ಹೆಗಡೆ ಸಂದಾನ ವಿಫಲ! ಮಾಜಿ ಸಚಿವರ ಗನ್ ಮ್ಯಾನ್ ಗೆ ಸಿಕ್ತು ಕಪಾಳ ಮೋಕ್ಷ!

hegde halappa photo hegde halappa photo

ಶಿರಸಿ :- ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಚುನಾವಣೆಗೆ ಬಿಜೆಪಿ (bjp) ಟಿಕೆಟ್ ಅನಂತಕುಮಾರ್ ಹೆಗಡೆಗೆ ಕೈ ತಪ್ಪಿದ ನಂತರ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಮನೆಯಲ್ಲೇ ಮೌನಕ್ಕೆ ಜಾರಿದ್ದಾರೆ. ಇತ್ತ ಟಿಕೆಟ್ ಸಿಕ್ಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ನಾವು ಜೋಡೆತ್ತಿನಂತೆ ಕೆಲಸ ಮಾಡುತ್ತೇವೆ,ಹೆಗಡೆರವರು ಪ್ರಚಾರಕ್ಕೆ ಬರುತ್ತಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಇನ್ನು ಅನಂತಕುಮಾರ್ ಹೆಗಡೆ ಯಾವ ನಾಯಕರನ್ನೂ ಸಹ ಕಾಗೇರಿ ವಿಷಯದಲ್ಲಿ ಮಾತನಾಡಲು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇನ್ನು ಭ್ಕಳದ ಮಾಜಿ ಶಾಸಕ, ಕೆಲವು ಮುಖಂಡರು ಅನಂತಕುಮಾರ್ ಹೆಗಡೆ ಮನೆಗೆ ಹೋಗಿಬಂದಿದ್ದರೂ ಸಂದಾನದ ಬಗ್ಗೆ ಬಾಯಿ ತಪ್ಪಿಯೂ ಮಾತನಾಡಿರಲಿಲ್ಲ.

ಇನ್ನು ಕಾಗೇರಿ ಕಚೇರಿಯಿಂದ ಟಿಕೆಟ್ ಘೋಷಣೆ ಆದ ದಿನದಿಂದ ಅನಂತಕುಮಾರ್ ಹೆಗಡೆರವರನ್ನು ಮುಖತಹ ಭೇಟಿ ಮಾಡಲು ಸಮಯ ಕೇಳಿದ್ದರು. ಆದರೇ ಅನಂತಕುಮಾರ್ ಹೆಗಡೆ ಕಚೇರಿಯಿಂದ ಸಮಯ ನೀಡಿರಲಿಲ್ಲ.

Advertisement

ಇನ್ನು ಯಲ್ಲಾಪುರದಲ್ಲಿ ಬಿಜೆಪಿ ಸಭೆ ಸಹ ಆಯೋಜನೆ ಮಾಡಲಾಗಿದ್ದು ಅದಕ್ಕೂ ಪೂರ್ವದಲ್ಲಿ ಜಿಲ್ಲಾ ಚುನಾವಣೆ ಉಸ್ತುವಾರಿ ಹೊತ್ತಿದ್ದ ಸಾಗರದ ಮಾಜಿ ಶಾಸಕ , ಹರತಾಳು ಹಾಲಪ್ಪ ಸಂದಾನ ಮಾಡುವ ಹಾಗೂ ಪ್ರಚಾರಕ್ಕೆ ಹೆಗಡೆಯವರಿಗೆ ಬರಲು ಕೇಳಿಕೊಳ್ಳಲು ಕುದ್ದು ಮಾಜಿ ಸಚಿವರೊಂದಿಗೆ ಅನಂತಕುಮಾರ್ ಹೆಗಡೆ ಮನೆಗೆ ತೆರಳಿದ್ದಾರೆ. ಒಲ್ಲದ ಮನಸ್ಸಿನಲ್ಲಿ ಮನೆಯ ಒಳಗೆ ಬಿಟ್ಟುಕೊಂಡ ಹೆಗಡೆಯವರು ಹಾಲಪ್ಪನವರನ್ನು ಬರಮಾಡಿಕೊಂಡು ಮಾತನಾಡುತಿದ್ದರು. ಈ ವೇಳೆ ಹಾಲಪ್ಪನವರ ಗನ್ ಮ್ಯಾನ್ ತಮ್ಮ ಮೊಬೈಲ್ ನಲ್ಲಿ ಫೋಟೋ ಕ್ಲಿಕ್ಕಿಸಿದ್ದಾರೆ. ಇದರಿಂದ ಕುಪಿತರಾದ ಹೆಗಡೆಯವರು ಫೋಟೋ ಹೊಡೆಯದಂತೆ ತಾಕೀತು ಮಾಡಿದ್ರು ಆದ್ರೂ ಫೋಟೋ ಹೊಡೆದಿದ್ದರಿಂದ ಸಿಟ್ಟಿನಲ್ಲಿ ಮೊಬೈಲ್ ಕಸಿದು ಫೋಟೋ ಡಿಲಿಟ್ ಮಾಡಿಸಿ ಕೆನ್ನೆಗೆ ಬಾರಿಸಿದ್ದಾರೆ ಎಂಬ ಸುದ್ದಿ ಬಿಜೆಪಿ ವಲಯದಲ್ಲಿ ಸದ್ದು ಮಾಡುತ್ತಿದೆ.

