ಕಾರವಾರ:- ಪ್ರೀತಿ ಅನ್ನೋದು ಮಾಯೆ ಆದ್ರೆ ಹಣಕ್ಕಾಗಿ ಪರಸಂಗ ಮಾಡಿದರೇ ಏನಾಗುತ್ತದೆ ಎನ್ನುವುದಕ್ಕೆ ಕಾರವಾರದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ.
ಹೌದು ಕಾರವಾರದ ಕಾಜುಭಾಗದಲ್ಲಿ ನಿನ್ನೆ ರಾತ್ರಿ 9.30ರಿಂದ 10 ಗಂಟೆ ನಡುವೆ ಯುವತಿಯೊಬ್ಬಳಿಗೆ ನಂದನಗದ್ದಾ ನಿವಾಸಿ, ಆಟೋಚಾಲಕ ರವಿಶಂಕರ್ (42) ಅಲಿಯಾಸ್ ಕಟ್ಟಪ್ಪ ಎಂಬಾತ ಚಾಕು ಇರಿದು ಹತ್ಯೆಗೆ ಯತ್ನಿಸಿದ್ದಾನೆ.
ಇದನ್ನೂ ಓದಿ:-Lokayukta ride|ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಉನ್ನತ ಅಧಿಕಾರಿಗಳ ಮನೆಯ ಮೇಲೆ ಲೋಕಾಯುಕ್ತ ದಾಳಿ.
ಈ ವೇಳೆ ಅದೃಷ್ಟವಶಾತ್ ಆ ಯುವತಿಯನ್ನು ಕಾರವಾರದ ಆಸ್ಪತ್ರೆಗೆ ಸಾಗಿಸಿದ್ದರಿಂದ ಬದಕುಳಿದಿದ್ದಾಳೆ.
ಕಾಜುಬಾಗದ ಯುವತಿ ನಂದನಗದ್ದಾದ ವಿವಾಹಿತ ಆಟೋ ಚಾಲಕ ರವಿಶಂಕರ್ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಳು. ಮದುವೆಯಾಗಿ ಮಕ್ಕಳಿದ್ದ ಶಂಕರ್ 26 ರ ಹಸಿ ಮುದ್ದೆಯ ಸುಂದರ ಹುಡುಗಿ ಸಿಕ್ಕಿದ್ದರಿಂದ ತನ್ನ ಕೈಯಲ್ಲಿದ್ದ ಹಣವನ್ನೆಲ್ಲಾ ಈ ಸುಂದರಿಗಾಗಿ ಕರ್ಚು ಮಾಡಿದ್ದ. ಆಕೆಯೂ ಹಸಿ ಮುದ್ದೆ ತೋರಿಸಿ ಎಷ್ಟು ಬಾಚಬೇಕು ಅಷ್ಟು ಬಾಚಿಕೊಂಡಿದ್ದಳು. ವಾರದಲ್ಲಿ ಮೂರು ದಿನ ಸ್ವರ್ಗ ಸುಖ ತೋರಿಸುತಿದ್ದ ಈ ಯುವತಿಗೆ ಆತ ಪಾಗಲ್ ಆಗಿದ್ದ. ಆದ್ರೆ ಆಕೆ ಈತನ ಹಣಕ್ಕಾಗಿ ಜೋತು ಬಿದ್ದಿದ್ದಳು. ಕೆಲವು ವರ್ಷ ಗಪ್ ಚುಪ್ ನಂತೆ ಎಲ್ಲಾ ಸರಿಯಿತ್ತು. ಎಲ್ಲಿ ಆಕೆಗೆ ಕರ್ಚು ಮಾಡುವ ಮತ್ತೊಬ್ಬ ಹುಡುಗ ಸಿಕ್ಕನೋ ಈತನನ್ನು ದೂರ ಮಾಡಿದ್ದಾಳೆ.
ಕೆಲವು ತಿಂಗಳಿಂದ ಮುದ್ದೆ ಮುರಿಯಲು ಅವಕಾಶ ಸಿಗದಿದ್ದಕ್ಕೆ ಸಿಟ್ಟಾಗಿದ್ದ ಶಂಕರ್ ಅಲಿಯಾಸ್ ಕಟ್ಟಪ್ಪ ಈಕೆಗೆ ಕರೆ ಮಾಡಿ ನೀನು ಬೇಕು ಎಂದು ಹಟ ಹಿಡಿದಿದ್ದ ,ಆದ್ರೆ ಆಕೆ ತನ್ನ ಹೊಸ ಜೀವನವನ್ನು ಕಂಡುಕೊಳ್ಳಲು ಸಿದ್ದವಾಗಿದ್ದರಿಂದ ಈತನನ್ನು ದೂರ ಇಟ್ಟಳು. ಆದರೂ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದ್ದು ನಿನಗಾಗಿ ಇಷ್ಟೆಲ್ಲಾ ಕರ್ಚುಮಾಡಿ ಈಗ ದೂರ ಸರಿಸುತ್ತೀಯಾ ಎಂದು ಕೋಪದಲ್ಲಿ ರಾತ್ರೋ ರಾತ್ರಿ ಮನೆಗೆ ತೆರಳಿ ಚಾಕು ಇರಿದಿದ್ದಾನೆ.
ಕಾರವಾರ ಪೊಲೀಸರು (Karwar police) ಶಂಕರ್ ಅಲಿಯಾಸ್ ಕಟ್ಟಪ್ಪನನ್ನು ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಯುವತಿ ಚಾಕು ಇರಿತದಿಂದ ಕಾರವಾರದ ಕಿಮ್ಸ್ ಆಸ್ಪತ್ರೆಯ ಐಸಿಯು ನಲ್ಲಿ ಜೀವನ್ಮರಣದ ಹೋರಾಟ ನಡೆಸುತಿದ್ದಾಳೆ.
ಹಣದ ಆಸೆಗೆ ಪರ ಸಂಘ ,ಪತ್ನಿ ಇದ್ದರೂ ಬೇರೊಬ್ಬಳ ಜೊತೆ ಸಂಬಂಧ ಮಾಡಿದರೇ ಏನಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.






