Ananthamurthy Hegde: ಸಾಮಾಜಿಕ ಕಾರ್ಯಕರ್ತನ ಒಂದು ಡೈರಿ ರಹಸ್ಯ!

199

ಕಾರವಾರ,ಪೆಬ್ರವರಿ10:- ಶಿರಸಿಯ ಅನಂತಮೂರ್ತಿ ಹೆಗಡೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಪೆ.5 ರಿಂದ 7 ರ ವರೆಗೆ ಪಾದಯಾತ್ರೆಯನ್ನು ಕುಮಟಾದಿಂದ ಭಟ್ಕಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ವರೆಗೆ ನಡೆಸಿದ್ದರು. ಆದ್ರೆ ಅವರ ಈ ಪಾದಯಾತ್ರೆ ಸದ್ದು ಮಾಡುವುದಕ್ಕಿಂತ ಅವರದ್ದು ಎಂದು ಹೇಳಲಾದ ಪಾದಯಾತ್ರೆ ಕರ್ಚಿನ ಫೋಟೋಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಎಲ್ಲೆಡೆ ಸದ್ದುಮಾಡಿದೆ. ಅಷ್ಟಕ್ಕೂ ಅದರಲ್ಲಿ ಪಾದಯಾತ್ರೆ ಸಂಬಂಧ ಯಾರಿಗೆ ಎಷ್ಟು ನೀಡಲಾಗಿದೆ ,ಕರ್ಚು ಎಷ್ಟಾಗಿದೆ ಎಂಬ ಮಾಹಿತಿ ಅದರಲ್ಲಿದೆ.

ಫೇಸ್ ಬುಕ್ ನಲ್ಲಿ ಹರಿದಾಡಿದ್ದು.

ಕೆಲವು ಮೂಲಗಳನ್ನು ಕೆದಕಿದಾಗ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಆಪ್ತ ವಲಯದಲ್ಲಿ ಇರುವ ಸಂತೋಷ್ ಎಂಬುವವರು ಬರೆದ ಹಸ್ತಾಕ್ಷರ ಎಂದು ಹೇಳಲಾಗುತ್ತಿದೆ.ಆದ್ರೆ ಇದು ಅಧಿಕೃತ ಎಂಬ ಬಗ್ಗೆ ಮಾಹಿತಿ ಇಲ್ಲ, ಇನ್ನು ಈ ಫೋಟೋ ಪತ್ರಕರ್ತ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬನಿಂದ ಹಲವು ಕಡೆ ಶೇರ್ ಆಗಿದೆ. ಇನ್ನು ಟೀಮ್ ಸುನಿಲ್ ನಾಯ್ಕ ಎಂಬ ಹೆಸರಲ್ಲಿ ಇರುವ ಫೇಸ್ ಬುಕ್ ನಲ್ಲಿ ಈ ಫೋಟೋ ಬಳಸಿ ಸುಳ್ಳು ಸಂದೇಶ ಹಂಚಲಾಗಿದೆ.ಇದಲ್ಲದೇ ಪ್ರಚಾರಕ್ಕೆ ಬಳಸಿದ್ದ ಬ್ಯಾನರ್ ನಲ್ಲಿ ಅನಂತಮೂರ್ತಿ ಹೆಗಡೆ ಫೋಟೋ ಹರಿದುಹಾಕಲಾಗಿದೆ. ಒಟ್ಟಿನಲ್ಲಿ ಅನಂತಮೂರ್ತಿ ಹೆಗಡೆ ಭಟ್ಕಳದ ಕಡೆ ಮುಖ ಮಾಡಿದ್ದು ಕೆಲವು ನಾಯಕರ “ಕುಂಡೆ”ಬಿಸಿ ಮಾಡಿದ್ದಂತು ಸತ್ಯ ಎನ್ನುವುದು ಈ ಘಟನೆಯಿಂದ ಸಾಭೀತಾದ್ರೆ ,ಹಣಕ್ಕಾಗಿ ಬಂದ್ರಾ ಜನ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದ್ದು ಅವರ ಆತ್ಮ ಸಾಕ್ಷಿಗೆ ಬಿಟ್ಟದ್ದಾಗಿದೆ. ಆದ್ರೆ ಹಣ ಕೊಟ್ಟಿದ್ದೇ ಆಗಿದ್ದರೇ ಯಾವ ಮಟ್ಟದಲ್ಲಿ ಜನ ಸೇರಬೇಕಿತ್ತು ಎಂಬುದನ್ನು ಸಹ ಅವಲೋಕಿಸಬೇಕಿದೆ.

