King Cobra rescue

Kumta ತೋಟದಲ್ಲಿ ಸಿಕ್ತು 13 ಅಡಿ ಉದ್ದದ ಆರು ಕೆಜಿ ತೂಕದ ಕಾಳಿಂಗ

294

ಕಾರವಾರ :- ಆಹಾರ(food) ಅರಸಿ ಊರಿನತ್ತ ಬಂದ 13 ಅಡಿ ಉದ್ದದ ಆರು ಕೆಜಿ ತೂಕದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ(kumta) ತಾಲೂಕಿನ ಮುರೂರಿನಲ್ಲಿ ನಡೆದಿದೆ. ಮುರೂರಿನ ರಾಮಕೃಷ್ಣ ಹೆಗಡೆ ಎಂಬುವವರ ಮನೆಯ ತೋಟದಲ್ಲಿ ಕಾಣಿಸಿಕೊಂಡ ಈ ಬೃಹತ್ ಕಾಳಿಂಗವನ್ನು ಉರುಗ ಪ್ರೇಮಿ ಪವನ್ ನಾಯಕ್ ರವರು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಉರುಗ ಪ್ರೇಮಿ ಪವನ್ ನಾಯ್ಕ ಹೇಳೋದೇನು?

ಮುರೂರು ಪರಿಸರ ಕಾಳಿಂಗ ಸರ್ಪದ ವಾಸಕ್ಕೆ ಯೋಗ್ಯವಿಲ್ಲ. ಅಷ್ಟೊಂದು ಬೆಟ್ಟವು ಅಲ್ಲಿಲ್ಲ. ಕಾಳಿಂಗಕ್ಕೆ ಬೇಕಾದಷ್ಟು ತಂಪು ಇಲ್ಲ. 2020 ರಲ್ಲಿ ಒಮ್ಮೆ ಕಾಳಿಂಗ ಸರ್ಪವು ಮೂರೂರಲ್ಲಿ ಕಂಡಿತ್ತು.

ಕಾಳಿಂಗ ಸರ್ಪವು ಸುಮಾರು 10 km ಗಳ ದೂರದವರೆಗೂ ತನ್ನ ವ್ಯಾಪ್ತಿಯನ್ನು ಹೊಂದಿರುತ್ತದೆ. ಹೀಗಿರುವುದರಿಂದ ಆಹಾರಾಣ್ವೇಷಣೆಯಲ್ಲಿ ತೊಡಗಿದಾಗ ಕಾಡಂಚಿನ ಪ್ರದೇಶದ ಊರಿಗೆ ಪ್ರವೇಶ ಮಾಡುತ್ತದೆ. ಕಾಳಿಂಗ ಸರ್ಪ ( King Cobra) ಇಲ್ಲದ ಈ ಊರಿಗೆ ಕಾಳಿಂಗ ಬಂದರೆ ಮತ್ತೆ ಎಷ್ಟು ಹಾವು ಇದೆಯೇನೋ ಎಂದು ಜನರು ಭಯಬೀತರಾಗುವುದು ಸಹಜ. ಒಂದು ವೇಳೆ ಬೇರೆ ಹಾವು ಇದ್ದರೂ ಇಲ್ಲಿಯ ವಾತಾವರಣ ಸರಿಹೊಂದದೇ ಮತ್ತೆ ಕಾಡಿಗೆ ಪ್ರಯಾಣ ಬೆಳೆಸುತ್ತದೆ. ಹೀಗಾಗಿ ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!