ಗೆ ಹೆಚ್ಚಿದ ಬೇಡಿಕೆ
ಇನ್ನು ಇವುಗಳು ಆರೋಗ್ಯಕರ ಗುಣವನ್ನು ಹೊಂದಿದ್ದು ಇವುಗಳು ಮಿತ ಸೇವನೆ ಹೊಟ್ಟೆಯ ಅಜೀರ್ಣ , ದುರ್ವಾಸನೆಯನ್ನು ತಡೆಯುತ್ತದೆ. ದೀರ್ಘಾವಧಿಯ ದೇಹದ ಕಜ್ಜಿಗಳು ದೂರವಾಗುತ್ತದೆ ಎನ್ನುತ್ತಾರೆ ಹಿರಿಯರು.
ಆಯ್ಕೆ ಹೇಗೆ?
ಮಾವಿನ ಮಿಡಿಗಳನ್ನು ಆಯ್ಕೆ ಮಾಡುವಾಗ ಅದರ ಗುಣಮಟ್ಟ,ಗಾತ್ರ,ಪರಿಮಳವನ್ನು ಗಮನದಲ್ಲಿ ಇಟ್ಟು ಆಯ್ಕೆ ಹಾಗೂ ದರ ನಿಗದಿ ಮಾಡಲಾಗುತ್ತದೆ.ಹೆಚ್ಚು ಪರಿಮಳವಿದ್ದು ಸೊನೆಯಿಂದ ಕೂಡಿದ ಮಾವಿನ ಮಿಡಿ ಉತ್ತಮ ಗುಣಮಟ್ಟದ್ದು ಎನ್ನುವುದು ಆಯ್ಕೆ ಮಾಡುವವರ ಮಾತು. ಇನ್ನು ಮಾವಿನ ಮಿಡಿಯ ತೊಟ್ಟು ಮುರಿದು ಚುಮ್ಮುವ ಸೊನೆಗೆ ಬೆಂಕಿ ಹಚ್ಚಿ ಪರೀಕ್ಷೆ ಸಹ ನೆಡೆಸುತ್ತಾರೆ. ಬೆಂಕಿ ಹತ್ತಿದರೇ ಅದು ಉತ್ತಮ ಮಿಡಿ ಎಂಬುವುದು ನಂಬಿಕೆ.
ಅವನತಿ ಅಂಚಿನಲ್ಲಿರುವ ಪಶ್ಚಿಮಘಟ್ಟದ ಅಪರೂಪದ ಮಾವಿನ ಮಿಡಿ!
ಪಶ್ಚಿಮ ಘಟ್ಟ ಭಾಗದಲ್ಲಿ ಪ್ರಕೃತಿ ನೀಡಿದ ವರದಾನ ಈ ಪರಿಮಳಯುಕ್ತ ಅಪ್ಪೆ ಹಾಗೂ ಜೀರಿಗೆ ಮಿಡಿ ಮಾವಿನ ತಳಿಗಳು. ಪಶ್ಚಿಮ ಘಟ್ಟ ಭಾಗದಲ್ಲಿ ತಾವಾಗಿಯೇ ಬೆಳೆದು ನಿಂತ ಈ ಮಾವಿನ ಮರಗಳಿಗೆ ಇದೀಗ ಕೊಡಲಿ ಪೆಟ್ಟು ಬೀಳುತ್ತಿದೆ.
ಹಣದ ಆಸೆಗೆ ಈ ಮಾವಿನ ಮರಗಳಲ್ಲಿ ಬಿಟ್ಟ ಮಾವಿನ ಮಿಡಿಗಳನ್ನು ತೆಗೆಯಲು ಕೊಂಬೆಗಳನ್ನೇ ಕತ್ತರಿಸಲಾಗುತ್ತಿದೆ. ಇದರಿಂದ ಮರಕ್ಕೆ ಹೆಚ್ಚು ಘಾಸಿಯಾಗಿ ಮಿಡಿಗಳು ಕಚ್ಚುವಲ್ಲಿ ವೆತ್ಯಯವಾಗುತ್ತಿದೆ. ಈ ಮರಗಳ ವಿಶೇಷ ಎಂದರೇ ಇವು ಬೆಳದು ನಿಂತು ಫಸಲು ನೀಡಲು ಹತ್ತಕ್ಕೂ ಹೆಚ್ಚು ವರ್ಷಗಳೇ ಬೇಕಾಗುತ್ತದೆ.
ಕೊಂಬೆಗಳನ್ನು ಕತ್ತರಿಸುವಿದರಿಂದ ಇವು ಹೂ ಬಿಟ್ಟು ತೆನೆ ಕಚ್ಚುವುದು ಕಡಿಮೆ. ಇನ್ನು ಹಲವು ಭಾಗದಲ್ಲಿ ಇವುಗಳ ಮರಗಳನ್ನ ಕತ್ತರಿಸಲಾಗುತ್ತಿದೆ. ಇದರಿಂದ ಈ ಅಪರೂಪದ ಮಾವಿನ ಮರ ಅವನತಿಯತ್ತ ಸಾಗುತ್ತಿದೆ.ಇನ್ನು ಇತ್ತೀಚೆಗೆ ಇವುಗಳ ಮೇಲೆ ಅಧ್ಯಯನ ಸಹ ನಡೆಯುತ್ತಿದೆ. ಸ್ಥಳೀಯವಾಗಿ ಇವುಗಳ ಸಸಿ ಬೆಳೆಸುವ ಕಾರ್ಯ ಕೆಲವು ನರ್ಸರಿಗಳು ಮಾಡುತ್ತಿವೆ.ಆದರೇ ಪ್ರಕೃತಿಯಲ್ಲಿನ ಸಂಘರ್ಷ ಪಶ್ಚಿಮ ಘಟ್ಟದ ಈ ಅಪರೂಪದ ಮಾವಿನ ತಳಿ ಇದೀಗ ಅವನತಿಯತ್ತ ಸಾಗಿರುವುದು ದುರ್ದೈವ.