ಹರಿದ ಬ್ಯಾನರ್.

ಫೇಸ್ ಬುಕ್ ನಲ್ಲಿ ಹರಿದಾಡಿದ್ದು:-

ಇದೆಲ್ಲವನ್ನೂ ಹೊರತು ಪಡಿಸಿದ್ರೆ ಅನಂತಮೂರ್ತಿ ಹೆಗಡೆ ಯಾವ ಉದ್ದೇಶಕ್ಕಾದರೂ ಕ್ಷೇತ್ರ ಕ್ಕೆ ಬಂದಿರಲಿ ಆದ್ರೆ ಅವರ ಕೆಲವು ಯೋಜನೆಗಳು ಸರ್ಕಾರ ಮಾಡಬೇಕಾದ್ದಾಗಿದೆ. ಯಾರೂ ನಿರೀಕ್ಷಿಸದ ಕೊನೆಗೌಡರಿಗೆ ವಿಮೆ ಮಾಡಿಸುವ ಕಾರ್ಯ ಉತ್ತಮ ಯೋಚನೆಯದ್ದಾಗಿದೆ. ಇದು ಸರ್ಕಾರದ ಮಟ್ಟದಲ್ಲಿ ಜಾರಿಗೆ ಬರಬೇಕಿದೆ. ಇನ್ನು ವಿಷಯಕ್ಕೆ ಬರುವುದಾದರೇ ಒಂದು ಪೇಪರ್ ತುಂಡಿನ ಚಿತ್ರ ಸಾಕಷ್ಟು ಸದ್ದು ಮಾಡುವ ಜೊತೆ ಎಲ್ಲರನ್ನೂ ಪ್ರಶ್ನೆ ಮಾಡುವಂತೆ ಮಾಡಿದೆ.

ಈ ಬಗ್ಗೆ ಅನಂತಮೂರ್ತಿ ಹೆಗಡೆ ಹೇಳಿದ್ದೇನು?

ನನ್ನ ಬಗ್ಗೆ ಕೆಲವರು ಫೇಸ್ಬುಕ್ ನಲ್ಲಿ ತಪ್ಪು ಮಾಹಿತಿ ಹಾಕಿ ನಾನು ಹಣ ಕೊಟ್ಟು ಜನರನ್ನ ಪಾದಯಾತ್ರೆಗೆ ಕರೆದಿದ್ದೇನೆ ಎಂದು , ಮೊನ್ನೆ ರಾತ್ರಿ ನಾನು ಓಡಿ ಹೋಗಿದ್ದೀನಿ ಎಂದು ಅಪಪ್ರಚಾರ ಮಾಡಿದ್ದಾರೆ.

ನಾನು ಓಡಿ ಹೋಗಿಲ್ಲ, ಮುರುಡೇಶ್ವರ ರಿಕ್ಷಾ ರ್ಯಾಲಿಗೆ 2.3 ಲಕ್ಷ ಖರ್ಚು ಮಾಡಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ. ಅಸಲಿಗೆ ರಿಕ್ಷಾ ರ್ಯಾಲಿ ಆಗಲೇ ಇಲ್ಲ , ನನ್ನದು ಯಾವುದೇ ಡೈರಿ ಇಲ್ಲ,ಎಲ್ಲ ಸುಳ್ಳು ಸುದ್ದಿ ,ನಾನು ಪಾದ ಯಾತ್ರೆ ಯಶಸ್ವಿಯಾಗಿ ಮುಗಿಸಿದ್ದೇನೆ,ನಾನು ಯಾವುದೇ ಹಣ ಕೊಟ್ಟು ಜನರನ್ನ ಕರೆದಿಲ್ಲ ಅಥವಾ ನನಗೆ ಯಾರೂ ಹಣ ಕೊಟ್ಟಿಲ್ಲ , ನನ್ನ ಫ್ಲೆಕ್ಸ್ ಹರಿದು ಹಾಕಿದ್ದಾರೆ ಇದು ಸರಿಯಲ್ಲ.

