Uttara Kannada district Kumta news

KUMTA |ತೆಂಗಿ‌ನಕಾಯಿ ಆಸೆಗೆ ಜೀವ ಬಿಟ್ಟ ಮಹಿಳೆ

114

KUMTA NEWS :- ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತಿದ್ದ ಮಹಿಳೆಯೊಬ್ಬಳು ದಾರಿಯಲ್ಲಿ ಮನೆಯ ಬೇಲಿಯ ಬಳಿ ಬಿದ್ದಿದ್ದ ತೆಂಗಿನಕಾಯಿ (coconut) ಆರಿಸಲು ಹೋಗಿ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟ ದ ಹರಕಡೆಯಲ್ಲಿ ನಡೆದಿದೆ.

ವಿದ್ಯುತ್ ಶಾಕ್ ನಿಂದ ಮೃತಳಾದ ಹರಕಡೆಯ ಸುಶೀಲಾ ಶಿವು ಅಂಬಿಗ (65) ಎಂದಾಗಿದ್ದು ಸ್ಥಳಕ್ಕೆ ಕುಮಟಾ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮನೆಯ ಬೇಲಿಗೆ ವಿದ್ಯುತ್ ಸಂಪರ್ಕ ನೀಡಿರುವ ಸಾಧ್ಯತೆ ಬಗ್ಗೆ ಹೆಸ್ಕಾಂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಪಕ್ಕದಲ್ಲೇ ಇರುವ ಕಂಬದಿಂದ ತಗಲಿರಬಹುದೇ ಎಂದು ತನಿಖೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ:-Weekly horoscope |ವಾರ ಭವಿಷ್ಯ-JUNE 16 ರಿಂದ 22 JUNE




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!