Exclusive| ಜೆಡಿಎಸ್ ನಾಯಕಿ ಪುತ್ರನ whatsapp ಚಾಟ್ ಬಹಿರಂಗ| ಮಹಿಳಾ ಸಂಘಟನೆ ಹೇಳಿದ್ದೇನು?
Exclusive /Karwar :-ಕಾರವಾರದ (karwar)ಜೆಡಿಎಸ್ ನಾಯಕಿ ಪುತ್ರ ಚಿರಾಗ್ ಕಿರುಕುಳದಿಂದ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣಕ್ಕೆ ಮತ್ತಷ್ಟು ಡ್ವಿಷ್ಟ್ ಸಿಕ್ಕಿದೆ.
ಕಾರವಾರ JDS ನಾಯಕಿ ಚೈತ್ರಾ ಪುತ್ರ ಚುರಾಗ್ ನ ಕಿರುಕುಳ ಕುರಿತು ಸಾಕ್ಷಿ ಯನ್ನು ಕೆಲವು ಸಂಘಟನೆಗಳು ಬಹಿರಂಗ ಪಡಿಸಿದ್ದುಕ ನ್ನಡವಾಣಿಗೆ ಮೃತ ರಿಶೇಲ್ ಹಾಗೂ ಚಿರಾಗ್ ಚಾಟಿಂಗ್ ಮಾಹಿತಿ ಲಭ್ಯವಾಗಿದೆ.
ಚಾಟ್ ಮಾಡಿದ ದಾಖಲೆ ವಿವರ:-



ಸಾಯುವ ಮೊದಲು ಚಿರಾಗ್ ಜೊತೆ ವಾಟ್ಸ್ ಅಪ್ ಚಾಟ್ ಹಾಗೂ ವಿಡಿಯೋ ಕಾಲ್ ಮಾಡಿರುವ ರಿಶೇಲ್ ಚಾಟ್ ಇದಾಗಿದೆ ಎನ್ನಲಾಗಿದೆ.
Karwar| JDS ನಾಯಕಿ ಚೈತ್ರಾ ಪುತ್ರನ ವಿರುದ್ಧ ಅತ್ಯಾಚಾರದ ದೂರು|ಪ್ರತಿಭಟನೆ ಎಚ್ಚರಿಕೆ.
ವಾಟ್ಸ್ ಅಪ್ ಚಾಟ್ ನಲ್ಲಿ ಚಿರಾಗ್ ಮೃತ ರಿಶೇಲ್ ಗೆ ಅವಾಚ್ಯ ಶಬ್ದ ನಿಂದನೆ ಮಾಡಿದ್ದಾನೆ.ಕೆಟ್ಟದಾಗಿ ಮಾತನಾಡಿದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೆಸೇಜ್ ಮಾಡಿದ್ದ ಮೃತ ರಿಶೇಲ್,ಸಾಯುವುದಕ್ಕೂ ಮೊದಲು ವಾಟ್ಸ್ ಅಪ್ ನಿಂದ ವಿಡಿಯೋ ಕಾಲ್ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಕಾರವಾರದಲ್ಲಿ ಕ್ಯಾಥೋಲಿಕ ಧರ್ಮಪ್ರಾಂತ್ಯದ ಮಹಿಳಾ ಘಟಕ ಪತ್ರಿಕಾಗೋಷ್ಠಿ.

ತಂದೆ ಹಾಗೂ ತಾಯಿಯ ರಾಜಕೀಯ ಬಲದಿಂದ ಯುವತಿ ರಿಶೆಲ್ ಕಿಸ್ತೋದ್ ಅವಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿ ಚಿರಾಗ ಕೊಟಾರಕರ ಅವನನ್ನು ಕೂಡಲೆ ಬಂಧಿಸಿ ಶಿಕ್ಷೆ ನೀಡಬೇಕು ಎಂದು ಕ್ಯಾಥೋಲಿಕ ಧರ್ಮಪ್ರಾಂತ್ಯದ ಮಹಿಳಾ ಘಟಕದ ಅಧ್ಯಕ್ಷೆ ಮೊಬೆಲ್ ಪಿಂಟೋ ಆಗ್ರಹಿಸಿದರು.
Navy :ಹಿಂದು ಮಹಾಸಾಗರ ದಲ್ಲಿ 9 ಮಿತ್ರ ರಾಷ್ಟ್ರದೊಂದಿಗೆ IOS ಸಾಗರ ಹೆಸರಿನ ಕಾರ್ಯಾಚರಣೆಗೆ ಕಾರವಾರ ದಲ್ಲಿ ಚಾಲನೆ
ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಿಶೆಲ್ ಕಿಸ್ತೋದ್ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಾಗ ಆಕೆಯ ಕಿಯಲ್ಲಿ ಈಯರ್ ಫೋನ್ ಇತ್ತು. ಜತೆಗೆ ಕೆಳಗೆ ಮೊಬೈಲ್ ಕೂಡ ಬಿದ್ದಿತ್ತು. ಆಕೆಯು ಆತನೊಂದಿಗೆ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ಹಾಗೂ ತಾಯಿಯ ರಾಜಕೀಯ ಪ್ರಭಾವದಿಂದ ಹೆಣ್ಣು ಮಕ್ಕಳಿಗೆ ಮಾನಸಿಕವಾಗಿ ಕಿರುಕುಳ ನೀಡಲಾಗಿದೆ.
