Karnataka government Petrol diesel tax increase

CONGRESS ಸರ್ಕಾರದ ಗ್ಯಾರಂಟಿ EFFECT KARNATAK ದಲ್ಲಿ ಡೀಸೆಲ್ 3.5₹ ,ಪೆಟ್ರೋಲ್ ದರ 3₹ ಏರಿಕೆ!

76

ರಾಜ್ಯ ಸರ್ಕಾರ ಪೆಟ್ರೋಲ್ ( petrol) ಡೀಸೆಲ್ ( diesel) ಮೇಲಿನ ತೆರಿಗೆ ದರ ಹೆಚ್ಚಿಸಿ ಗೆಜೆಟ್ ಸೂಚನೆಯನ್ನು ಪ್ರಕಟಿಸಿದೆ.

ಈ ಹಿಂದೆ ಟ್ಯಾಕ್ಸ್ (Tax) ದರ ಪೆಟ್ರೋಲ್ -25.92 ದರವು ಇದೀಗ 29.84 % ಗೆ ಏರಿಕೆ ಆಗಿದೆ.ಡಿಸೇಲ್ ದರವು ಈ ಹಿಂದೆ 14.34 ಇರುವುದು ಈಗ 18.44 % ಏರಿಕೆ ಮಾಡಿದೆ . ಇದರಿಂದ ಪೆಟ್ರೋಲ್ – 3.9% ,ಡಿಸೇಲ್ -4.1 % ಏರಿಕೆ ಕಂಡಿದೆ.

ಸದ್ಯ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಗೆ 99.84 ರೂ ಇದ್ದು ದರ ಹೆಚ್ಚಳದಿಂದ ಪೆಟ್ರೋಲ್ 102.84 ರೂ ಆಗಲಿದೆ. ಇನ್ನು ಡಿಸೇಲ್ 85.93 ರೂ ಇದ್ದು ಇದಾಇಗ 89.43 ರೂ ದರ ಏರಿಕೆ ಕಾಣಲಿದೆ‌.

ಇದನ್ನೂ ಓದಿ:- ಕಾರವಾರದಲ್ಲಿ ನಟ ದರ್ಶನ್ ಬಾವ ಮಂಜುನಾಥ್ ಡಿ ಬಾಸ್ ಬಗ್ಗೆ ಹೇಳಿದ್ದೇನು?

ಇನ್ನು ಸಾಗಾಟಕ್ಕನುಗುಣವಾಗಿ ದರ ಸಹ ಇತರೆ ಜಿಲ್ಲಾ ಭಾಗದಲ್ಲಿ ದರ ಇನ್ನೂ ಹೆಚ್ಚಿಗೆ ಆಗಲಿದೆ.

ಇನ್ನು ಚಿಲ್ಲರೆ ಮಾರಾಟ ದರವೂ ಏರಿಕೆ ಕಾಣುವುದರಿಂದ ಪೆಟ್ರೋಲ್ 3 ರೂ, ಡೀಸೆಲ್‌ 3.50 ರೂ ಹೆಚ್ಚಳವಾಗುವ ಸಾಧ್ಯತೆ ಇದೆ.

ಇನ್ನು ಪೆಟ್ರೋಲ್ ,ಡಿಸೇಲ್ ದರ ಏರಿಕೆಯಿಂದ ವಸ್ತುಗಳ ಬೆಲೆಯೂ ಏರಿಕೆ ಕಾಣುವ ಜೊತೆಗೆ ಖಾಸಗಿ ಬಸ್ ದರ ,ಬಾಡಿಗೆ ವಾಹನ ದರ ಸಹ ಹೆಚ್ಚಾಗಲಿದ್ದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಸೈಡ್ ಎಫೆಕ್ಟ್ ಇಡೀ ಕರ್ನಾಟಕದ ಜನರ ಜೇಬಿಗೆ ಕತ್ತರಿ ಹಾಕಲಿದೆ.

ಪುಕ್ಕಟೆ ಸಿಕ್ಕಿತು ಎಂದು ಬೀಗುವವರಿಗೆ ಅವರಿಂದಲೇ ಗ್ಯಾರಂಟಿಯ ಹಣ ವಸೂಲಿಗೆ ಸರ್ಕಾರ ಕೈ ಹಾಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!