Sirsi uttrakannada news

Sirsi| ನಗರಸಭೆ ವಾಹನ ಹರಿದು ಶಿಕ್ಷಕಿ ಸಾವು

155

ಕಾರವಾರ: ಬೈಕ್‌‌ಗೆ (byke)ನಗರಸಭೆ ವಾಹನ ಡಿಕ್ಕಿಯಾದ ಪರಿಣಾಮ ಶಿಕ್ಷಕಿ (teacher) ಸ್ಥಳದಲ್ಲೇ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಿರ್ಜಾನಕರ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ.

ವಿಜಯಾ ಮಾಸ್ತೆಪ್ಪ ಭೋವಿ(40) ಮೃತ ದುರ್ದೈವಿಯಾಗಿದ್ದು ತಾಲ್ಲೂಕಿನ ಬಂಡಲದ ಬಡಗಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದರು.

ಗಂಡನ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದ ಶಿಕ್ಷಕಿಗೆ ಬೈಕ್‌ಗೆ ನಗರಸಭೆಯ ತ್ಯಾಜ್ಯ ತುಂಬುವ ಟ್ರಕ್ ಬಡಿದು ಕೆಳಗೆ ಬಿದ್ದಿದ್ದು ತಲೆ ಮೇಲೆ ಟ್ರಕ್ ಹತ್ತಿದ ಪರಿಣಾಮ ಶಿಕ್ಷಕಿ ಸ್ಥಳದಲ್ಲೇ ಸಾವು ಕಂಡಿದ್ದಾರೆ.

ಸ್ಥಳಕ್ಕೆ ನಗರ ಠಾಣೆಯ ಪೊಲೀಸ್ ಭೇಟಿ ಪರಿಶೀಲನೆ ನಡೆಸಿದ್ದು ಶಿರಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!