Weekly astrology 2024

Weekly horoscope |ವಾರ ಭವಿಷ್ಯ-JUNE 16 ರಿಂದ 22 JUNE

92

weekly Horoscope| ವಾರದ ಭವಿಷ್ಯ

ವೇಷ:- ತಾಳ್ಮೆಯಿಂದ ಇದ್ದರೆ ಇರುವ ಕೆಲಸ ಕೈಗೂಡಲಿದೆ. ನಿಮ್ಮ ರಾಶಿಯಲ್ಲಿ ದ್ವೀತೀಯದಲ್ಲಿ ಇರುವುದರಿಂದ ನಿಮ್ಮ ಸಂಕಟಗಳು ದೂರ ಆಗಲಿದೆ. ದೈವದ ಬಗ್ಗೆ ನಿಮಗೆ ಆಸಕ್ತಿ ಕಡಿಮೆ ಇರುವ ನೀವು ಈ ವಾರ ದೇವರ ಬಗ್ಗೆ ಹೆಚ್ಚು ಒತ್ತು ಕೊಡುವಿರಿ, ಆರೋಗ್ಯ ಮಧ್ಯಮ, ಹೋಟಲ್ ಉದ್ಯಮಿಗಳಿಗೆ ಶುಭ.

ವೃಷಭ:-ನಿಮ್ಮ ರಾಶಿಯಲ್ಲಿ ಲಗ್ನದಲ್ಲಿ ಗುರು ಇದ್ದಾನೆ.ಇದರಿಂದ ತಕ್ಷಣದಲ್ಲಿ ಡಿಶೀಶನ್ ತೆಗೆದುಕೊಳ್ಳಲಾಗದೇ ಪೇಚಿಗೆ ಸಿಲುಕುವಿರಿ,ಅಲ್ಪ ಕಷ್ಟಗಳನ್ನು ಎದುರಿಸುವಿರಿ, ಉದ್ಯೋಗಿಗಳಿಗೆ ಶುಭ ಇರದು, ವಾರದ ಅಂತ್ಯ ಶುಭ,ಗುತ್ತಿಗೆದಾರರಿಗೆ ಶುಭ ವಿರದು.ಗುರುಬಲ ಇಲ್ಲದಿದ್ದರೂ ರಾಹು ಬಲ ಇದೆ ಹೀಗಾಗಿ ಹಣದ ಹರಿವಿಗೆ ತೊಂದರೆ ಇರುವುದಿಲ್ಲ.

ಇದನ್ನೂ ಓದಿ:-ಕಾರವಾರದಲ್ಲಿ ನಟ ದರ್ಶನ್ ಬಾವ ಮಂಜುನಾಥ್ ಡಿ ಬಾಸ್ ಬಗ್ಗೆ ಹೇಳಿದ್ದೇನು?

ಮಿಥುನ:-ರಾಶಿಯಲ್ಲೇ ಬುಧ ಶುಕ್ರ ಸೂರ್ಯ ಇದ್ದಾರೆ. ಆರೋಗ್ಯ ವನ್ನು ಕಾಪಾಡಿಕೊಳ್ಳಿ, ಹಣದ ಅಡಚಣೆ ಆಗದು,ಶತ್ರುಗಳ ಕಾಟ ಹೆಚ್ಚು,ಐದನೇ ಅಧಿಪತಿ ಶುಕ್ರ ಹಾಗೂ ನಿಮ್ಮ ರಾಶಿ ಅಧಿಪತಿ ಬುಧ ಯುತಿಯೋಗದಲ್ಲಿ ಇರುವುದು ನಿಮಗೆ ಅದೃಷ್ಟವನ್ನು ಕೊಡುತ್ತದೆ. ಕಿರಿಕಿರಿ ದೂರವಾಗುತ್ತದೆ,ನೌಕರರಿಗೆ ವರ್ಗಾವಣೆ ಭಾಗ್ಯ ವಿದೆ.

ಕಟಕ ರಾಶಿ:-ಆರೋಗ್ಯ ಮತ್ತು ಸುಖ ಎರಡೂ ಈ ವಾರ ನಿಮ್ಮ ಕೈ ನಲ್ಲಿದೆ. ಲಾಭಸ್ಥಾನದಲ್ಲಿ ಗುರು ಇರುವುದು ನಿಮ್ಮ ಬೆಳವಣಿಗೆಗೆ ಬಹಳಷ್ಟು ಕಾರಣವಾಗುತ್ತದೆ. ಹಿಂದೆ ಬಿದ್ದಿದ್ದ ನಿಮ್ಮ ನಿರೀಕ್ಷೆ ಆಸೆ ಗುರಿ ಮುಂತಾದ ಸಂಗತಿಗಳು ಈಗ ಚಾಲನೆ ಪಡೆದುಕೊಂಡು ಚುರುಕಾಗುತ್ತದೆ. ಈ ವಾರ ಆರ್ಥಿಕ ಸಮಸ್ಯೆ ಆಗದು ,ಕುಟುಂಬ ಶಾಂತಿ ಇರುವುದು.

