Honnavara 144 section

ದಿಢೀರ್ ಅಂತ ಹೊನ್ನಾವರ ದಲ್ಲಿ 144 section ಜಾರಿ ಯಾಕೆ? ವಿವರ ನೋಡಿ.

333

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೋಡ(kasarakodu) ಟೊಂಕಾ ಬಂದರು(port) ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಮಾಡಿ ಜಿಲ್ಲಾ ದಂಡಾಧಿಕಾರಿ ಗಂಗೂಬಾಯಿ ಮಾನಕರ್ ಆದೇಶ ನೀಡಿದ್ದಾರೆ.

ಖಾಸಗಿ ಬಂದರು ಕಾಮಗಾರಿಗೆ ಸ್ಥಳೀಯ ಮೀನುಗಾರರು (fisherman) ತಡೆಯೊಡ್ಡಿದ ಹಿನ್ನಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಳಿಸಿದೆ.

ಬಂದರು ಕಾಮಗಾರಿಗೆ ಬಂದ ಕಾರ್ಮಿಕರ (labour )ಮೇಲೆ ಕಲ್ಲು ತೂರಾಟ ಮಾಡಿ ಕೆಲಸ ಗಾರರಿಗೆ ಅಡ್ಡಿ ಪಡಿಸಿ ಜೀವ ಬೆದರಿಕೆ ಹಾಕಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಆದೇಶ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಕಳೆದ ಮೂರು ವರ್ಷದಿಂದ ಖಾಸಗಿ ಬಂದರು ಕಾಮಗಾರಿ ನಡೆಸದಂತೆ ಪ್ರತಿಭಟನೆ ನಡೆಸುತ್ತಿರುವ ಸ್ಥಳೀಯ ಮೀನುಗಾರರು ,ಪೊಲೀಸರಿಂದ ಏಟು ತಿಂದು ಜೈಲುವಾಸ ಸಹ ಅನುಭವಿಸಿದ್ದರು.
ಡೊಂಕಾದಲ್ಲಿ ಅವೈಜ್ಞಾನಿಕ ಖಾಸಗಿ ಬಂದರು ಕಾಮಗಾರಿ ನಡೆಸಬಾರದು ಎಂದು ಸ್ಥಳೀಯ ಮೀನುಗಾರರು ಹೋರಾಟ ನಿರಂತರ ನಡೆಯುತ್ತಲೇ ಇದೆ. ಈ ಭಾಗದಲ್ಲಿ ಆಮೆಗಳು ಮೊಟ್ಟೆ ಇಟ್ಟು ಮರಿಮಾಡುತ್ತವೆ , ಆಮೆಗಳ ಮೊಟ್ಟೆ ಇಡುವ ಸ್ಥಳವಾಗಿದೆ.

ಇದಲ್ಲದೇ ಸಂಪ್ರದಾಯಿಕ ಮೀನುಗಾರರು ಇಲ್ಲಿ ಜೀವನ ಕಂಡುಕೊಂಡಿದ್ದು ಒಕ್ಕಲೆಬ್ಬಿಸಿ ಖಾಸಗಿಯವರಿಗೆ ನೀಡಿರುವುದು ಸರಿಯಲ್ಲಾ ಎಂದು ನಿರಂತರ ಹೋರಾಟ ನಡೆಸಿಕೊಂಡು ಬರುತಿದ್ದಾರೆ. ಆದರೇ ಹಲವು ಸುತ್ತಿನ ಸಂದಾನ ಮಾತುಕತೆ ನಂತರ ಇದೀಗ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದ್ದು ಇದರ ಮುಂದುವರೆದ ಭಾಗವಾಗಿ 144 ಸೆಕ್ಷನ್ ನನ್ನು ಮಾರ್ಚ 29 ರಿಂದ ಎಪ್ರಿಲ್ 5 ರ ವರೆಗೆ ಜಾರಿ ಮಾಡಲಾಗಿದ್ದು ಡೊಂಕಾ ಬಂದರು ಬಳಿ ಬಿಗಿ ಪೊಲೀಸ್ ಬಂದವಸ್ತ್ ಕಲ್ಪಿಸಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!