police arrested two persons who were illegally transporting cows

ಮಾಂಸಕ್ಕಾಗಿ ಗೋವು ಕಳ್ಳತನ ಭಟ್ಕಳದಲ್ಲಿ ಅಂದರ್ !

106

ಕಾರವಾರ :-ಮಹೇಂದ್ರ ಬೊಲೆರೋ ಪಿಕಪ್ ವಾಹನದಲ್ಲಿ ಅಕ್ರಮವಾಗಿ ವದೆ ಮಾಡುವ ಉದ್ದೇಶದಿಂದ ಎರಡು ಕೋಣಗಳನ್ನು ಕಳ್ಳತನ (theft) ಮಾಡಿ ಸಾಗಾಟ ಮಾಡುತ್ತಿದ್ದ ವೇಳೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಗಣೇಶ ನಗರ ಪುರವರ್ಗ ಚೆಕ್ ಪೋಸ್ಟ್ ನಲ್ಲಿ ಪೊಲೀಸರು (police)ವಾಹನ ತಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಗಳನ್ನು ( accused )ರಾಮ ಭಡ್ಕಾ ನಾಯ್ಕ ಹಡಿಲ್ ಸಬ್ಬತ್ತಿ ಜೋಳದ ಮೂಲೆ ನಿವಾಸಿ ಹಾಗೂ ರಾಮಚಂದ್ರ ಸುಬ್ಬ ನಾಯ್ಕ ಬೆಳೆಕೆ ಕಾನಮದ್ಲು ನಿವಾಸಿ ಎಂದು ತಿಳಿದು ಬಂದಿದೆ.

ಗೋಮಾಂಸ ಮಾರಾಟಕ್ಕಾಗಿ ವದೆ ಮಾಡಲು ಉದ್ದೇಶದಿಂದ ಶನಿವಾರ ಬೆಳಗಿನ ಜಾವ 4-30 ಕ್ಕೆ ಬೈಂದೂರಿನಿಂದ ಭಟ್ಕಳ ಕಡೆಗೆ 50,000 ಮೌಲ್ಯದ 02 ಕೊಣಗಳನ್ನು ಕಳುವು ಮಾಡಿಕೊಂಡು ಯಾವುದೇ ಪಾಸ್ ಪರವಾನಿಗೆ ಇಲ್ಲದೇ ಮಹೀಂದ್ರಾ ಬೊಲೆರೋ ಪಿಕಪ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಾಲುಗಳನ್ನು ಹಗ್ಗದಿಂದ ಕಟ್ಟಿ ವಾಹನದಲ್ಲಿ ( vehicle) ಸಾಗಾಟ ಮಾಡಿ ಕೊಂಡು ಹೋಗುತ್ತಿರುವಾಗ ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ-66 ರಸ್ತೆ ಗಣೇಶ ನಗರ ಪುರವರ್ಗ ಚೆಕ್ ಪೊಸ್ಟ್ ನಲ್ಲಿ ನಗರ ಠಾಣೆಯ ಪಿ.ಎಸ್.ಐ ಶಿವಾನಂದ ನಾವದಗಿ ಪಿಎಸ್‌ಐ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ.ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:-Bhatkal ಚಿಕಿತ್ಸೆ ನೀಡಲು ವೈದ್ಯರ ವಿಳಂಬಕ್ಕೆ ಅಕ್ರೋಶ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!