Chakravarti sulibele MP ticket uttra Kannada

ಉತ್ತರ ಕನ್ನಡ ಬಿಜೆಪಿ ಟಿಕೆಟ್ ಬಗ್ಗೆ ಸೂಲಿಬೆಲೆ ಏನಂದ್ರು?

219

ಪುತ್ತೂರು, ಮಾರ್ಚ14:- ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಯಿಂದ ಅನಂತಕುಮಾರ್ ಹೆಗಡೆಗೆ ಟಿಕೆಟ್ ನೀಡಲು ಕೇಂದ್ರ ನಾಯಕರು ಯೋಚಿಸುತಿದ್ದು ಹೊಸ ವ್ಯಕ್ತಿಗಳಿಗೆ ನೀಡುವ ಪ್ರಸ್ತಾಪ ಮಾಡಿರುವ ಬಗ್ಗೆ ಮಾಹಿತಿ ಹೊರಬಂದಿದೆ.

ಇನ್ನು ಅನಂತಕುಮಾರ್ ಹೆಗಡೆ ಸ್ಥಾನಕ್ಕೆ ಸಮರ್ಥರನ್ನು ಆಯ್ಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi) ರವರೇ ಅಂತಿಮ ನಿರ್ಧಾರ ಹೇಳಲಿದ್ದಾರೆ.

ಹೀಗಾಗಿ ಎರಡನೇ ಸುತ್ತಿನ ಅಭ್ಯರ್ಥಿ ಪಟ್ಟಿ ಬಿಡುಗಡೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಪ್ರಕಟಿಸದೇ ತಡೆಯಲಾಗಿತ್ತು.

ಮೂಲಗಳ ಪ್ರಕಾರ ರಾಮಮಂದಿರ ನಿರ್ಮಾಣದ ಜವಬ್ದಾರಿ ಹೊತ್ತ ಗೋಪಾಲ್ ಭಟ್ ರವರ ಹೆಸರು ಕೇಳಿಬಂದರೂ ,ಅವರ ಸ್ಥಾನ ,ಹುದ್ದೆಗೆ ಮತ್ತು ಕಾರ್ಯಕ್ಕೆ ಸ್ಪರ್ಧಿಸಲು ಒಪ್ಪುವ ಸಾಧ್ಯತೆ ಕಡಿಮೆ ಇದ್ದು ಇದೀಗ ಚಕ್ರವರ್ತಿ ಸೂಲಿಬೆಲೆ ಹೆಸರು ಸೇರಿಕೊಂಡಿದೆ.

ಹಿಂದಿನ ಚುನಾವಣೆಯಲ್ಲೇ ಚಕ್ರವರ್ತಿ ಸೂಲಿಬೆಲೆ ( Chakravarti Sulibele) ಹೆಸರು ಕೇಳಿಬರುತ್ತಿದ್ದರಾದರೂ ಇದೀಗ ಸೂಲಿಬೆಲೆಯೇ ಅವಕಾಶ ದೊರೆತರೆ ಒಪ್ಪುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಪುತ್ತೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ರಾಜಕೀಯ ಆಸಕ್ತಿಯ ಪ್ರಶ್ನೆ ಬೇರೆ ,ರಾಜಕೀಯದಲ್ಲಿ ಈ ಬಾರಿ ಆಲೋಚನೆ ಬಂತು ಅಂದರೇ ನಾನು ಅದರಲ್ಲಿ ವಿರೋಧ ಎನ್ನುವಂತದ್ದು ಇಲ್ಲ, ನಾನು ಕಳೆದ ಹತ್ತು ವರ್ಷದಿಂದ ಕಾಪಾಡಿಕೊಂಡು ಬಂದಿದ್ದೆನೋ ಈ ವರ್ಷ ಅಕಸ್ಮಾತ್ ಅವಕಾಶ ಬಂದರೇ ನಾನು ಅದನ್ನು ಸಡಿಲ ಮಾಡಿಕೊಳ್ಳುತ್ತೇನೆ. ನಾನಾಗಿಯೇ ಕೇಳಿಕೊಂಡು ಹೋಗುವ ಪ್ರಶ್ನೆ ಇಲ್ಲ, ಏನಾದ್ರು ಆಗಬೇಕು ಎಂದು ಭಗವಂತನ ಇಚ್ಚೆ ಇದ್ದರೇ ಖಂಡಿತವಾಗಿಯೂ ಆಗಬಹುದು ಎಂದಿದ್ದು ಈವರೆಗೂ ನಾನು ಸಹ ಕೇಳಿಲ್ಲ,ಅವರು ಸಹ ಕೇಳಿಲ್ಲ ಎಂದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!