ಸಿಂಹ ರಾಶಿ:- ಗುರುಬಲ ಇಲ್ಲದೇ ಇದ್ದರೂ ಲಾಭ ಸ್ಥಾನದಲ್ಲಿ ಮೂರುಗ್ರಹಗಳು ಬುಧ ಶುಕ್ರ ಸೂರ್ಯ ಸೇರಿ ಒಂದು ರಾಜಯೋಗ ಆಗಿದೆ. ಇದರಿಂದ ನಿಮಗೆ ಹಣಕಾಸಿನ ಲಾಭ, ವಿದೇಶ ಪ್ರಯಾಣ ಮೊದಲಾದ ಶುಭಸಂಗತಿಗಳು ನಡೆಯುತ್ತದೆ.‌ ವೃತ್ತಿಕ್ಷೇತ್ರದಲ್ಲಿ ಒತ್ತಡವಿದ್ದರೂ ನಿಭಾಯಿಸಿಕೊಳ್ಳುವ ಶಕ್ತಿ ಬರುತ್ತದೆ. ಆದರೆ ಎಂಟನೇ ಮನೆಯಲ್ಲಿ ರಾಹು ಇರುವುದರಿಂದ ಆರೋಗ್ಯ ಸಮಸ್ಯೆ ಕಾಡುತ್ತದೆ. ಮನೆಯಲ್ಲಿ ಕಲಹ, ಪತ್ನಿ ಕಿರಿ ಕಿರಿ, ಅಧಿಕ ಖರ್ಚುವೆಚ್ಚಗಳಾಗುವುದು.

ಇದನ್ನೂ ಓದಿ:-CONGRESS ಸರ್ಕಾರದ ಗ್ಯಾರಂಟಿ EFFECT KARNATAK ದಲ್ಲಿ ಡೀಸೆಲ್ 3.5₹ ,ಪೆಟ್ರೋಲ್ ದರ 3₹ ಏರಿಕೆ!

ಕನ್ಯಾ ರಾಶಿ:- ಆರನೇ ಮನೆಯಲ್ಲಿ ಶನಿ,ಒಂಬತ್ತನೇ ಮನೆಯಲ್ಲಿ ಗುರು ಇದ್ದು ನೆಮ್ಮದಿ,ಆನಂದ ನೀಡುವುದು.ಭಾಗ್ಯಸ್ಥಾನದ ಹಾಗೂ ವೃತ್ತಿಸ್ಥಾನದ ಆಧಿಪತಿಗಳು ಹತ್ತನೇ ಮನೆಯಲ್ಲಿ ಇದ್ದಾರೆ. ಗುರು ಭಾಗ್ಯ ಸ್ಥಾನದಲ್ಲಿ ಇದ್ದಾನೆ. ವೃತ್ತಿಯಲ್ಲಿ ಯಶಸ್ಸು , ಪ್ರಶಂಸೆಗಳಿವೆ. ಉನ್ನತ ಪದವಿ ಅಧಿಕಾರ ಅವಕಾಶಗಳಿವೆ. ರಾಜಕೀಯ ನಾಯಕರಿಗೆ ಪ್ರಚಂಡ ಯಶಸ್ಸು ಇದೆ. ಅವಿವಾಹಿತರಿಗೆ ವಿವಾಹ ಕೂಡಿ ಬರುತ್ತದೆ. ಈ ವಾರ ಬಹುತೇಕ ಶುಭ ಫಲ ಇರಲಿದೆ.

ತುಲಾ ರಾಶಿ:- ಕಷ್ಟ ಸುಖದ ಮಿಶ್ರಣ ನಿಮ್ಮದಾಗಲಿದೆ.ಒಂಬತ್ತನೇ ಮನೆಯಲ್ಲಿ ಬುಧ ಶುಕ್ರ ಸೂರ್ಯ ಇದ್ದಾರೆ. ಆರನೇ ಮನೆಯಲ್ಲಿ ರಾಹು ಇವೆಲ್ಲವೂ ನಿಮಗೆ ಅದೃಷ್ಟ ಯಶಸ್ಸು ಕೊಡುತ್ತದೆ, ಚಿಂತೆಗಳು ಕಡಿಮೆಯಾಗುತ್ತದೆ.‌ ಬದುಕು ಯಶಸ್ಸಿನತ್ತ ನಡೆಯುತ್ತದೆ. ಧನಾಗಮನ ಚೆನ್ನಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಿದೆ.

