Sirsi mari jathre Sirsi marekhamba temple festival

Sirsi| ತೆಂಗಿನಕಾಯಿ ಮಳಿಗೆಗೆ ದಿನಕ್ಕೆ 1 ಲಕ್ಷ ಬಾಡಿಗೆ

226

ಕಾರವಾರ :- ರಾಜ್ಯದ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ (sirsi marikama temple) ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು ಈಗಾಗಲೇ ಧಾರ್ಮಿಕ ವಿಧಿ ಕಾರ್ಯಗಳು ಪ್ರಾರಂಭವಾಗಿದೆ ನಾಳೆಯಿಂದ 9 ದಿನಗಳ ಕಾಲ ಈ ಜಾತ್ರೆ ನೆಡೆಯಲಿದ್ದು ಜಾತ್ರಾ (festival )ಮಹೋತ್ಸವದ ಹಿನ್ನಲೆಯಲ್ಲಿ ಶಿರಸಿಯಲ್ಲಿ ನಗರಸಭೆ ಹಾಗೂ ಮಾರಿಕಾಂಬಾ ದೇವಸ್ಥಾನ ಕಮಿಟಿಯಿಂದ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ.

ದೇವಸ್ಥಾನದ (temple management commity )ಆಡಳಿತ ಮಂಡಳಿಯಿಂದ ಒಟ್ಟು 500 ಮಳಿಗೆಗಳನ್ನು ( commercial tent) ಹರಾಜು ಹಾಕಲಾಯಿತು.

ಮೊದಲು ಒಂದು ಮಳಿಗೆ ದಿನಕ್ಕೆ 25 ಸಾವಿರ ನಿಗಧಿ ಮೊತ್ತದಿಂದ ಹರಾಜುಗೊಂಡರೇ 200 ಕ್ಕೂ ಹೆಚ್ಚು ಮಳಿಗೆಗಳು 9 ದಿನಗಳವರೆಗೆ ಎರಡು ಲಕ್ಷಕ್ಕೂ ಹೆಚ್ಚು ಬಾಡಿಗೆ ಹರಾಜು ಗೊಂಡಿತು.ಇನ್ನು ಮನೋರಂಜನೆ ಗಾಗಿ ಮೀಸಲಿಟ್ಟ ವಾಣಿಜ್ಯ ಮಳಿಗೆಗಳು ಒಂದಕ್ಕೆ 70 ಲಕ್ಷಕ್ಕೆ ಹರಾಜುಗೊಂಡಿತು. ಇನ್ನು ಅತೀ ಹೆಚ್ಚು ಎಂದರೇ ಮಾರಿಕಾಂಬಾ ದೇವಿ ಗದ್ದುಗೆ ಬಳಿ ಇರುವ ತೆಂಗಿನಕಾಯಿ ಮಳಿಗೆಯೊಂದು ಒಂಬತ್ತು ದಿನಕ್ಕೆ 9 ಲಕ್ಷಕ್ಕೆ ಹರಾಜು ಗೊಂಡಿತು. ಈ ಮೂಲಕ ಮಾರಿಕಾಂಬಾ ದೇವಸ್ಥಾನ ಕಮಿಟಿ 300 ಕೋಟಿಗೂ ಹೆಚ್ಚು ಮೊತ್ತವನ್ನು ಮಳಿಗೆಯಿಂದ ಲಾಭ ಮಾಡಿದರೇ ನಗರಸಭೆ ವತಿಯಿಂದ ಹರಾಜುಗೊಂಡ ಮಳಿಗೆಗಳು ಒಟ್ಟು 70 ಲಕ್ಷಕ್ಕೆ ಹರಾಜುಗೊಂಡಿತು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!