ಈ ಹಿಂದೆ ಆರೋಪಿಯ ಸಂಬಂಧಿಯು ರಿಶೆಲ್ ಅವರಳ ತಾಯಿಗೆ ಕರೆ ಮಾಡಿ ಮಗಳಿಗೆ ಚಿರಾಗ್‌ನ ಕರೆ ಸ್ವೀಕರಿಸುವಂತೆ ತಿಳಿಸು ಎಂದು ಧಮ್ಕಿ ಹಾಕಿದ್ದಾರೆ. ಆತ್ಮಹತ್ಯೆಯ ವೇಳೆ ಆಕೆಯ ದೇಹದ ಮೇಲೆ ಕಚ್ಚಿದ ಹಾಗೂ ಗಾಯದ ಗುರುತುಗಳಿದ್ದು ಈ ಬಗ್ಗೆ ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಫ್ರೆಂಕಿ ಗುಡಿನೋ ಮಾತನಾಡಿ, ಸ್ನೇಹ ತಪ್ಪಲ್ಲ. ಅದಾಗಿಯೂ ಆಕೆಯ ಪಾಲಕರು ಬುದ್ದಿ ಹೇಳಿದ್ದಾರೆ. ಆಕೆಯ ಆತ್ಮಹತ್ಯೆಯು ವಯಕ್ತಿಕ ನೋವಲ್ಲ. ಮಹಿಳಾ ಸಮಾಜವೇ ತಲೆತಗ್ಗಿಸುವ ವಿಷಯವಾಗಿದ್ದು ಆಕೆಗೆ ಸೂಕ್ತ ನ್ಯಾಯ ನೀಡಬೇಕಿದೆ. ಇಲ್ಲವಾದರೆ ನಮ್ಮ ಹೋರಾಟ ಬಿಡುವುದಿಲ್ಲ ಎಂದರು.
ಲಿಯೋ ಲಿವಿಸ್ ಮಾತನಾಡಿ, ಚಿರಾಗ ಮತ್ತು ರಿಶೆಲ್ ನಡುವಿನ ವಾಟ್ಸಪ್ ಸಂದೇಶಗಳು ಸಿಕ್ಕಿದ್ದು ಅದರಲ್ಲಿ ಆತನು ಹುಡುಗಿಗೆ ಕೆಟ್ಟ ಪದಗಳಿಂದ ನಿಂಧಿಸಿದ್ದಾನೆ. ಅಲ್ಲದೇ ಸಂದೇಶಗಳಲ್ಲಿ ಆಕೆಯು ಆತ್ಮಹತ್ಯೆ ಮಾಡಿಕೊಳ್ಳವ ಬಗ್ಗೆಯೂ ಮುನ್ಸೂಚನೆ ನೀಡಿದ್ದಾಳೆ ಎಂದರು.
ಆತ್ಮಹತ್ಯೆಗೂ ಮರ‍್ನಾಲ್ಕು ದಿನಗಳ ಹಿಂದೆ ಆಕೆಯು ಕಂಪ್ಯೂಟರ್ ತರಗತಿಗೆ ಬಂದರೂ ತರಗತಿಗೆ ಹಾಜರಾಗಿಲ್ಲ. ಅಲ್ಲದೇ ಆತ್ಮಹತ್ಯೆಯ ಹಿಂದಿನ ದಿನ ಮನೆಗೆ ತಡವಾಗಿ ಬಂದಿದ್ದಾಳೆ. ಈ ವೇಳೆ ಆತನೊಂದಿಗೆ ಇದ್ದ ಬಗ್ಗೆ ಸಂಶಯವಿದೆ.
ಆತ್ಮಹತ್ಯೆ ನಡೆದ ಮೂರು ದಿನಗಳ ಬಳಿಕ ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ವರೆಗೆ ಆರೋಪಿಯು ಎಲ್ಲಿದ್ದಾನೆ ಎಂದು ಪೊಲೀಸರು ಪತ್ತೆ ಮಾಡಿಲ್ಲ. ಆತನ ಮೊಬೈಲ್ ಕೂಡ ವಶಕ್ಕೆ ಪಡೆದಿಲ್ಲ. ಹೀಗಾಗಿ ತನಿಖೆಯು ಸರಿಯಾಗಿ ನಡೆಯುತ್ತಿಲ್ಲ ಎನ್ನುವ ಸಂಶಯ ಮೂಡಿದೆ. ಈ ಬಗ್ಗೆ ಸೂಕ್ಷö್ಮ ತನಿಖೆ ನಡೆಸಿ ಆರೋಪಿಯ ಬಂಧನವಾಗದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಸ್ಯಾಮ್ಸನ್ ಡಿಸೋಜಾ, ಕ್ಲೆಮೆಟ್ ಗುಡಿನೋ, ವಿಲ್ಸನ್ ಫರ್ನಾಡೀಸ್, ಜೂಜ್ ಫರ್ನಾಡೀಸ್, ಸೈರಿಲ್ ಹಾಗೂ ಇತರರು ಇದ್ದರು.