ವೃಶ್ಚಿಕ ರಾಶಿ:- ಆರೋಗ್ಯ ಮಧ್ಯಮ,ಸಾಲತೀರಿಸುವಿರಿ, ಗುರುಬಲ ಇರುವುದರಿಂದ ಯಾವುದೇ ನೆಗೆಟಿವ್ ಸಂಗತಿಗಳು ನಿಮ್ಮನ್ನು ತಾಕುವುದಿಲ್ಲ. ಏನೇ ಗಂಡಾಂತರ ಬಂದರೂ ನಿಮ್ಮ ವರೆಗೆ ಬರುವುದರೊಳಗೆ ಮುರಿದುಬೀಳುತ್ತದೆ. ಬೆಟ್ಟದಹಾಗೆ ಬಂದ ಕಷ್ಟ ಮಂಜಿನ ಹಾಗೆ ಕರಗಿ ಹೋಗುತ್ತದೆ. ರಾಜಕೀಯ ನಾಯಕರು ಹಾಗೂ ವಿದ್ಯಾರ್ಥಿಗಳಿಗೆ ಶುಭವಿದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ವಾಹನದಿಂದ ನಷ್ಟ ಇದೆ.

ಧನಸ್ಸು :-ಗುರುಬಲ ಕಡಿಮೆಯಾಗಿದೆ ಹಾಗೂ ನಾಲ್ಕನೇ ಮನೆಯಲ್ಲಿ ರಾಹು‌ ಇದ್ದಾನೆ. ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆ, ಹಿಡಿದ ಕೆಲಸಗಳಿಗೆ ಅಡೆತಡೆ, ಮಹಿಳೆಯರಿಗೆ ಸಮಸ್ಯೆ, ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ. ಈ ವಾರ ಮಿಶ್ರ ಫಲ .

ಮಕರ ರಾಶಿ:- ಗುರುಬಲ ರಾಹುಬಲವಿದೆ . ಶುಭಕಾಲ ನಡೆಯುತ್ತಿದೆ. ನಿಮ್ಮ ರಾಶಿಯಲ್ಲಿ ಇರುವ ಶನಿ‌ ಮುಂದಿನ ರಾಶಿಗೆ ಇನ್ನು ಕೆಲವೇ ದಿನದಲ್ಲಿ ಸಂಚರಿಸಲಿದ್ದು ಬದಲಾವಣೆ ಇದೆ. ಅಲ್ಪ ಕಷ್ಟಗಳು ಎದುರಾಗಲಿದೆ, ಹಣಕಾಸು ಏರಿಳಿತ,ಅಧಿಕ ಕರ್ಚು ಇರಲಿದೆ.

ಕುಂಭ ರಾಶಿ:- ನಿಮ್ಮ ರಾಶಿಗೆ ಕಂಟಕಗಳು ಅಡೆತಡೆಗಳು ಎದುರಾಗುತ್ತದೆ, ಹೆಜ್ಜೆಹೆಜ್ಜೆಗೂ ಎಚ್ಚರಿಕೆ ವಹಿಸಿ.‌ ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ, ವಕೀಲರಿಗೆ ಶುಭ, ಕೃಷಿಕರಿಗೆ ಉತ್ತಮವಾಗಿರದು,ಈ ವಾರ ಮಿಶ್ರ ಫಲ ಇರುವುದು.

ಮೀನ ರಾಶಿ:-ಆರೋಗ್ಯದ ಬಗ್ಗೆ ಎಚ್ಚರ ಇರಲಿ, ನೀವು ಅಂದುಕೊಂಡ ಘಟನೆಗಿಂತ ವ್ಯತಿರಿಕ್ತವಾಗಿ ನಡೆಯುವ ಸಂದರ್ಭ ಇದೆ. ಖರ್ಚುಗಳು ವಿಪರೀತವಾಗಿ ಇರುತ್ತದೆ. ಆದಷ್ಟು ತಾಳ್ಮೆಯಿಂದ ಕಾರ್ಯ ಸಿದ್ದಿಸಿಕೊಳ್ಳಿ, ಕುಟುಂಬದಿಂದ ಮನಸ್ಸಿಗೆ ನೋವು ಕಿರಿಕಿರಿ ಆಗಬಹುದು,ಅಧಿಕ ಕರ್ಚು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!