ಈ ಸನ್ನಿವೇಶವನ್ನು ನಿರೀಕ್ಷಿಸದ ಮಾಜಿ ಶಾಸಕ ಹರತಾಳು ಹಾಲಪ್ಪ & ಟೀಮ್ ಕಕ್ಕಾಬಿಕ್ಕಿಯಾಗಿದ್ದಾರೆ. ಹೆಗಡೆಯವರ ಕೋಪಕ್ಕೆ ಬೆದರಿದ ಟೀಮ್ ಸಂದಾನ ಮಾತನಾಡಲು ಬಂದು ಅನಿರೀಕ್ಷಿತ ಕೊಡುಗೆ ನಿರೀಕ್ಷಿಸದೇ ಅಲ್ಲಿಂದ ಕಾಲ್ ಕಿತ್ತಿದೆ ಎಂದು ಹೇಳಲಾಗಿದೆ.

ಇನ್ನು ಈ ಘಟನೆ ನಡೆದು ಇವತ್ತಿಗೆ ಮೂರು ದಿನವಾಗಿದೆ. ಈ ಬಗ್ಗೆ ಅಂದೇ ಮಾಹಿತಿ ಬಂದರೂ ಮೂಲಗಳ ಮಾಹಿತಿ ಆಧಾರದಲ್ಲಿ ಪ್ರಕಟಿಸುವುದು ತಪ್ಪಾಗುವುದರಿಂದ ಘಟನೆ ನಡೆದ ಹಾಲಪ್ಪನವರನ್ನು ಹಾಗೂ ಅವರೊಂದಿಗಿದ್ದ ಇನ್ನೊಬ್ಬ ನಾಯಕರನ್ನು (ಅವರ ಮನವಿಯಂತೆ ಹೆಸರು ಗೌಪ್ಯವಾಗಿಡಲಾಗಿದೆ) ಕನ್ನಡವಾಣಿ ಟೀಮ್ ಸಂಪರ್ಕಿಸಿದ್ದು ಈ ವೇಳೆ ಘಟನೆ ನಡೆದಿದ್ದು ನಿಜ ಗನ್ ಮ್ಯಾನ್ ಗೆ ಫೋಟೋ ತೆಗೆಯದಂತೆ ತಾಕೀತು ಮಾಡಿ ಮೊಬೈಲ್ ಕಸಿದಿದ್ದು ನಿಜ ಆದರೇ ಇವೆಲ್ಲಾ ಸಾಮಾನ್ಯ, ಅವರು ಹೇಳಿದರೂ ಗನ್ ಮ್ಯಾನ್ ಫೋಟೋ ತೆಗೆದಾಗ ಸಿಟ್ಟಾಗಿದ್ದಾರೆ ಅಷ್ಟೇ ಎಂದಿದ್ದಾರೆ.