ನನಗೆ ಶ್ರೀ ಮಂಕಾಳುವೈದ್ಯರ ಬಗ್ಗೆ ವೈಯುಕ್ತಿಕ ವಾಗಿ ಬಹಳ ಗೌರವ ಇದೆ , ಯಾರೇ ಮನೆಗೆ ಬಂದರೂ ಉಚಿತವಾಗಿ ಊಟೋಪಚಾರ ವೈದ್ಯರು ಇಷ್ಟ,ಅವರಿಗೂ ನನ್ನ ಬಗ್ಗೆ ಗೌರವ ಇದೆ , ಆವರೂ ಅವರ ಆತ್ಮೀಯರ ಹತ್ತಿರ ನನ್ನ ಬಗ್ಗೆ ಒಳ್ಳೆಯ ಮಾತನ್ನ ಹೇಳಿದ್ದಾರೆ .

ನಾನು ಜಿಲ್ಲೆಯು ಅಸ್ಪತ್ರೆ ಸಲುವಾಗಿ ಹೋರಟ ಮಾಡಿದ್ದೇನೆ ಅಷ್ಟೇ, ಬೇಡದಿರುವ ಯೋಜನೆಗೆ ಹಣ ಕೊಡುತ್ತೀರಿ ಆದರೇ ಆಸ್ಪತ್ರೆಗೆ ಹಣ ಯಾಕೆ ಕೊಡುವುದುದಿಲ್ಲ , ಇಲ್ಲಿನ ಮೀನುಗಾರರು ಬಡವರು ತುರ್ತು ಚಿಕಿತ್ಸೆಗೆ ಮಂಗಳೂರಿಗೆ ಹೋಗುವುದು ಕಷ್ಟ ಅಲ್ಲವೆ? ಬಡವರ ಕಷ್ಟ ಅರ್ಥ ಮಾಡಿಕೊಳ್ಳಬೇಕು, ಕುಮಟಾದಲ್ಲಿ ಗುರುತಿಸಿದ ಅಸ್ಪತ್ರೆ ಜಾಗಕ್ಕೆ ಹಣ ಬಿಡುಗಡೆ ಮಾಡಿ, ಯುವಕ ಯುವತಿಯರಿಗೆ ಉದ್ಯೋಗಕ್ಕೆ ಫ್ಯಾಕ್ಟರಿ ಯಾಕೆ ಮಾಡುವುದಿಲ್ಲ ಎಂದು ಪ್ರಶ್ನೆ ಮಾಡಿದ್ದೇನೆ ಅಷ್ಟೇ .

ತಾವು ಯಾಕೆ ವೈಯುಕ್ತಿಕವಾಗಿ ತೆಗೆದು ಕೊಳ್ಳುತ್ತಿರಿ? ಅಸ್ಪತ್ರೆ ಆದರೆ ನಮ್ಮೆಲ್ಲರ ಕುಟುಂಬ ಚೆನ್ನಾಗಿರಬಹುದು ಅಲ್ಲವೇ ?
ದೂರದ ಹುಬ್ಬಳ್ಳಿ ಮಂಗಳೂರಿಗೆ ಹೋಗುವ ಗ್ರಹಚಾರ ತಪ್ಪುವುದು ಅಲ್ಲವೇ , ವೈದ್ಯರು ಮನಸ್ಸು ಮಾಡಿದರೆ ಕಷ್ಟವಿಲ್ಲ ಎಂದು ಹೇಳಿದ್ದೇನೆ ಅಷ್ಟೇ

ನಾವು ಮಂಗಳೂರಿನ ಜನರನ್ನ ನೋಡಿ ಕಲಿಯಬೇಕು, ಅಭಿವೃಧ್ದಿ ವಿಚಾರದಲ್ಲಿ ಎಲ್ಲ ಒಂದಾಗುತ್ತಾರೆ,
Please ವೈಯಕ್ತಿಕ ದ್ವೇಷ ಬೇಡ , ನಾನೂ ನಿಮ್ಮ ಊರಿನವನೆ ಅಲ್ಲವೇ ? ಎನ್ನುವ ಮೂಲಕ ತಮ್ಮ ಫೇಸ್ ಬುಕ್ ನಲ್ಲಿ ಭಟ್ಕಳದ ಜನತೆಗೆ ಪ್ರಶ್ನೆ ಮಾಡಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ (Fake news) ಹರಡಿಸಿದವರ ವಿರುದ್ಧ ಅನಂತಮೂರ್ತಿರವರು ಸೈಬರ್ ಕ್ರೈಮ್ ವಿಭಾಗದಲ್ಲಿ ದೂರು ನೀಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!