Uttrakannada rain flood 27 June 2024

ಕುಮಟಾ -ಸಿದ್ದಾಪುರ ರಸ್ತೆ ಜಲಾವೃತ- ಎಲ್ಲೆಲ್ಲಿ ಹಾನಿ ವಿವರ ನೋಡಿ

92

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಇಂದು ಸಹ ಮಳೆ ಹೆಚ್ಚಾಗಿದ್ದು ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ.

ಮಳೆಯ ಅಬ್ಬರಕ್ಕೆ ಕುಮಟಾ , ಭಟ್ಕಳ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗುತ್ತಿದೆ.

ಕುಮಟಾ ವಾಲ್ಕಳ್ಳಿ ಗ್ರಾಮ ಕುಜಳ್ಳಿ ಹೋಬಳಿ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು
ಮಳೆಯಿಂದ ಕುಮಟಾ – ಸಿದ್ದಾಪುರ ರಸ್ತೆ ಜಲಾವೃತವಾಗಿ ಸಂಚಾರ ತಾತ್ಕಾಲಿಕ ಬಂದ್ ಆಗಿದೆ.

ಇನ್ನು ಭಟ್ಕಳದ ಹೆಬಳೆ ಗ್ರಾಮದ ತಗ್ಗು ಪ್ರದೇಶ ಜಲಾವೃತವಾಗಿದ್ದು ,ಮುರುಡೇಶ್ವರ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಜಲ ದಿಗ್ಭಂಧನವಾಗಿದೆ.

ಇನ್ನೂ ಹೆಚ್ಚಿನ ಮಳೆಯಾದಲ್ಲಿ ಕುಮಟಾ,ಭಟ್ಕಳ ಭಾಗದಲ್ಲಿ ಪ್ರವಾಹ ಸ್ಥಿತಿ ಉಂಟಾಗುವ ಸಾಧ್ಯತೆಗಳಿವೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!