ಕಾರವಾರ:- ಲೋಕಸಭಾ ಚುನಾವಣೆ ಬೆನ್ನಲ್ಲೇ ಐಟಿ ಅಧಿಕಾರಿಗಳು (IT officers) ಶಿರಸಿಯ ಕಾಂಗ್ರೆಸ್ ಮುಖಂಡ ದೀಪಕ್ ದೊಡ್ಡೂರು ಸೇರಿದಂತೆ ಅವರೊಂದಿಗೆ ವ್ಯವಹರಿಸಿದ ಐದಕ್ಕೂ ಹೆಚ್ಚು ಜನರ ಮನೆಯ ಮೇಲೆಐಟಿ ದಾಳಿ ನಡೆಸಿತ್ತು. ಶಿರಸಿಯ TSS ಸಂಸ್ಥೆಯ ಅವ್ಯವಹಾರ ಕುರತು ದೂರು ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿತ್ತು. ಆದ್ರೆ ಇದೀಗ ಶನಿವಾರ ಶಿರಸಿಯ ಮೂರು ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಮಾಹಿತಿ ಕಲೆಹಾಕುತಿದ್ದಾರೆ.
ಇದನ್ನೂ ಓದಿ:-Sirsi|ಕಾಂಗ್ರೆಸ್ ಮುಖಂಡರ ಮನೆ ಮೇಲೆ IT ದಾಳಿ
ಶಿರಸಿಯ (sirsi) ರಾಜದೀಪ ಫೈನಾನ್ಸ್, ಮಾರಿಕಾಂಬಾ ಮಹಿಳಾ ಸೌಹಾರ್ದ ಸಹಕಾರಿ ಹಾಗೂ ವಿಜಯಲಕ್ಷ್ಮೀ ಸೌಹಾರ್ದ ಸಹಕಾರಿ ಮೇಲೆ ಐಟಿ ದಾಳಿ ನಡೆಸಿದೆ.
ಖ್ಯಾತ ಉದ್ಯಮಿ, ಕಾಂಗ್ರೆಸ್ ಮುಖಂಡ ದೀಪಕ್ ದೊಡ್ಡೂರು ಮಾಲಕತ್ವದ ರಾಜದೀಪ್ ಟ್ರಸ್ಟ್, ಎಂ.ವಿ.ಜೋಶಿ ಕಾಗೇರಿ ಮಾಲಕತ್ವದ ವಿಜಯಲಕ್ಷ್ಮೀ ಸೌಹಾರ್ದ ಸಹಕಾರಿ ಹಾಗೂ ಅವರ ಪತ್ನಿ ಮಾಲಕತ್ವದ ಮಾರಿಕಾಂಬಾ ಮಹಿಳಾ ಸೌಹಾರ್ದ ಸಹಕಾರಿ ಸಂಘದ ಮೇಲೆ ಈ ದಾಳಿ ನಡೆದಿದೆ.
ಕೆಲವು ದಿನಗಳ ಹಿಂದೆಯಷ್ಟೇ ಐಟಿ ಅಧಿಕಾರಿಗಳು ದೀಪಕ್ ದೊಡ್ಡೂರು ಸೇರಿದಂತೆ ಆರು ಜನರ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದರು. ಶಿರಸಿಯ ಟಿಎಸ್ಎಸ್ನಲ್ಲಿ ನಡೆದಿದ್ದ ಕೋಟಿಗಟ್ಟಲೆ ಅವ್ಯವಹಾರ ಸಂಬಂಧಿಸಿ ಹಿಂದೆ ಐಟಿ ದಾಳಿ ಮಾಡಿತ್ತುಮಾಡಲಾಗಿತ್ತು .
ಈ ವೇಳೆ ಟಿಎಸ್ಎಸ್ನ ಮಾಜಿ ಎಂಡಿ ರವೀಶ್ ಹೆಗಡೆ, ಆಪ್ತರಾದ ದೀಪಕ್ ದೊಡ್ಡೂರು, ಶಿವರಾಮ ಹೆಗಡೆ, ಅನಿಲ್ ಮುಷ್ಟಗಿ, ಪ್ರವೀಣ ಮಹಾಬಲೇಶ್ವರ ಹೆಗಡೆ, ಶ್ರೀಪಾದ ರಾಮಕೃಷ್ಣ ಹೆಗಡೆ ಅವರ ಮನೆ, ಕಚೇರಿಗಳ ಮೇಲೆ ದಾಳಿಯಾಗಿತ್ತು .ಆ ಸಮಯದಲ್ಲಿ ಯಾರ ಮನೆಯಲ್ಲಿಯೂ ಯಾವುದೇ ಗುರುತರವಾದ ದಾಖಲೆ, ಅಕ್ರಮ ಹಣ ಸಿಕ್ಕಿರಲಿಲ್ಲ.
ಇದೀಗ ಮತ್ತೆ ಟಿಎಸ್ಎಸ್ ಅಕ್ರಮ ಸಂಬಂಧಿಸಿ ಫೈನಾನ್ಸ್ ಹಾಗೂ ಸೌಹಾರ್ದ ಸಹಕಾರಿಗಳ ಮೇಲೆ ಐಟಿ ದಾಳಿ ಮುಂದುವರೆಸಿದೆ.
ಇದನ್ನೂ ಓದಿ:-TSS ಸಂಘಕ್ಕೆ ಆಡಳಿತಾಧಿಕಾರಿ ನೇಮಕದಲ್ಲಿ ಕರ್ತವ್ಯ ಲೋಪ| ಉಪ ನಿಬಂಧಕ ಅಮಾನತ್ತು.
ಎರಡು ವರ್ಷಗಳ ಹಿಂದೆ ಪ್ರಾರಂಭವಾದ ದೀಪಕ್ ದೊಡ್ಡೂರು ಫೈನಾನ್ಸ್ ಮೇಲೆ ಐಟಿ ದಾಳಿ ನಡೆಸಿ ಮಾಹಿತಿ ಕಲೆಹಾಕಿದೆ. ಇನ್ನು ದೀಪಕ್ ದೊಡ್ಡೂರು ಅವರ ಜತೆ ವ್ಯವಹಾರ ನಡೆಸಿರುವ ಹಿನ್ನೆಲೆ ಎಂ.ವಿ.ಜೋಶಿ ಕುಟುಂಬದ ಸೌಹಾರ್ದ ಸಹಕಾರಿಗಳ ಮೇಲೆ ಐಟಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯನ್ನು ಮುಂದುವರಿಸಿದೆ.






