ಕಾರವಾರ :- ಅಪಘಾತದಲ್ಲಿ ಕಾಲು ಮುರಿತಕ್ಕೊಳಗಾಗಿ ಚಿಕಿತ್ಸೆಗೆಂದು ಬಂದ ರೋಗಿಯ ತಪಾಸಣೆಗೆ ವಿಳಂಬ ಮಾಡಿದ ವೈದ್ಯರ (doctor) ನಿರ್ಲಕ್ಷ್ಯಕ್ಕೆ ಶುಕ್ರವಾರ ರೋಗಿಯ ಸಂಬಂಧಿಕರು ಹಾಗೂ ಸಾರ್ವಜನಿಕರು ಭಟ್ಕಳದ (bhatkal) ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಎದುರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ಅಪಘಾತವೊಂದರಲ್ಲಿ ಮಹಿಳೆಯೊಬ್ಬರು ಮೂಳೆ ಮುರಿದುಕೊಂಡಿದ್ದರು. ತಕ್ಷಣ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ( Bhatkal government hospital)
ಇದನ್ನೂ ಓದಿ:- ಕುಮಟಾ: ಬ್ರೂಣ ಹತ್ಯೆ ,ಶಿಶು ಮಾರಾಟ ಜಾಲದಲ್ಲಿ ಜಾನು ಆಸ್ಪತ್ರೆ! ಏನಿದು ಆರೋಪ?
ಆದರೆ ತಪಾಸಣೆ ನಡೆಸಬೇಕಾದ ಮೂಳೆ ತಜ್ಞ ಡಾ. ಜನಾರ್ದನ ಮೊಗೇರ ಹಲವು ಸಲ ದೂರವಾಣಿ ಕರೆ ಮಾಡಿದರೂ ಆಸ್ಪತ್ರೆಗೆ ಬಂದಿಲ್ಲ. ತಾಲ್ಲೂಕು ವೈದ್ಯಾಧಿಕಾರಿಗಳೂ ಕರೆಗೆ ಸ್ಪಂದಿಸಿಲ್ಲ ’ ಎಂದು ಸಂಬಂಧಿಕರು, ಸಾರ್ವಜನಿಕರು ಆರೋಪಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಜನರು ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಕೆಲ ಸಮಯದ ಬಳಿಕ ಆಸ್ಪತ್ರೆಗೆ ಬಂದ ವೈದ್ಯರಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ವೈದ್ಯರನ್ನು ಬದಲಿಸುವಂತೆ ಟಿಎಚ್ಒ, ಡಿಎಚ್ಒ ಅವರನ್ನು ಒತ್ತಾಯಿಸಿದ್ದಾರೆ. ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಶನಿವಾರ ಡಿಎಚ್ಒ ಸ್ಥಳಕ್ಕೆ ಬರುವುದಾಗಿ ತಿಳಿಸಿದ್ದು, ಭಟ್ಕಲ ಶಹರ ಠಾಣೆಯ ಪೊಲೀಸರ ಮಧ್ಯಸ್ಥಿಕೆಯಿಂದ ಪ್ರತಿಭಟನಾಕಾರರನ್ನು ಪೊಲೀಸರು ಸಮಾಧಾನ ಪಡಿಸಿದ್ದಾರೆ.
ಟಿ.ಹೆಚ್.ಓ ನಿಂದ ಹಲವು ಬಾರಿ ಮೆಮೋ ಪಡೆದಿದ್ದ ವೈದ್ಯ
ಭಟ್ಕಳ ಸರ್ಕಾರಿ ಆಸ್ಪತ್ರೆಯ ಮೂಳೆ ತಜ್ಞ ಡಾ. ಜನಾರ್ದನ ಮೊಗೇರ ರವರು ಪ್ರತಿ ಬಾರಿ ಕಚೇರಿಗೆ ತಡವಾಗಿ ಬರುತಿದ್ದು ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಈ ಹಿಂದೆ ಸಹ ತಡವಾಗಿ ಕರ್ತವ್ಯಕ್ಕೆ ಹಾಜುರಾದ ವೈದ್ಯರಿಗೆ ತಾಲೂಕು ವೈದ್ಯಾಧಿಕಾರಿ ಡಾ. ಸವಿತಾ ರವರು ಮೆಮೋ ಸಹ ನೀಡಿದ್ದರು .ಆದ್ರೆ ಯಾವುದಕ್ಕೂ ಸ್ಪಂದನೆ ಮಾಡದ ವೈದ್ಯರು ಕರ್ತವ್ಯ ವಿಷಯದಲ್ಲಿ ನಿರ್ಲಕ್ಷ ತೋರುತಿದ್ದು ಇದರಿಂದಾಗಿ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ.
ಇದನ್ನೂ ಓದಿ:- Ration card ಅರ್ಜಿ ಸಲ್ಲಿಸುವವರಿಗೆ ಡಿ. 3 ರಂದು ಅವಕಾಶ: ಏನೆಲ್ಲಾ ಮಾಹಿತಿ ಬೇಕು ವಿವರ ನೋಡಿ






