BREAKING NEWS
Search

BJP|ಉತ್ತರ ಕನ್ನಡ ಜಿಲ್ಲೆಗೆ ಬ್ರಾಹ್ಮಣ ಅಭ್ಯಾರ್ಥಿಯೇ ಪೈನಲ್ ! ಏನಿದೆ ಒಳನೋಟ?

105

ದೆಹಲಿ,ಮಾರ್ಚ ,07:- ಲೋಕಸಭಾ ಚುನಾಣೆಯ (Loksabha election )ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ ನಾಳೆ ಸಂಜೆಯೊಳಗಾಗಿ ಎರಡನೇ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಬುಧವಾರ ದೆಹಲಿಯ( Delhi) ಬಿಜೆಪಿ ಕಚೇರಿಯಲ್ಲಿ ಕರ್ನಾಟಕದ 28 ಕ್ಷೇತ್ರಗಳ ಬಗ್ಗೆ ಪಕ್ಷದ ವರಿಷ್ಟರು ಚರ್ಚೆ ನಡೆಸಿದ್ದಾರೆ. ಈ ಭಾರಿ ಉತ್ತರ ಕನ್ನಡ ಜಿಲ್ಲೆಗೆ ಯಾರು ಅಭ್ಯರ್ಥಿ ಆಗುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದ್ದರೂ ಕೇಂದ್ರ ನಾಯಕರ ಕೈಗೆ ಹಾಲಿ ಸಂಸದ ಅನಂತಕುಮಾರ್ ಹೆಗಡೆ ,ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ಹೆಸರನ್ನ ರಾಜ್ಯ ಬಿಜೆಪಿ ನಾಯಕರು ನೀಡಿದ್ದಾರೆ.ಹೀಗಾಗಿ ಯಾರಿಗೆ ಉತ್ತರದ ಹಕ್ಕು ಸಿಗುತ್ತೆ ಎನ್ನುವ ಕುತೂಹಲ ಮೂಡಿಸಿದೆ.

ಕೇಂದ್ರ ನಾಯಕರು ಈ ಭಾರಿ ಬ್ರಾಹ್ಮಣ ಜನಾಂಗದವರಿಗೇ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಲೋಕಸಭಾ ಟಿಕೆಟ್ ನೀಡುವ ಭರವಸೆ ನೀಡಿದೆ.

ಒಂದೆಡೆ ಹಾಲಿ ಸಂಸದ ಅನಂತಕುಮಾರ್ ಹೆಗಡೆ (mp ananthkumar hegde) ಮತ್ತೊಮ್ಮೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ರೆ, ಬಿಜೆಪಿಯಿಂದ ಯಾರು ನಿಂತರೂ ಗೆಲ್ಲುಬಹುದು ಎಂಬ ಕ್ಷೇತ್ರವಾಗಿರುವುದರಿಂದ ಆಕಾಂಕ್ಷಿಗಳ ಪಟ್ಟಿ ಸಹ ದೊಡ್ಡದಾಗಿತ್ತು. ಆದ್ರೆ ರಾಜ್ಯದಿಂದ ಮೂರು ಜನ ಬ್ರಾಹ್ಮಣ ನಾಯಕರ ಹೆಸರನ್ನು ಶಿಪಾರಸ್ಸು ಮಾಡಿದೆ.

ಹೀಗಾಗಿ ಸಂಘ ಪರಿವಾರದಿಂದ ಹರಿಪ್ರಕಾಶ ಕೋಣೆಮನೆ,ಕಾಗೇರಿ ಹೆಸರು ಶಿಪಾರಸ್ಸಾದರೇ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಹೆಸರನ್ನು ಬಿಜೆಪಿ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರು ಶಿಫಾರಸ್ಸು ಮಾಡಿದ್ದಾರೆ.

ವಿರೋಧಿ ಅಲೆ!

ಈ ಭಾರಿ ಸಂಸದ ಅನಂತಕುಮಾರ್ ಹೆಗಡೆಗೆ ಟಿಕೆಟ್ ನೀಡಬಾರದು ಬೇರೆಯವರಿಗೆ ನೀಡಬೇಕು ಎಂಬ ಕೂಗು ಹೆಚ್ಚಿದೆ. ಇದಲ್ಲದೇ ಮಾಜಿ ಶಾಸಕಿ ,ರೂಪಾಲಿ ನಾಯ್ಕ,ಮಾಜಿ ಶಾಸಕ ಸುನೀಲ್ ಹೆಗಡೆ,ಮಾಜಿ ಶಾಸಕ ಕಾಗೇರಿ ಸೇರಿದಂತೆ ಹಲವು ನಾಯಕರು ಹೆಗಡೆ ವಿರುದ್ಧ ಅಸಮಧಾನವನ್ನು ಪಕ್ಷದ ವರಿಷ್ಟರಲ್ಲಿ ತೋಡಿಕೊಂಡಿದ್ದಾರೆ. ಇದಲ್ಲದೇ ಕೇಂದ್ರ ನಾಯಕರು ಸಹ ಹೆಗಡೆ ವಿರುದ್ಧ ಅಸಮಧಾನವಿದೆ‌. ಹೀಗಾಗಿ ಹೆಗಡೆಗೆ ಟಿಕೆಟ್ ಸಿಗುವುದು ಅಷ್ಟು ಸುಲಭವಾಗಿಲ್ಲ.

ಇನ್ನು ಮೂರು ಜನ ಬ್ರಾಹ್ಮಣ ನಾಯಕ ಹೆಸರನ್ನು ಅಂತಿಮ ಹಂತದಲ್ಲಿ ಇಡಲಾಗಿದ್ದು ,ಈವರೆಗೂ ಯಾರು ಎಂದು ಫೈನಲ್ ಮಾಡಿಲ್ಲ.

ಒಂದುವೇಳೆ ಹೆಗಡೆಗೆ ಟಿಕೆಟ್ ನೀಡದಿದ್ದಲ್ಲಿ ಹರಿಪ್ರಕಾಶ್ ಕೋಣೆಮನೆ ಎರಡನೇ ಆಯ್ಕೆ ಆಗಿದ್ದು ,ಮೂರನೇ ಆಯ್ಕೆಯಲ್ಲಿ ಕಾಗೇರಿಯವರಿದ್ದಾರೆ.

ರಾಜ್ಯ ಬಿಜೆಪಿ ಶಿಫಾರಸ್ಸಿನಲ್ಲೇನಿದೆ?

ರಾಜ್ಯ ಬಿಜೆಪಿ ನಾಯಕರು ನೀಡಿರುವ ಪಟ್ಟಿಯಲ್ಲಿ ಕೆಲವು ಕ್ಷೇತ್ರದಲ್ಲಿ ಮೂರರಿಂದ ನಾಲ್ಕು ಅಭ್ಯರ್ಥಿಯನ್ನು ( candidate) ಶಿಫಾರಸ್ಸು ಮಾಡಿದರೇ ಕೆಲವು ಕ್ಷೇತ್ರಗಳಿಗೆ ಒಂದರಿಂದ ಎರಡು ಅಭ್ಯರ್ಥಿ ಸೂಚಿಸಿದ್ದಾರೆ.28 ಕ್ಷೇತ್ರದ ಬಹುಪಾಲು ಹಾಲಿ ಸಂಸದ ಹೆಸರನ್ನು ಶಿಫಾರಸು ಮಾಡಲಾಗಿದೆ.ಆದರೇ ಕ್ಷೇತ್ರದ ನಾಯಕರು, ಕಾರ್ಯಕರ್ತರ ಅಭಿಪ್ರಾಯ ದಲ್ಲಿ ಹಾಲಿ ಸಂಸದರಿಗೂ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎನ್ನುತ್ತದೆ ಮೂಲಗಳು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!