BREAKING NEWS
Search

Rameshwaram Cafe| ಬೆಂಗಳೂರಿನ ನಿಂದ ಭಟ್ಕಳಕ್ಕೆ ಆಗಮಿಸಿದ ಉಗ್ರ!

125

ಬಳ್ಳಾರಿ,ಮಾರ್ಚ ,07:- ಬೆಂಗಳೂರಿನ “ರಾಮೇಶ್ವರಂ ಕೆಫೆ”( Rameshwaram Cafe) ಬಾಂಬ್ ಬ್ಲಾಸ್ಟ್ ಪ್ರಕರಣದ ಮುಖ್ಯ ಆರೋಪಿ ಬೆಂಗಳೂರಿನಿಂದ ತುಮಕೂರು ನಂತರ ಬಳ್ಳಾರಿ ಗೆ ಬಸ್ ನಲ್ಲಿ ಆಗಮಿಸಿ ಬಳ್ಳಾರಿ ಮೂಲಕ ಮಂತ್ರಾಲಯಕ್ಕೆ ತೆರಳಿ ನಂತರ ಗೋಕರ್ಣದ ಬಸ್ ಮೂಲಕ ಭಟ್ಕಳಕ್ಕೆ ಪ್ರಾಯಾಣ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.

ಈ ಕುರಿತು ಮಾಹಿತಿ ಕಲೆಹಾಕಿರುವ ಪೊಲೀಸರು (police) ಭಟ್ಕಳದಲ್ಲಿ ಮಾಹಿತಿ ಕಲೆಹಾಕುತಿದ್ದಾರೆ. ಈ ಬಗ್ಗೆ ನಿನ್ನೆಯೇ ಕೌಂಟರ್ ಇನಟಲಜನ್ಸಿ ಅಧಿಕಾರಿಗಳು ಆಗಮಿಸಿ ತನಿಖೆ ಕೈಗೊಂಡಿದ್ದರು.

ಭಟ್ಕಳಕ್ಕೆ ಯಾಕೆ?

ಆರೋಪಿ ಪ್ರತಿ ದಿನ ಟ್ರಾವೆಲ್ ಮಾಡುತಿದ್ದಾನೆ. ರಾಜ್ಯದ ಗಡಿ ದಾಟುವ ಪ್ರಯತ್ನದಲ್ಲಿ ಮೊದಲು ಬಳ್ಳಾರಿಗೆ ನಂತರ ಮಂತ್ರಾಲಯಕ್ಕೆ ಹೋಗಿ ಅಲ್ಲಿಂದ ಗೋಕರ್ಣ ಬಸ್ ಮೂಲಕ ಭಟ್ಕಳ (Bhatkal)ಕ್ಕೆ ಹೋಗಿದ್ದು ನಂತರ ಉಡುಪಿ ಮೂಲಕ ಮಂಗಳೂರಿಗೆ ತೆರಳಿ ಗಡಿ ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ.

ಆದ್ರೆ ಭಟ್ಕಳ ನಗರ ಮುಸ್ಲಿಂ ಬಾಹ್ಯದ ಜೊತೆ ಟೆರರಿಸ್ಟ್ ಲಿಂಕ್ ಇರುವುದರಿಂದ ಆತನಿಗೆ ಆಶ್ರಯ ನೀಡುವವರು ಯಾರಾದ್ರು ಇರಬಹುದೇ ಎಂಬ ಸಂಶಯವೂ ಮೂಡಿದೆ. ಹೀಗಾಗಿ ಎಲ್ಲಾ ದಿಕ್ಕಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!