Uttara Kannada district news Gokarna Mahabaleshwar Temple controversy

ಗೋಕರ್ಣ ನಂದಿ ಮಂಟಪದಲ್ಲಿ ತೀರ್ಥ ನೀಡುವ ಹಕ್ಕು ಯಾರಿಗೆ? ಆಡಳಿತಾಧಿಕಾರಿ ಹೇಳಿದ್ದೇನು?

130
Gilani wholesale market Karwar Uttara Kannada district
ಸುದ್ದಿ ಓದಲು ಫೋಟೋದ ಮೇಲೆ ಕ್ಲಿಕ್ ಮಾಡಿ.

ಕಾರವಾರ:- ಉತ್ತರ ಕನ್ನಡ (uttra Kannada) ಜಿಲ್ಲೆಯ ಗೋಕರ್ಣದ ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನ( gokarna mahabaleshwara temple) ದಲ್ಲಿ ನಂದಿ ಮಂಟಪದಲ್ಲಿ ತೀರ್ಥ ನೀಡುವ ಹಕ್ಕಿಗಾಗಿ ಮೇ 9 ರಂದು ಗೋಕರ್ಣದ ಜಂಬೆ ಹಾಗೂ ಗೋಪ ಮನೆತನದ ನಡುವೆ ದೇವಸ್ಥಾನ ದಲ್ಲೇ ಗಲಾಟೆಗೆ ಕಾರಣವಾಗಿತ್ತು.

ಈ ವಿಚಾರವಾಗಿ ಏಳು ದಿನದ ಕಾಲಾವಕಾಶ ನೀಡುವಂತೆ ಆಡಳಿತ ಮಂಡಳಿ ಕೇಳಿಕೊಂಡಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಜಿಲ್ಲಾಧಿಕಾರಿ (district collector ) ಗಂಗೂಬಾಯಿ ಮಾನಕರ್ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಬಿ.ಎನ್ ಕೃಷ್ಣ ನೇತ್ರತ್ವದಲ್ಲಿ ಆಡಳಿತ ಸಮಿತಿ ಸಭೆ ನಡೆದಿತ್ತು.

ಇದನ್ನೂ ಓದಿ:-

ಎರಡೂ ಕುಟುಂಬದ ಅಹವಾಲನ್ನು ಆಲಿಸಿದ್ದ ಬಿ.ಎನ್ ಕೃಷ್ಣಾ ರವರು ಗೋಪಿ ಕುಟುಂಬಕ್ಕೂ ಕೂಡ ಅವಕಾಶ ನೀಡುವಂತೆ ಈ ಮೇಲ್ ಮಾಡುವ ಮೂಲಕ ಸೂಚಿಸಿದ್ದರು.

ಆದರೇ ಈ ವಿಚಾರ ನ್ಯಾಯಾಲಯದಲ್ಲಿ (court) ಇರುವುದರಿಂದ ಕಾನೂನು ಸುವ್ಯವಸ್ಥೆ ಗೆ ದಕ್ಕೆ ಬರುವ ಸಾಧ್ಯತೆ ಹಿನ್ನಲೆಯಲ್ಲಿ ಗೋಪಿ ಕುಟುಂಬಕ್ಕೆ ಅವಕಾಶ ನೀಡಿರುವಯದನ್ನು ಹಿಂಪಡೆಯಲಾಗಿತ್ತು.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಆಡಳಿತ ಸಮಿತಿ ಸದಸ್ಯರು ಹಾಗೂ ಜಿಲ್ಲಾಧಿಕಾರಿಯಾಗಿರುವ ಗಂಗೂಬಾಯಿ ಮಾನಕರ್ ರವರು ನ್ಯಾಯಾಲಯದಲ್ಲಿ ತೀರ್ಪು ಬರುವ ವರೆಗೆ ಹಿಂದಿನಂತೆ ಜಂಬೆ ಮನೆತನವು ನಂದಿ ಮಂಟಪದಲ್ಲಿ ತೀರ್ಥ ನೀಡುವ ಕಾರ್ಯ ಮುಂದುವರೆಸುವಂತೆ ಸೂಚನೆ ನೀಡಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!