ಹೆಗಡೆ ಅವರಿಗೆ ಪ್ರಚಾರಕ್ಕೆ ಬರುವಂತೆ ಮನವಿ ಮಾಡಿದ್ದೇವೆ, ಬರುವುದಾಗಿ ಹೇಳಿದ್ದಾರೆ.ಅವರ ಅವಶ್ಯಕತೆ ಇದೆ ಖಂಡಿತಾ ಪ್ರಚಾರಕ್ಕೆ ಬರುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಹೊತ್ತ ಹರತಾಳು ಹಾಲಪ್ಪನವರು ಮಾಹಿತಿ ನೀಡಿದ್ದಾರೆ.

ಅನಂತಕುಮಾರ್ ಹೆಗಡೆ 30 ವರ್ಷಕ್ಕೂ ಹೆಚ್ಚು ಸುದೀರ್ಘ ರಾಜಕಾರಣಮಾಡಿದವರು. ಅವರದೇ ಆದ ಅಭಿಮಾನಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಲ್ಲದೇ ರಾಜ್ಯದ ಹಲವು ಭಾಗದಲ್ಲಿ ಇದ್ದಾರೆ.

ಹಿಂದಿನ ಲೋಕಸಭಾ ಚುನಾವಣೆ( Loksabha election)ಯಲ್ಲಿ ನಾಲ್ಕೂವರೆ ಲಕ್ಷದ ಅಂತರದಲ್ಲಿ ಗೆದ್ದ ಹೆಗಡೆ ನೆಗಟೀವ್ ಅಲೆಯಲ್ಲೂ ಮತ ಪಡೆದು ಗೆಲ್ಲುವುದರಲ್ಲಿ ನಿಸ್ಸೀಮರು.ಇವರ ರಾಜಕಾರಣವೇ ಬೇರೆ. ಹೀಗಿದ್ದರೂ ಹಲವು ಸಮಸ್ಯೆಗಳು ,ಕಾಲೆಳತಗಳು ,ನೆಗಟೀವ್ ಗಳು ಹೆಗಡೆಗೆ ಟಿಕೆಟ್ ಕೊನೆ ಕ್ಷಣದಲ್ಲಿ ಕೈ ತಪ್ಪಿದೆ. ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಮೌನಕ್ಕೆ ಜಾರಿದ್ದಾಗ ಬಿಜೆಪಿ ಜಿಲ್ಲೆಯಲ್ಲಿ ಸ್ಥಾನ ಕಳೆದುಕೊಂಡಿತ್ತು. ಆದ್ರೆ ಇದೀಗ ಲೋಕಸಭಾ ಚುನಾವಣೆಯಲ್ಲಿ ಹೆಗಡೆ ಮತ್ತೆ ಕಣಕ್ಕೆ ಇಳಿದು ಅಭ್ಯರ್ಥಿ ಪರ ಮತ ಕೇಳದಿದ್ದರೇ ದೊಡ್ಡ ಹೊಡೆತ ಬಿಜೆಪಿಗೆ. ಹೀಗಾಗಿ ಅವರ ಅವಶ್ಯಕತೆ ಜಿಲ್ಲಾ ಬಿಜೆಪಿಗಿದೆ. ಹೀಗಾಗಿ ಅವರನ್ನು ಪ್ರಚಾರಕ್ಕೆ ಕರೆಸುವ ಕಸರತ್ತು ಪಕ್ಷದಲ್ಲಿ ನಡೆದಿದೆ.

ಕೆಲವು ಮೂಲಗಳ ಪ್ರಕಾರ ಮುಂದಿನ ತಿಂಗಳ ಅಂತ್ಯದಲ್ಲಿ ಪ್ರಚಾರಕ್ಕೆ ಬರುತ್ತಾರೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.ಒಂದು ವೇಳೆ ಬಂದರೇ ಕಾಗೇರಿ ಕೆಲುವಿಗೆ ದೊಡ್ಡ ಕೊಡುಗೆ ಸಿಕ್ಕಂತಾಗುತ್ತದೆ. ಇಲ್ಲವಾದಲ್ಲಿ ಕಾಂಗ್ರೆಸ್ ಗೆ ಹೆಚ್ಚು ಲಾಭ ಆಗುವ ಸಾಧ್ಯತೆ ಇದ್ದು ಬಿಜೆಪಿ ಕೋಟೆಗೆ ” ಕೈ “ಗಾಳ ಹಾಕುವುದರಲ್ಲಿ ಅನುಮಾನವಿಲ್ಲ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement