Gopal nagarakatti RSS leader

ಅನಂತಕುಮಾರ್ ಹೆಗಡೆ ಬದಲು ತೇಲಿಬಂತು ಗೋಪಾಲ್ ಭಟ್ ಹೆಸರು! ಯಾರಿವರು? ಇವರ ಸಾಮರ್ಥ್ಯ ಏನು ಗೊತ್ತಾ?

252

ಕಾರವಾರ, ಮಾರ್ಚ್ 12:-ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ( Uttara Kannada district Lok Sabha constituency) ದಲ್ಲಿ ಆರು ಬಾರಿ ಗೆದ್ದ ಅನಂತಕುಮಾರ್ ಹೆಗಡೆ ಈ ಭಾರಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿ ಮೊದಲ ಸುತ್ತಿನ ಕಾರ್ಯಕರ್ತರ ಭೇಟಿ ಮಾಡಿದ್ದಾರೆ. ತಾನು ಅಭ್ಯರ್ಥಿ ಎಂದು ಹೇಳದೇ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಎಂದೇ ಕಾರ್ಯಕರ್ತರ ಬಳಿ ಕೇಳಿಕೊಳ್ಳುತ್ತಾ ಬಂದಿದ್ದಾರೆ.

ಹೀಗಿರುವಾಗ ದೆಹಲಿ ಮಟ್ಟದಲ್ಲಿ ಅನಂತ ಕುಮಾರ್ ಹೆಗಡೆ, ಹರಿಪ್ರಕಾಶ್ ಕೋಣೇಮನೆ ಹೆಸರು ದೆಹಲಿ ನಾಯಕರ ಕೈಸೇರಿತ್ತು. ಆದರೇ ಇದರ ಜೊತೆ ಚಕ್ರವರ್ತಿ ಸೂಲಿಬೆಲೆ ( Chakravarthy sulibele) ,
ಗೋಪಾಲ್‌ ನಾಗರಕಟ್ಟೆ ರವರ ಹೆಸರು ಸಹ ತಳಕು ಹಾಕಿಕೊಂಡಿದೆ.

ಆದ್ರೆ ದೆಹಲಿ ಮೂಲದ ಪ್ರಕಾರ ಅನಂತಕುಮಾರ್ ಹೆಗಡೆಗೆ ಟಿಕೆಟ್ ಕೊಡದಿದ್ದರೇ ಪಕ್ಷದ ಅಭ್ಯರ್ಥಿ ಸೋಲಿಸುವಷ್ಟು ಸಾಮರ್ಥ್ಯ ಹೆಗಡೆಗೆ ಇದೆ‌ಇದಲ್ಲದೇ ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಅಂತರದ ಮತ ಪಡೆದ ಹೆಗಡೆಯನ್ನು ಕಡೆಗಾಣಿಸುವುದು ಅಷ್ಟು ಸುಲಭವಲ್ಲ‌ . ಇನ್ನು ಹೆಗಡೆ ಹೇಳಿಕೆ, ನಡವಳಿಕೆಗಳಿಂದ ಪಕ್ಷ ಮುಜುಗರದ ಜೊತೆ ಅಸಮಧಾನ ಕ್ಕೆ ಸಹ ಒಳಗಾಗಿದೆ.
ಹೀಗಾಗಿ ಬದಲಿ ಪ್ರಭಾವಿ ಹಿಂದೂ ಕಾರ್ಯಕರ್ತರೊಬ್ಬರನ್ನು ನಿಲ್ಲಿಸುವ ಯೋಚನೆ ಪಕ್ಷದ್ದು . ಹೀಗಾಗಿ ಇದೀಗ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣದ ಹೊಣೆ ಹೊತ್ತು ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಉತ್ತರ ಕನ್ನಡ ಜಿಲ್ಲೆಯವರೇ ಆದ ಶಿರಸಿ ಹತ್ತಿರದ ನಾಗರಕಟ್ಟೆಯವರಾದ ಹಿರಿಯ ಸಂಘ ಪ್ರಚಾರಕ ಗೋಪಾಲ್‌ ನಾಗರಕಟ್ಟೆಅವರನ್ನು ಅಭ್ಯರ್ಥಿ ಮಾಡುವ ಕುರಿತು ಯೋಚಿಸುತ್ತಿದೆ.

ಒಂದುವೇಳೆ ಇವರಿಗೆ ಟಿಕೆಟ್ ನೀಡಿದರೇ ಹಿಂದುತ್ವವೇ ಮತವಾಗಿ ಬಿಜೆಪಿ ಯನ್ನು ಗೆಲ್ಲಿಸುತ್ತಾ ಬಂದಿರುವ ಉತ್ತರ ಕನ್ನಡ ಜಿಲ್ಲೆಯ ಕ್ಷೇತ್ರ ಮತ್ತೆ ಬಿಜೆಪಿ ತೆಕ್ಕೆಗೆ ಬರುವುದಲ್ಲದೇ ,ಹೆಗಡೆ ಅಸಮಧಾನ ವನ್ನು ಸಹ ದಹಿಸುವುದು ಸುಲಭ, ಇವರನ್ನು ಅಭ್ಯರ್ಥಿ ಮಾಡಿದರೇ ಹೆಗಡೆ ಸಹ ತಟಸ್ಥವಾಗುತ್ತಾರೆ. ಹೀಗಾಗಿ ಕೇಂದ್ರ ಬಿಜೆಪಿ (Bjp ) ಇವರ ಹೆಸರನ್ನು ಇದೀಗ ಪಟ್ಟಿಯಲ್ಲಿ ಸೇರಿಸಿಕೊಂಡಿದೆ. ಆದ್ರೆ ಸನ್ಯಾಸಿಯಂತೆ ಎಲ್ಲವನ್ನೂ ತ್ಯಜಿಸಿ ಸಾಮಾನ್ಯರಿಗಿಂತ ಸಾಮಾನ್ಯನಾಗಿ ಬದುಕುತ್ತಿರುವ ಗೋಪಾಲ್‌ ನಾಗರಕಟ್ಟೆರವರು ಈವರೆಗೂ ಚುನಾವಣೆ ಸ್ಪರ್ಧೆ ಮಾಡಲು ಸಮ್ಮತಿ ನೀಡಿಲ್ಲ ಎನ್ನಲಾಗಿದೆ.


ಶಿರಸಿ -ಸಿದ್ದಾಪುರ ಗಡಿಯ ನಾಗರಕಟ್ಟೆಯವರಾದ ಹಿರಿಯ ಸಂಘ ಪ್ರಚಾರಕ ಗೋಪಾಲ್‌ ನಾಗರಕಟ್ಟೆ RSS ನಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದವರು.
ವಿಶ್ವ ಹಿಂದೂ ಪರಿಷತ್ತಿನ ನ್ಯಾಷನಲ್ ಸೆಕ್ರೆಟರಿ .

RSS ನ ಹಲವು ಹುದ್ದೆ ಅಲಂಕರಿಸಿ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಕಾಯಕ ಯೋಗಿ.
ಸರಳತೆ,ಅಹಂಕಾರ ರಹಿತ ವ್ಯಕ್ತಿತ್ವದ ವ್ಯಕ್ತಿ.

ಗೋಪಾಲ್‌ ಅವರು ಸ್ನಾತಕೋತ್ತರ ಪದವಿಯಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಚಿನ್ನದ ಪದಕ ವಿಜೇತರು. ಅಮೆರಿಕದಲ್ಲಿ ಕೆಲಸ, ಹಣ ಕೈ ಬೀಸಿ ಕರೆದರೂ ಸಂಘದ ಕಾರ್ಯಕ್ಕಾಗಿ 1984ರಲ್ಲಿ ಮನೆ ಬಿಟ್ಟು ಬಂದು ಆರ್‌ಎಸ್‌ಎಸ್‌ ಪ್ರಚಾರಕರಾದರು. ವಿಜಯಪುರ, ಕಲಬುರಗಿಗಳಲ್ಲಿ ವಿಭಾಗ ಪ್ರಚಾರಕರಾದ ನಂತರ ಉತ್ತರ ಕರ್ನಾಟಕಕ್ಕೆ ಸಂಘದ ಪ್ರಾಂತ ಪ್ರಚಾರಕರಾಗಿದ್ದರು. ಆದರೆ ಪ್ರವೀಣ್‌ ಭಾಯಿ ತೊಗಾಡಿಯಾ ವಿಶ್ವ ಹಿಂದೂ ಪರಿಷತ್ತು ಬಿಟ್ಟನಂತರ ಗುಜರಾತ್‌ ಮತ್ತು ರಾಜಸ್ಥಾನಕ್ಕೆ ವಿಶ್ವ ಹಿಂದೂ ಪರಿಷತ್ತಿನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಜೈಪುರಕ್ಕೆ ನಿಯುಕ್ತಿಗೊಂಡಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!