ಕಾಗೇರಿ ಪಟ್ಟದಲ್ಲಿ ಅನಂತ ವಿಧಾಯ! ಏನಂದ್ರು ಹೆಗಡೆ ,ಕಾಗೇರಿ?

Loksabha election Uttrakannda BJP candidate Loksabha election Uttrakannda BJP candidate

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ( Uttara Kannada district Lok Sabha constituency) ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ಕೊನೆಗೂ ಭಾನುವಾರ ರಾತ್ರಿ ಬಿಡುಗಡೆಯಾದ ಬಿಜೆಪಿ ಅಭ್ಯರ್ಥಿ ಪಟ್ಟಿಯಲ್ಲಿ ಮಾಜಿ ಸ್ಪೀಕರ್ ಕಾಗೇರಿಯವರ ಹೆಸರು ಬರುವ ಮೂಲಕ ಹಾಲಿ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆಗೆ ಟಿಕೆಟ್ ಕೈ ತಪ್ಪಿದೆ.

ಬಿಜೆಪಿ(bjp) ಅಭ್ಯರ್ಥಿಯಾಗಿ ಆರು ಬಾರಿ ಶಿರಸಿ ವಿಧಾನಸಭಾ ಕ್ಷೇತ್ರ ದಲ್ಲಿ ಗೆಲುವು ಕಂಡಿದ್ದ ಕಾಗೇರಿಯವರಿಗೆ ನೀಡಲಾಗಿದೆ.

ಭಾನುವಾರ ರಾತ್ರಿ ಕಾಗೇರಿ ಮನೆಯಲ್ಲಿ ಸಂಭ್ರಮ ಮನೆತುಂಬಿತ್ತು. ತಾಯಿಯವರ ಆಶಿರ್ವಾದ ಪಡೆದ ಕಾಗೇರಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಮೇಲೆ ವಿಶ್ವಾಸ ಇಟ್ಟು ಟಿಕೆಟ್ ಕೊಟ್ಟಿದಕ್ಕೆ ಧನ್ಯವಾದಗಳು ಉತ್ತರ ಕನ್ನಡ ಬಿಜೆಪಿಯ ಭದ್ರಕೋಟೆ ,ನನ್ನ ಗೆಲುವು ನಿಶ್ಚಿತ,ಟಿಕೆಟ್ ಕೊಡುವ ವಿಚಾರವಾಗಿ ಬಹಳಷ್ಟು ಚರ್ಚೆ ಆಗಿದೆ,
ಒಬ್ಬ ಸಾಮಾನ್ಯ ಕಾರ್ಯಕರ್ತನಿಂದಲೂ ಅಭಿಪ್ರಾಯ ಪಡೆದು ಟಿಕೆಟ್ ನಿರ್ಧರಿಸಲಾಗಿದೆ.

Advertisement

Farmer speaker visvesvara Hegde Kageri family

ಟಿಕೆಟ್ ಕೊಡ್ತೆವಿ ರೆಡಿ ಇರಿ ಅಂತಾ ನನಗೆ ಯಾರೂ ಹೇಳಿರಲಿಲ್ಲ,ಟಿವಿಯಲ್ಲಿ ನೋಡಿಯೇ ನನಗೆ ಗೊತ್ತಾಗಿದೆ,ಅನಂತ ಕುಮಾರ ಹೆಗಡೆಗೆ ನಾನು ಭೇಟಿ ಆಗುತ್ತೇನೆ.ಅವರ ಅನುಭವ, ಸಹಕಾರದ ಅವಶ್ಯಕತೆ ನನಗಿದೆ. ನಾನು ಮತ್ತು ಅನಂತ ಕುಮಾರ ಜೊಡೆತ್ತಿನಂತೆ ಕೆಲಸ ಮಾಡುತ್ತೇವೆ.

ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುತ್ತೇವೆ.ರಾಷ್ಟ್ರೀಯತೆ, ಹಿಂದುತ್ವ ಜೊತೆಗೆ ಅಭಿವೃದ್ದಿಯನ್ನ ಮಾಡುವ ಗುರಿ ನನ್ನದು. ಅನಂತಕುಮಾರ್ ಹೆಗಡೆ ಬಂಡಾಯ ಏಳುತ್ತಾರೆ ಎನ್ನುವುದು ಮಾಧ್ಯಮಗಳ ಕಪೋಲೋ ಕಲ್ಪಿತ ,ಬಂಡಾಯ ಏಳಲು ಸಾಧ್ಯವಿಲ್ಲ,ಒಟ್ಟಾಗಿ ಇರುತ್ತೇವೆ ,ಅವರನ್ನೂ ಗಣನೆಗೆ ತೆಗೆದುಕೊಂಡು ಜೋಡೆತ್ತಿನಂತೆ ಸಾಗುತ್ತೇವೆ ಎಂದರು.

ಇನ್ನು ಕಾಗೇರಿಗೆ (kageri) ಟಿಕೆಟ್ ಘೋಷಣೆ ಆಗುತಿದ್ದಂತೆ ಸಂಸದ ಅನಂತಕುಮಾರ್ ಹೆಗಡೆ ತಮ್ಮ ಫೇಸ್ ಬುಕ್ ( Facebook) ಖಾತೆಯಲ್ಲಿ ದೇವರಿಗೆ ,ಜನತೆಗೆ ಧನ್ಯವಾದ ಸಲ್ಲಿಸಿ ಫೋಸ್ಟ್ ಮಾಡಿದ್ದಾರೆ. ಅದರ ಯತಾ ಪ್ರತಿ ಈ ಕೆಳಗಿನಂತಿದೆ.

Mp ananthkumar hegde Facebook status

ಸಧ್ಯ ಹಲವು ತಿಂಗಳಿಂದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಬಿಜೆಪಿ ಅಭ್ಯರ್ಥಿ ( BJP candidate) ಚರ್ಚೆಗೆ ಪೂರ್ಣ ವಿರಾಮ ವೇನೋ ಬಿದ್ದಿದೆ. ಆದರೇ ಅನಂತಕುಮಾರ್ ಹೆಗಡೆ ಫೋಸ್ಟ್ ಗಳು ಸಾಕಷ್ಟು ಪ್ರಶ್ನೆಗಳನ್ನು ಏಳುವಂತೆ ಮಾಡಿದ್ದು ,ಹೆಗಡೆ ಪಕ್ಷದ ಪರ ಕೆಲಸ ಮಾಡುತ್ತಾರಾ ಅಥವಾ ತಟಸ್ಥರಾಗಿ ಉಳಿಯುತ್ತಾರ ಎಂಬುದು ಇದೀಗ ಕುತೂಹಲ ಮೂಡಿಸುವಂತೆ ಮಾಡಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement