Modi ಪ್ರಧಾನಿಯಾಗಲು ತನ್ನ ತೋರುಬೆರಳನ್ನೇ ಕತ್ತರಿಸಿ ಕಾಳಿ ಮಾತೆಗೆ ಅರ್ಪಿಸಿದ ಮೋದಿ ಭಕ್ತ.

254

ಕಾರವಾರ:- ದೇಶ ವಿದೇಶಗಳಲ್ಲಿ ಮೋದಿ ಅಭಿಮಾನಿಗಳು (fans)ಕೋಟಿಗಟ್ಟಲೇ ಜನರಿದ್ದಾರೆ. ಮೋದಿಗಾಗಿ ಗುಡಿ ಕಟ್ಟಿ ಪೂಜೆ ಮಾಡುವವರಿದ್ದಾರೆ.

ಆದ್ರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡದಲ್ಲಿರುವ (sinarawada) ಮೋದಿ ಭಕ್ತನೊಬ್ಬ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ತನ್ನ ಎಡಗೈ ತೋರುಬೆರಳನ್ನೇ ಕತ್ತರಿಸಿ ತನ್ನ ಆರಾಧ್ಯ ದೈವ ಕಾಳಿ ಮಾತೆಗೆ (kali devi)ನೀಡಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವಂತೆ (Prime Minister )ಹರಕೆ ಕಟ್ಟಿಕೊಂಡಿದ್ದಾನೆ.

ಇದನ್ನೂ ಓದಿ:-ಹೆಗಡೆ ಸಂದಾನ ವಿಫಲ! ಮಾಜಿ ಸಚಿವರ ಗನ್ ಮ್ಯಾನ್ ಗೆ ಸಿಕ್ತು ಕಪಾಳ ಮೋಕ್ಷ!

ಹೌದು ಕಾರವಾರದ ಸೋನಾರವಾಡದ ಅರುಣ್ ವರ್ಣೇಕರ್ ಎಂಬುವವರೇ ತನ್ನ ಬೆರಳನ್ನೇ ಮೋದಿಗಾಗಿ ನೀಡಿದ ವ್ಯಕ್ತಿ.

ಮೂಲತಃ ಮುಂಬೈ ನಲ್ಲಿ ಸಿನಿಮಾ (cinema) ಇಂಡಸ್ಟ್ರಿಯಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತಿದ್ದ ಇವರು ಕಾರವಾರದಲ್ಲಿ ತನ್ನ ವಯಸ್ಸಾದ ತಾಯಿಯನ್ನು ನೋಡಿಕೊಳ್ಳುವ ಸಲವಾಗಿ ಮರಳಿ ಬಂದು ಇಲ್ಲಿಯೇ ನೆಲಸಿದ್ದಾರೆ.

ಮೋದಿ ಬಗ್ಗೆ ತುಂಬು ಅಭಿಮಾನ ಹೊಂದಿರುವ ಇವರು ಮೊದಲಬಾರಿ ಪ್ರಧಾನಿಯಾಗುವ ಮೊದಲೂ ತಾನು ಪೂಜಿಸುವ ಕಾಳಿ ಮಾತೆಗೆ ತನ್ನ ಕೈನಲ್ಲಿನ ರಕ್ತ ನೀಡಿ ಹರಕೆ ಕಟ್ಟಿಕೊಂಡಿದ್ದರು. ನಂತರ ಇದೀಗ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಇದೀಗ ತನ್ನ ಎಡಗೈ ನ ತೋರುಬೆರಳನ್ನು ಮೋದಿ ಹಾಗೂ ಕಾಳಿ ಮಾತೆಯ ಎದುರೇ ಕತ್ತರಿಸಿಕೊಂಡು ರಕ್ತಾಭಿಷೇಕ ಮಾಡಿದ್ದಾರೆ.

ಇದಲ್ಲದೇ ಬೆರಳು ತುಂಡುಮಾಡಿಕೊಂಡು ರಕ್ತದಲ್ಲಿ “ಮಾ ಕಾಳಿಮಾತ ಮೋದಿ ಬಾಬಾಕೋ ರಕ್ಷಾ ಕರೋ”
“ಮೋದಿ ಬಾಬ ಪಿ.ಎಂ ,3 ಬಾರ್ 78ತಕ್ 378 ,378+ ಮೇರ ಮೋದಿ ಬಾಬಾ ಸಬಸೆ ಮಹಾನ್ ಎಂದು ಗೋಡೆ ಹಾಗೂ ಪೋಸ್ಟರ್ ನಲ್ಲಿ ಬರೆದಿದ್ದಾರೆ.

ಈ ಬಾರಿ ಕೊನೆಯಬಾರಿ ಪ್ರಧಾನಿಯಾಗಿ ಮೋದಿಯವರೇಆಗುತ್ತಾರೆ ಹೆಚ್ಚು ಸ್ಥಾನಗಳು ಬರಬೇಕು ಎಂಬ ಹರಕೆ ನನ್ನದು. ಮುಂದೆ ಯೋಗಿಯವರು ಪ್ರಧಾನಿಯಾಗುತ್ತಾರೆ. ಮೋದಿ ಶಾಂತವಾದರೇ ಯೋಗಿ ಉಗ್ರ ಮಸ್ಸಿನವರು. ಈ ಬಾರಿ ಮೋದಿ ದೊಡ್ಡ ಅಂತರದಲ್ಲಿ ಪ್ರಧಾನಿಯಾಗಬೇಕು ಎಂಬ ಕಾರಣದಿಂದ ನಾನು ಪೂಜಿಸುವ ಕಾಳಿ ಮಾತೆಗೆ ಈ ಹರಕೆ ಕೊಟ್ಟಿದ್ದೇನೆ ಎನ್ನುತ್ತಾರೆ ಅರುಣ್ ವರ್ಣೇಕರ್.

ಮನೆಯಲ್ಲಿ ಮೋದಿ ಗುಡಿ!

ಅರುಣ್ ವರ್ಣೇಕರ್ ರವರು ಮನೆಯಲ್ಲಿ ಮೋದಿಯನ್ನು ಪೂಜಿಸುತ್ತಾರೆ. ಪ್ರತಿ ದಿನ ಪೂಜೆ ಗೈಯಲು ನರೇಂದ್ರಮೋದಿಯವರ ಪ್ರತಿಮೆ ಮಾಡಿಸಿರುವ ಇವರು ಪ್ರತಿ ದಿನ ಮೋದಿಗೆ ಪೂಜೆಗೈಯುತ್ತಾರೆ. ಮೋದಿ ಜೊತೆ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ವಾಜಪೇಯಿ, ಅಬ್ದುಲ್ ಕಲಾಂ ಸೇರಿದಂತೆ ಹಲವು ಪೋಟೋಗಳು ರಾರಾಜಿಸುತಿದ್ದು ಪ್ರತಿ ದಿ‌ನ ಇವುಗಳಿಗೆ ಪೂಜೆಗೈದು ನಂತರ ಎಂದಿನ ಕಾರ್ಯಕ್ಕೆ ತೆರಳುತ್ತಾರೆ.

ಇದನ್ನೂ ಓದಿ:-ರಾಜ್ಯದಲ್ಲೇ ಮೊದಲಬಾರಿ 24 ತಾಸುಗಳು ತೆರೆದಿರಲಿದೆ Karwar ಸಾರ್ವಜನಿಕ ಗ್ರಂಥಾಲಯ|ಕಾರಣ ಇಲ್ಲಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!