Bhatkal news

BHATKAL| ಕೋಕ್ತಿ ನಗರದ ಕರೆ ಸಂಪೂರ್ಣ ರಕ್ತ ಮಯ! ಶಾಕ್ ಆದ ಸ್ಥಳೀಯರು!

139

BHATKAL :- ಭಟ್ಕಳ ಪಟ್ಟಣದ ಕೋಕ್ತಿನಗರದ ಕೆರೆಗೆ ಮಂಗಳವಾರ ಬೆಳಿಗ್ಗೆ ಮಳೆಯ ನೀರಿನಂತೆ ರಕ್ತ ಮಿಶ್ರಿತ ನೀರು ಹರಿದು ಬಂದಿದ್ದು ಸ್ಥಳೀಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಮುಸ್ಲಿಂ (muslim) ಸಮುದಾಯದವರು ಮನೆಯಲ್ಲಿ ಪ್ರಾಣಿ ವಧೆ ನಡೆಸಿ ರಕ್ತವನ್ನು ಇನ್ನೂ ಸಂಪೂರ್ಣಗೊಳ್ಳದ ಚರಂಡಿಗೆ ಹರಿಬಿಟ್ಟಿದ್ದು ಕೆರೆಯನ್ನೇ ರಕ್ತಮಯವಾಗಿಸಿದೆ.

ಇದನ್ನೂ ಓದಿ:-ಮಾಂಸಕ್ಕಾಗಿ ಗೋವು ಕಳ್ಳತನ ಭಟ್ಕಳದಲ್ಲಿ ಅಂದರ್ !

ಬಂದರ್ ರೋಡ್ 2ನೇ ಕ್ರಾಸ್, ಕೋಕ್ತಿನಗರದ ಅಕ್ಕಪಕ್ಕದ ಮನೆಯಿಂದ ಪ್ರಾಣಿಗಳ ರಕ್ತ ಚರಂಡಿಯಲ್ಲಿ ನೀರಿನಂತೆ ಹರಿದಿದೆ. ಬಂದರ ರಸ್ತೆಯಲ್ಲಿ ಕೋಕ್ತಿ ನಗರದ ಅಕ್ಕಪಕ್ಕದಲ್ಲಿ ಇನ್ನೂ ಯುಜಿಡಿ ಕಾಮಗಾರಿ ನಡೆಯುತ್ತಿದೆ.

ಹಾಗಾಗಿ ಅದನ್ನು ಸಾರ್ವಜನಿಕರಿಗೆ ಬಳಸಲು ಅನುವು ಮಾಡಿಕೊಟ್ಟಿಲ್ಲ. ಅಲ್ಲದೆ ಅದನ್ನು ಇನ್ನೂ ತನಕ ಪುರಸಭೆಗೂ ಒಳಚರಂಡಿ ಇಲಾಖೆ ಹಸ್ತಾಂತರಿಸಿಲ್ಲ. ಆದರೆ ಅಷ್ಟರಲ್ಲಿ ಯಾವುದೊ ಮನೆಯವರೂ ಪ್ರಾಣಿ ವಧೆ ಮಾಡಿ ರಕ್ತವನ್ನು ಚರಂಡಿಯಲ್ಲಿ ಹರಿ ಬಿಟ್ಟಿದ್ದು, ಇದರಿಂದ ಮಳೆ ನೀರಿನೊಂದಿಗೆ ರಕ್ತವೂ ಕೋಕ್ತಿ ಕೆರೆ ಸೇರಿ ವಾತಾವರಣವನ್ನೇ ಕಲುಷಿತ ಮಾಡಿದೆ.

ಈ ಘಟನೆಯ ವಿಡಿಯೋ (video)ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವಂತೆ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆಯ ಸದಸ್ಯರು ಜಮಾಗೊಂಡಿದ್ದಾರೆ. ರಕ್ತವೂ ನೀರಿನಲ್ಲಿ ಹರಿಯುತ್ತಿರುವದನ್ನು ಕಂಡು ಸಾರ್ವಜನಿಕರು ಕೋಕ್ತಿ ಕೆರೆ ನೀರು ಮಲಿನಗೊಳಿಸಿರುವದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:-ಭಟ್ಕಳ| ಗೋವುಗಳನ್ನು ಹಿಡಿದ ಪೊಲೀಸರು- ಠಾಣೆಗೆ ಮುತ್ತಿಗೆ ಹಾಕಿದ ಹಿಂದೂಕಾರ್ಯಕರ್ತರು!

ಹಿಂದೂ ಸಮುದಾಯದ ವಿಶೇಷವಾಗಿ ಗೊಂಡ ಸಮುದಾಯದವರು ಪೂಜ್ಯ ಭಾವನೆಯಿಂದ ನೋಡುವ ಕೆರೆ ಮಲೀನಗೊಂಡಿರುವದು ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದು ಸ್ಥಳದಲ್ಲಿ ಬಿಗುವಿನ ವಾತವರಣ ಏರ್ಪಟ್ಟಿತ್ತು. ಸ್ಥಳಕ್ಕೆ ತಕ್ಷಣ ಪುರಸಭೆಯ ಅಧಿಕಾರಿಗಳು, ಒಳಚರಂಡಿ ಇಲಾಖೆ ಅಧಿಕಾರಿಗಳು ದೌಡಾಯಿಸಿ ಮೊದಲು ರಕ್ತ ಮಿಶ್ರೀತ ನೀರು ಕೆರೆಗೆ ಹರಿಯುವುದನ್ನು ತಪ್ಪಿಸಿದ್ದಾರೆ. ಬಳಿಕ ಚರಂಡಿಯಲ್ಲಿ ಜಮಾಗೊಂಡ ಮಲೀನ ನೀರನ್ನು ಟ್ಯಾಂಕರ್ ಮೂಲಕ ಬೆರೆಡೆಗೆ ಸಾಗಿಸಿ ತಪ್ಪು, ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಯವ ಭರವಸೆ ನೀಡಿದ್ದಾರೆ.

ಡಿವೈಎಸ್‌ಪಿ ಮಹೇಶ ಎಂ.ಕೆ., ನಗರ ಠಾಣೆ ಪಿಎಸ್‌ಐ, ಎಎಸ್‌ ಐ ಸೇರಿ ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ತಂಜೀಂ ಅಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ ಸ್ಥಳಕ್ಕೆ ಆಗಮಿಸಿ ಈ ಘಟನೆಯನ್ನು ಖಂಡಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!